ದಿನದ ಅಪರಾಧಗಳ ಪಕ್ಷಿನೋಟ 15 ನೇ ಡಿಸೆಂಬರ್‌ 2019

 – ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀಮತಿ ಶ್ರೀಲಕ್ಷ್ಮಿ ಕೋಂ  ರಾಜೇಶ್ , ಸಂಗನಹಳ್ಳಿ ಗ್ರಾಮ ರವರು ಗಂಡ ರಾಜೇಶ್ ರವರೊಂದಿಗೆ ಕಾರಹಳ್ಳಿ ಗ್ರಾಮದಿಂದ ದಿನಾಂಕ 08.09.2019 ರಂದು ಸಂಜೆ 4.00 ಗಂಟೆಯಲ್ಲಿ ದೂರುದಾರರ ತವರು ಮನೆಯಾದ ಸಂಗನಹಳ್ಳಿ ಗ್ರಾಮಕ್ಕೆ ಹೋಗಿ, ದಿನಾಂಕ 09.12.2019 ರಂದು ಮದ್ಯಾಹ್ನ 1.45 ಗಂಟೆಯಲ್ಲಿ ರಾಜೇಶ್ ರವರು ಯಾರೋ ಹಣ ಕೊಡಬೇಕು, ತೆಗೆದುಕೊಂಡು ಬರುತ್ತೇನೆ ಎಂದು ದೂರುದಾರರಿಗೆ  ಹೇಳಿ  ದ್ವಿ ಚಕ್ರ ವಾಹನದಲ್ಲಿ ಹೋದವರು ಇದುವೆರೆಗೂ ಮನೆಗೆ ಬರೆದೆ ಕಾಣೆಯಾಗಿರುತ್ತಾನೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿಕೃಷ್ಣ ಬಿನ್‌ ಹನುಮಪ್ಪ ಸಂಗನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ, ಹನುಮಪ್ಪನಿಗೆ ಹೊಟ್ಟೆ ನೋವು ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ವಾಸಿಯಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ 14.12.2019 ರಂದು ಬೆಳಿಗ್ಗೆ  ಹನುಮಪ್ಪ, 62 ವರ್ಷ ರವರು ಅವರ ಹೊಲದ ಬಳಿ ಆಲದ ಮರದಲ್ಲಿ  ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ.

 

Leave a Reply

Your email address will not be published. Required fields are marked *