ದಿನದ ಅಪರಾಧಗಳ ಪಕ್ಷಿನೋಟ 15 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 14.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮರೇಶ ಬಿನ್ ಶ್ರೀನಿವಾಸಾಚಾರಿ, ವೇಣುಗೋಪಾಲಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಸ್ನೇಹಿತನಾದ ವೇಣುಗೋಪಾಲಪುರ ಗ್ರಾಮದ ವಾಸಿ ವೆಂಕಟರಾಮ್ @ ರಹಮತ್ ಎಂಬುವರು ಪೆಂಡಾಲ್ ಮತ್ತು ಪಾತ್ರೆ ಅಂಗಡಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ದಿನಾಂಕ 14.01.2021 ರಂದು ರಾತ್ರಿ 8.00 ಗಂಟೆಯಲ್ಲಿ ದೂರುದಾರರು ಮತ್ತು ವೆಂಕಟರಾಮ್ @ ರಹಮತ್, ಹೇಮಂತ್, ಬಾಲರಾಜ್, ಅಶೋಕ ಎಂಬುವರು ನಾಯಕರಹಳ್ಳಿಯಲ್ಲಿ ಪೆಂಡಾಲ್ ಹಾಕಿದ್ದ ಸ್ಥಳಕ್ಕೆ ಬಂದು ಪೆಂಡಾಲ್ ನ್ನು ಬಿಚ್ಚುತ್ತಿದ್ದಾಗ, ಅಶೋಕ್ ಎಂಬುವರು  ಕಬ್ಬಿಣದ ರಾಡ್ ನಿಂದ ಯಾವುದೋ ಹಳೆಯ ದ್ವೇಷದಿಂದ ವೆಂಕಟರಾಮ್ @ ರಹಮತ್ ನ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಕೆಳಗೆ ಬಿದ್ದಾಗ ಪುನಃ ರಾಡ್ ನಿಂದ ವೆಂಕಟರಾಮ @ ರಹಮತ್ ನ ಮುಖದ ಮೇಲೆ ಎರಡು-ಮೂರು ಬಾರಿ ಹೊಡೆದು ಕೊಲೆ ಮಾಡಿರುತ್ತಾರೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಜಿತ್‌ಕುಮಾರ್‍ ಬಿನ್ ಬಾಬು, ವಿಜಯನಗರ, ಬೆಮೆಲ್ ನಗರ, ಬಂಗಾರಪೇಟೆ ರವರು ದಿನಾಂಕ 13.01.2021 ರಂದು ಸಂಜೆ 6.15 ಗಂಟೆಯಲ್ಲಿ  ದ್ವಿಚಕ್ರ ವಾಹನ ಡ್ಯೂಕ್ ಸಂಖ್ಯೆ ಕೆಎ-08-ವೈ-4895 ನ್ನು  ಅಜ್ಜಪ್ಪನಹಳ್ಳಿ ರಸ್ತೆಯ ಮಲ್ಲೆಂಗೂರು ಕ್ರಾಸ್ ಸಮೀಪ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಆಗಿ ದ್ವಿಚಕ್ರ ವಾಹನ ಸಮೇತ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

