ದಿನದ ಅಪರಾಧಗಳ ಪಕ್ಷಿನೋಟ 15 ನೇ ಮೇ 2019

– ಕೊಲೆ ಪ್ರಯತ್ನ :   01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟಪ್ಪ ಬಿನ್ ಮುನಿಯಪ್ಪ, ಕದರೀಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಮತ್ತು ಆರೋಪಿ ನಾರಾಯಣಸ್ವಾಮಿ ರವರಿಗೆ ಸುಮಾರು ವರ್ಷಗಳಿಂದ ವೈಮನಸ್ಸುಗಳಿದ್ದು, ದಿನಾಂಕ 13.05.2019 ರಂದು ಸಂಜೆ 5.00 ಗಂಟೆಯಲ್ಲಿ ದೂರುದಾರರು ರಸ್ತೆಯಲ್ಲಿ ನಿಂತಿದ್ದಾಗ,  ಗಣೇಶ್ ಮತ್ತು ನಾರಾಯಣಸ್ವಾಮಿ ರವರು ದ್ವಿಚಕ್ರವಾಹನಗಳಲ್ಲಿ ಬಂದಿದ್ದು, ದೂರುದಾರರು ಗಣೇಶ್ ರವರ ವಾಹನದಲ್ಲಿ ಹತ್ತಿ ಹೋಗುತ್ತಿರಲು ನಾರಾಯಣಸ್ವಾಮಿ ರವರು ಕೆಟ್ಟಮಾತುಗಳಿಂದ ಬೈದು, ದೂರುದಾರರು ವಾಹನದಿಂದ ಕೆಳಗೆ ಇಳಿಯುವಷ್ಟರಲ್ಲಿ ನಾರಾಯಣಸ್ವಾಮಿ ಕೊಲೆ ಮಾಡುವ ಉದ್ದೇಶದಿಂದ ಆತನ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿ ದೂರುದಾರರು ಇಳಿಯುತಿದ್ದ ವಾಹನಕ್ಕೆ ಡಿಕ್ಕಿಪಡಿಸಿದ್ದು, ದೂರುದಾರರ ತಲೆಗೆ ಬಾರಿ ರಕ್ತ ಗಾಯವಾಗಿರುತ್ತೆ.

 

ಕನ್ನ ಕಳುವು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02  ಕನ್ನ ಕಳುವು ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಪ್ರೇಮಲತಾ ಕೊಂ ರವಿ, ಶಾಂತಿನಗರ, ಬಂಗಾರಪೇಟೆ ರವರು ದಿನಾಂಕ: 10.05.2019 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ತಮಿಳುನಾಡಿನ ಪಚ್ಚೂರಿಗೆ ಹೋಗಿದ್ದು, ನಂತರ ದಿನಾಂಕ: 14.05.2019 ರಂದು ಬೆಳಿಗ್ಗೆ 7.00 ಗಂಟೆಗೆ ಮನೆಗೆ ಬಂದು ನೋಡಲಾಗಿ, ಮನೆಯ ಗೇಟ್ ಮತ್ತು ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ  ಮನೆಯ ಒಳಗೆ ಹೋಗಿ, ರೂಂನಲ್ಲಿದ್ದ ಬೀರುವಿನ ಬಾಗಿಲು ತೆಗೆದು 1) ಒಂದು ಬಂಗಾರದ ಹಾರ ಸುಮಾರು 38 ಗ್ರಾಂ 2) ಬಂಗಾರದ 5 ಕಾಯಿನ್‌ಗಳು – ಸುಮಾರು 18 ಗ್ರಾಂ 3) ಬಂಗಾರದ ಓಲೆಗಳು 4 ಜೊತೆ ಮತ್ತು ಒಂದು ಜೊತೆ ಹ್ಯಾಂಗಿಂಗ್ಸ್ – ಸುಮಾರು 20 ಗ್ರಾಂ 4) ಎರಡು ಬಂಗಾರದ ಡಾಲರ್ಗಳು – ಸುಮಾರು 3 ಗ್ರಾಂ 5) ಒಂದು ಜೊತೆ ಬೆಳ್ಳಿಯ ಕಾಲು ಚೈನುಗಳು 6) ಒಂದು ಬೆಳ್ಳಿ ಉಡುದಾರ 7) ಒಂದು ಬೆಳ್ಳಿಯ ಗಣೇಶ, ಕಾಮಾಕ್ಷಿ ದೀಪ, ಎರಡು ಬೆಳ್ಳಿ ದೀಪಗಳು 8) ಒಂದು ಟಿ.ವಿ. 9) ಒಂದು ಟೈಟಾನ್ ವಾಚ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಎಲ್ಲಾ ವಸ್ತುಗಳ ಅಂದಾಜು ಬೆಲೆ 2,00,000/- ಬಾಳತಕ್ಕದ್ದಾಗಿರುತ್ತೆ.

