ದಿನದ ಅಪರಾಧಗಳ ಪಕ್ಷಿನೋಟ 15 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:14.07.2019 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮರೇಶ್ ಬಿನ್ ವೆಂಕಟಸ್ವಾಮಪ್ಪ, ಮರಗಲ್ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಹೀರೋ ಹೊಂಡಾ ಸ್ಲೆಂಡರ್+ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ.08-ಕೆ-8965 ನ್ನು ದಿನಾಂಕ: 01/07/2019 ರಂದು ಸಂಜೆ 6.30 ಗಂಟೆಯಲ್ಲಿ ಬಾಲ ಮುರುಗನ್ ಕಲ್ಯಾಣ ಮಂಟಪದ ಮುಂಭಾಗ ಇರುವ ತಮ್ಮ ಕಛೇರಿಯ ಮುಂಭಾಗ ನಿಲ್ಲಿಸಿ, ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 8.00 ಗಂಟೆಯಲ್ಲಿ ಕಛೇರಿಯಿಂದ ಹೊರಗೆ ಬಂದು  ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

–ಅಪಹರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರತ್ನಮ್ಮ ಕೊಂ ನಾಗರಾಜಪ್ಪ, ನೇರಳಕೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ಮನೆಯ ಬಳಿ ದಿನಾಂಕ 12.07.2019 ರಂದು ರಾತ್ರಿ 11.20 ಗಂಟೆಗೆ ಎಸ್.ಜಿ. ಕೋಟೆ ಗ್ರಾಮದ ಲಕ್ಷ್ಮೀಕಾಂತ ಮತ್ತು ಆತನ ಜೊತೆಯಲ್ಲಿ 3 ಜನ ಅಪರಿಚಿತ ವ್ಯಕ್ತಿಗಳು ಹೋಗಿ, ದೂರುದಾರರ ಮಗ ದನಂಜಯ ರವರನ್ನು ಕರೆದುಕೊಂಡು ಹೋಗಿದ್ದು, ದನಂಜಯ ರವರು ವಾಪಸ್ ಬರದೇ ಇದ್ದು, ಯಾರೋ ಅಪರಿಚಿತರು ಅಪಹರಣ ಮಾಡಿರುತ್ತಾರೆಂದು ಅನುಮಾನವಿರುತ್ತದೆಂದು ದೂರು.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪಾರ್ವತಮ್ಮ ಕೊಂ ಕೃಷ್ಣನ್, ಗೋಣಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಮೊಮ್ಮಗನಾದ ಶಬರೀಷ್, 21 ವರ್ಷ ರವರು ದಿನಾಂಕ 12-07-2019 ರಂದು ರಾತ್ರಿ ದೂರುದಾರರ ಮನೆಯಲ್ಲಿ ಮಲಗಿರುವಾಗ, ರಾತ್ರಿ 12-00 ಗಂಟೆಯಲ್ಲಿ ಮನೆಯ ಬಾಗಿಲನ್ನು ತಟ್ಟುವ ಶಬ್ಧ ಕೇಳಿ ಬಂದಿದ್ದು, ದೂರುದಾರರು ಮತ್ತು ಶಬರೀಷ್ ರವರು ಬಾಗಿಲನ್ನು ತೆಗೆಯುವಷ್ಟರಲ್ಲಿ ಯಾರೋ  25 ರಿಂದ 30 ವರ್ಷ ವಯೋಮಾನದ 03 ಜನರು ಶಬರೀಷ ರವರ ಜೊತೆ ಮಾತನಾಡಬೇಕು ಎಂದು ಯಾವುದೋ ಉದ್ದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿರುತ್ತಾರೆ. 

Leave a Reply

Your email address will not be published. Required fields are marked *