ದೊಂಬಿ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ತಮ್ಮೇಗೌಡ ಬಿನ್ ಮುನಿವೆಂಕಟಪ್ಪ, ನಾಯಕರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ 14.01.2021 ರಂದು ರಾತ್ರಿ ವೇಣುಗೋಪಾಲಪುರ ಗ್ರಾಮದ ವೆಂಕಟರಾಮ್ @ ರಹಮತ್ ಎಂಬುವರನ್ನು ನಾಯಕರಹಳ್ಳಿ ಗ್ರಾಮದ ಅಶೋಕ್ ಎಂಬುವರು ಕೊಲೆ ಮಾಡಿರುವ ವಿಚಾರದಲ್ಲಿ ವೇಣುಗೋಪಾಲಪುರ ಗ್ರಾಮದ ರವಿ, ನಾರಾಯಣಸ್ವಾಮಿ, ತರುಣ್, ಬಾಬು, ಮಂಜುನಾಥ, ಅನಂತಪ್ಪ, ಹರೀಶ್, ಹೇಮಂತ್, ಶ್ರೀಧರ್, ನಾಗೇಶ್, ರಾಜೇಶ್ ಹಾಗೂ ಇತರೆ ಹತ್ತರಿಂದ ಹದಿನೈದು ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆಗಳನ್ನು, ರಾಡುಗಳನ್ನು, ಕಲ್ಲುಗಳನ್ನು ಹಿಡಿದುಕೊಂಡು ರಾತ್ರಿ 8.45 ಗಂಟೆಗೆ ದೂರುದಾರರ ಮನೆಯ ಬಳಿ ಬಂದು, ಮನೆಯ ಬಳಿ ನಿಲ್ಲಿಸಿದ್ದ ಟವೇರಾ ಕಾರ್ ಸಂಖ್ಯೆ ಕೆಎ-04-ಎಂಜಿ-7115 ರ ವಾಹನವನ್ನು ಕಲ್ಲು, ರಾಡು, ದೊಣ್ಣೆಗಳಿಂದ ಹೊಡೆದು ಜಖಂಗೊಳಿಸಿ ನಷ್ಟವುಂಟು ಮಾಡಿ, ವೆಂಕಟರಾಮಪ್ಪ ಎಂಬುವರ ದ್ವಿಚಕ್ರ ವಾಹನ ಟಿವಿಎಸ್ ಸೂಪರ್ ಎಕ್ಸೆಲ್ ಸಂಖ್ಯೆ ಕೆಎ-08-ಜೆ-755 ರ ವಾಹನ ಹಾಗೂ ದೂರುದಾರರ ಅಣ್ಣ ಸೊಣ್ಣಪ್ಪ ರವರ ಮನೆಯ ಹತ್ತಿರ ಹೋಗಿ ಮನೆಯ ಮುಂದೆ ನಿಲ್ಲಿಸಿದ್ದ ಕರೀಷ್ಮಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-53-ಇಬಿ-5126 ರ ವಾಹನಕ್ಕೆ ಬೆಂಕಿ ಅಂಟಿಸಿ ಸುಟ್ಟುಹಾಕಿ ನಷ್ಟವನ್ನುಂಟು ಮಾಡಿರುತ್ತಾರೆ. ನಂತರ ಆರೋಪಿಗಳೆಲ್ಲರೂ ನಾಯಕರಹಳ್ಳಿ ಗ್ರಾಮದವರನ್ನು ಕೆಟ್ಟಮಾತುಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ರಾಮಪ್ಪ, ನಾಯಕರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ 14.01.2021 ರಂದು ರಾತ್ರಿ ವೇಣುಗೋಪಾಲಪುರ ಗ್ರಾಮದ ವೆಂಕಟರಾಮ್ @ ರಹಮತ್ ಎಂಬುವರನ್ನು ನಾಯಕರಹಳ್ಳಿ ಗ್ರಾಮದ ಅಶೋಕ್ ಎಂಬುವರು ಕೊಲೆ ಮಾಡಿರುವ ವಿಚಾರದಲ್ಲಿ ವೇಣುಗೋಪಾಲಪುರ ಗ್ರಾಮದ ವಾಸಿಗಳಾದ ರವಿ, ನಾರಾಯಣಸ್ವಾಮಿ, ತರುಣ್, ಬಾಬು, ಮಂಜುನಾಥ, ಅನಂತಪ್ಪ, ಹರೀಶ್, ಹೇಮಂತ್, ಶ್ರೀಧರ್, ನಾಗೇಶ್, ರಾಜೇಶ್ ಹಾಗೂ ಇತರೆ ಹತ್ತರಿಂದ ಹದಿನೈದು ಜನರು ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆಗಳನ್ನು, ರಾಡುಗಳನ್ನು, ಕಲ್ಲುಗಳನ್ನು ಹಿಡಿದುಕೊಂಡು ರಾತ್ರಿ 9.00 ಗಂಟೆಗೆ ದೂರುದಾರರ ಮನೆಯ ಬಳಿ ಬಂದು, ಮನೆಯ ಬಾಗಿಲನ್ನು ಆಯುಧಗಳಿಂದ ಹೊಡೆದು, ನಷ್ಟವನ್ನುಂಟು ಮಾಡಿ, ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಟಿವಿಎಸ್ ಸೂಪರ್ ಎಕ್ಸೆಲ್ ಸಂಖ್ಯೆ ಕೆಎ-08-ಕೆ-9273 ರ ವಾಹನ ಹಾಗೂ ದೂರುದಾರರ ಮನೆಯ ಸಮೀಪ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಸಂಖ್ಯೆ ಕೆಎ-03-ಜೆಜಿ-9 ರ ದ್ವಿಚಕ್ರ ವಾಹನಗಳಿಗೆ ಬೆಂಕಿ ಅಂಟಿಸಿ ಸುಟ್ಟು ಹಾಕಿ, ವಸಂತಪ್ಪ ಎಂಬುವರ ಮನೆಯ ಬಳಿ ನಿಲ್ಲಿಸಿದ್ದ ಸ್ವಿಪ್ಟ್ ಕಾರ್ ಸಂಖ್ಯೆ ಕೆಎ-08-ಎಂ-6518 ರ ವಾಹನಕ್ಕೆ ದೊಣ್ಣೆ, ಕಲ್ಲುಗಳಿಂದ, ರಾಡುಗಳಿಂದ ಕಾರ್ ನ ಡೋರ್ ಗಳಿಗೆ ಹಾಗೂ ಇತರೆ ಭಾಗಗಳಿಗೆ ಹೊಡೆದು ನಷ್ಟವನ್ನುಂಟು ಮಾಡಿರುತ್ತಾರೆ.

Leave a Reply

Your email address will not be published. Required fields are marked *