ದೂರುದಾರರಾದ ಶ್ರೀ.ಮುನಿರಾಜು ಬಿನ್ ಪಾಪಯ್ಯ, ಶಾಂತಿನಗರ, ಬಂಗಾರಪೇಟೆ ರವರು ದಿನಾಂಕ: 13.05.2019 ರಂದು ರಾತ್ರಿ 8.30 ಗಂಟೆ ಮನೆಗೆ ಬೀಗ ಹಾಕಿಕೊಂಡು ಮಾಲೂರಿಗೆ ಹೋಗಿ ದಿನಾಂಕ: 14.05.2019 ರಂದು ಬೆಳಿಗ್ಗೆ 8.00 ಗಂಟೆಗೆ ಮನೆಗೆ ಬಂದು ನೋಡಲಾಗಿ, ಮನೆಯ ಗೇಟ್ ಮತ್ತು ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಒಳಗೆ ಹೋಗಿ, ಬೀರುವಿನಲ್ಲಿಟ್ಟಿದ್ದ 1) 6 ಜೊತೆ ಬಂಗಾರದ ಓಲೆ ಜುಮಕಿ ಸುಮಾರು 24 ಗ್ರಾಂ 2) ಬಂಗಾರದ 4 ಚಿಕ್ಕ ಉಂಗುರಗಳು – 4 ಗ್ರಾಂ 3) ಎರಡು ಬೆಳ್ಳಿಯ ತಟ್ಟೆಗಳು 4) ಬೆಳ್ಳಿಯ ದೀಪಗಳು – 6 ಜೊತೆ 5) 4 ಜೊತೆ ಕುಂಕುಮ ಬಟ್ಟಲುಗಳು 6) ಒಂದು ಟಿ.ವಿ. 7) ಒಂದು ಹೆಚ್.ಪಿ. ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಮಾಲಿನ ಬೆಲೆ 1,20,000/- ಬಾಳತಕ್ಕದ್ದಾಗಿರುತ್ತೆ.

 

ಅಸ್ವಾಭಾವಿಕ ಮರಣ ಪ್ರಕರಣ :  02 

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಂಜೇಗೌಡ ಬಿನ್ ಸಿದ್ದೇಗೌಡ, ಗೌಡರಹಳ್ಳಿ ಗ್ರಾಮ, ಹಾಸನ ಜಿಲ್ಲೆ ರವರ ತಮ್ಮ ಗೌಡೇಗೌಡ, 36 ವರ್ಷ ರವರು ದಿನಾಂಕ 13.05.2019 ರಂದು ರಾತ್ರಿ 11.45 ಗಂಟೆಯಲ್ಲಿ ಅವರು ವಾಸವಾಗಿದ್ದ ಬಂಗಾರಪೇಟೆಯ ಬಾಲಮುರುಗನ್ ಕಾಂಪ್ಲೆಕ್ಸ್ ಬಳಿ ಮೂರನೇ ಪ್ಲೋರ್ ನಲ್ಲಿ ಪೋನ್ ಮಾತನಾಡುತ್ತಾ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆ ಬಿದ್ದಿದ್ದು, ಚಿಕಿತ್ಸೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಬೇಬಿ ಮಹಂತಾ ಕೊಂ ಸಪನ್ ಕುಮಾರ್ ಮಹಂತಾ , ಕೇಶರ್‌ಪುರ್‌ ಗ್ರಾಮ, ಒರಿಸ್ಸಾ ರಾಜ್ಯ ಮತ್ತು ಗಂಡ ಕಳೆದ 2 ವರ್ಷಗಳ ಹಿಂದೆ ಸ್ವಂತ ಊರಿನಿಂದ ಬಂದು ಕ್ಯಾಸಂಬಳ್ಳಿಯ ಬಳಿ ಕೊತ್ತೂರು ಗೇಟ್ ಹತ್ತಿರ ಸುಗುಣ ಕೋಳಿ ಪಾರಂನಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲೇ ವಾಸವಾಗಿದ್ದು, ಸಪನ್ ಕುಮಾರ್ ಮಹಂತಾ ರವರಿಗೆ ಮದ್ಯಪಾನ ಸೇವನೆ ಮಾಡುವ ಹವ್ಯಾಸ ಇದ್ದು, ಕುಡಿಯಬಾರದೆಂದು ಬುದ್ದಿವಾದ ಹೇಳುತ್ತಿದ್ದರಿಂದ ಕುಡಿತದ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 12.05.2019 ರಂದು ಮದ್ಯಾಹ್ನ 2.00 ಗಂಟೆಯಿಂದ ದಿನಾಂಕ 14.05.2019 ರಂದು ಬೆಳಿಗ್ಗೆ 8.00 ಗಂಟೆ ಮದ್ಯೆ ಕ್ಯಾಸಂಬಳ್ಳಿ ಗ್ರಾಮದ ರಾಮಚಂದ್ರಾಚಾರಿ ಎಂಬುವರ ಪಾಳು ಬಿದ್ದ ಬಾವಿಯಲ್ಲಿ ಬೆಳೆದಿರುವ ಹುಣಿಸೆ ಮರದ ಕೊಂಬೆಗೆ ಟವಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *