ದಿನದ ಅಪರಾಧಗಳ ಪಕ್ಷಿನೋಟ 15 ನೇ ಸೆಪ್ಟೆಂಬರ್‌ 2019

– ಕೊಲೆ ಪ್ರಯತ್ನ: 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಚಂದ್ರಕಾಂತ ಕೊಂ ದಕ್ಷಿಣಮೂರ್ತಿ, ನಾರ್ಥ್ ಗಿಲ್ಬರ್ಟ್ಸ್, ಮಾರಿಕುಪ್ಪಂ ಕೆ.ಜಿ.ಎಫ್ ರವರ ಮಗನಾದ ರಾಹುಲ್ ರವರು ದಿನಾಂಕ 14.09.2019 ರಂದು ರಾತ್ರಿ 9.45 ಗಂಟೆಗೆ ಟಿ.ಎಸ್. ಮಣಿ ಮನೆಯ ಮುಂಬಾಗ ಹೋಗುತ್ತಿದ್ದಾಗ, ದಿಲೀಪ್, ನಂದಕುಮಾರ್‌, ಕಾರ್ತಿಕ್ ಮತ್ತು ಇತರರು ಹಳೇ ದ್ವೇಷವನ್ನಿಟ್ಟುಕೊಂಡು ರಾಹುಲ್ ರವರನ್ನು ಅಡ್ಡಗಟ್ಟಿ  ಲಾಂಗ್ ಮತ್ತು ಕತ್ತಿಗಳಿಂದ ಹೊಡೆದು ರಕ್ತಗಾಯ ಪಡೆಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರುಹೀಲಾ ಕೌಸರ್‌ ಕೊಂ ಶಹಬಾಜ್ ಖುರೇಷಿ, ಬೌರಿಲಾಲ್‌ಪೇಟೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್  ರವರು ದಿನಾಂಕ 20.10.2018 ರಂದು  ಶಹಬಾಜ್ ಖುರೇಷಿ ರವರೊಂದಿಗೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ  ದೂರುದಾರರಿಗೆ ಬಂಗಾರ ಓಲೆ, ಬಂಗಾರ ನಕ್ಲೀಸ್ ಮತ್ತು ಬೆಳ್ಳಿ ಕಾಲು ಚೈನುಗಳನ್ನು ಮತ್ತು ಗಂಡನಿಗೆ ಬಂಗಾರದ ಕತ್ತಿನ ಸರ ಮತ್ತು ಉಂಗುರ ಹಾಕಿದ್ದು, ಮದುವೆಯಾದ ನಂತರ ಶಹಬಾಜ್‌, ರಬಿಯಾ, ಜಬೀವುಲ್ಲಾ, ಹರ್ಶಿಯಾಬಾನು ಮತ್ತು ಸುಹೇಬ್‌ ರವರು ರವರು ದೂರುದಾರರಿಗೆ ತವರು ಮನೆಯಿಂದ 5 ಲಕ್ಷ ಹಣ ಮತ್ತು ಶಿಪ್ಟ್ ಕಾರನ್ನು ಹೆಚ್ಚಿಗೆ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ, ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನನ್ನು ಮನೆಗೆ ಸೇರಿಸುವುದಿಲ್ಲವೆಂದು ಬ್ಶೆದು ಕಿರುಕುಳ ನೀಡುತ್ತಿದ್ದು, ದಿನಾಂಕ.28.01.2019 ರಂದು ವರದಕ್ಷಿಣೆ ತರಲಿಲ್ಲವೆಂದು ಹೇಳಿ ದೂರುದಾರರನ್ನು ಮನೆಯಿಂದ ಆಚೆ ತಳ್ಳಿದ್ದು, ಈ ವಿಚಾರವಾಗಿ ನ್ಯಾಯ ಪಂಚಾಯ್ತಿ ಮಾಡಿದಾಗ 3 ತಿಂಗಳೊಳಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋದ ಆರೋಪಿಗಳು ಮೂರು ತಿಂಗಳಾದರೂ ಕರೆದುಕೊಂಡು ಹೋಗದೇ ಇದ್ದು, ದೂರುದಾರರು ಗಂಡನ ಮನೆಗೆ ಹೋಗಿ ಕರೆದುಕೊಳ್ಳುವಂತೆ ಕೇಳಲಾಗಿ ಕೆಟ್ಟಮಾತುಗಳಿಂದ ಬೈದು ಕಳುಹಿಸಿರುತ್ತಾರೆ.

Leave a Reply

Your email address will not be published. Required fields are marked *