ದಿನದ ಅಪರಾಧಗಳ ಪಕ್ಷಿನೋಟ 15 ನೇ ಜೂನ್‌ 2019

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ  ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಗೋವಿಂದಪ್ಪ, ಎಂಆರ್‌.ಕೊತ್ತೂರು ಗ್ರಾಮ ರವರ ಮಗಳಾದ ಕು// ಹೇಮಾವತಿ ರವರು ದಿನಾಂಕ 13.06.2019 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

 

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.06.2019 ರಂದು ಬೆಳಿಗ್ಗೆ ಸುಮಾರು 9.30 ಗಂಟೆಯಲ್ಲಿ ದೂರುದಾರರಾದ ವೆಂಕಟರಾಜು, ಆಲಂಬಾಡಿ ಗ್ರಾಮ ಬಂಗಾರಪೇಟೆ ವಾಸಿ ರವರ  ಹೆಂಡತಿಯಾದ ಭಾಗ್ಯಲಕ್ಷ್ಮಿ, 27 ವರ್ಷ ರವರು, ಆಕೆಯ ತವರೂರಾದ ಕೋಲಾರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *