ದಿನದ ಅಪರಾಧಗಳ ಪಕ್ಷಿನೋಟ 15 ನೇ ಮಾರ್ಚ್‌ 2019

 – ಮೋಸ/ವಂಚನೆ : 01

ಕೆ.ಜಿ.ಎಫ್ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಶಂಕರ್ ಬಿನ್ ರಾಜೇಂದ್ರನ್, ಹೆನ್ರೀಸ್ ಲೈನ್, ಕೆ.ಜಿ.ಎಫ್ ರವರ ಇ-ಮೇಲ್ ಗೆ ದಿನಾಂಕ.09.02.2019 ರಂದು ಇಮೇಲ್ ವಿಳಾಸ id-career@lundnimining.com ದಿಂದ ಕೆನಡಾ ದೇಶದ ಲುಂಡಿನ್ ಮೈನಿಂಗ್ ಕಂಪನಿಯಲ್ಲಿ ಕೆಲಸ ನೀಡುವುದಾಗಿ ಸಂದೇಶ ಬಂದಿದ್ದು, ಅದನ್ನು ನೋಡಿ ದೂರುದಾರರು ಇ ಮೇಲ್ ಮುಖಾಂತರ ಸಂಪರ್ಕಿಸಿದಾಗ ಕೆಲಸ ಕೊಡಿಸುವುದಾಗಿ ನಂಬಿಸಿ ದಿನಾಂಕ.28.02.2019 ರಂದು ವಿವರಗಳನ್ನು ಪಡೆದು, ದಿನಾಂಕ.05.03.2019 ರಂದು ವಿಸಾಗೆ ಎಂತ 35,000/- ರೂಪಾಯಿಗಳನ್ನು LILA PAUL a/c no- 38213210472 of SBI bank IFSC Code SBIN00033334 ಗೆ ಪಾವತಿಸಲು ಸೂಚಿಸಿದ್ದು, ಅದರಂತೆ ದೂರುದಾರರು 35,000/- ರೂಗಳನ್ನು ಪಾವತಿಸಿದ್ದು, ಮತ್ತೆ ದಿನಾಂಕ.07.03.2019 ರಂದು ಕೆಲಸ ಖಾಯಂ ಮಾಡಲು 85,650/- ರೂ, ದಿನಾಂಕ.11.03.2019 ರಂದು  ಕೆನಡಾ ದೇಶದಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು 1,64,642/- ರೂ ಹಣವನ್ನು ವರ್ಗಾವಣೆ ಮಾಡಿದ್ದು, ಮತ್ತೆ ದಿನಾಂಕ.12.03.2019 ರಂದು ಸಂಧೇಶವನ್ನು ಕಳುಹಿಸಿ 1,58,450/- ರೂಪಾಯಿಗಳನ್ನು ಕಳುಹಿಸಲು ಸೂಚಿಸಿದ್ದು, ದೂರುದಾರರಿಗೆ ಕೆಲಸವನ್ನು ಕೊಡಿಸದೆ ಒಟ್ಟು 5,55,794/- ರೂಗಳನ್ನು ಪಡೆದು ಮೋಸ ಮಾಡಿರುತ್ತೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14.03.2019 ರಂದು 13.00 ಗಂಟೆಯಲ್ಲಿ ಬೇತಮಂಗಲ ಗ್ರಾಮದ ಭವಾನಿ ಶಾಲೆ ಹಿಂಭಾಗ ೧. ಮಣಿ, ಬೇತಮಂಗಲ, ೨. ಕೋದಂಡ, ಬ್ಯಾಟರಾಯನಹಳ್ಳಿ, ೩. ಸುಬ್ರಮಣಿ, ದೊಡ್ಡಕಾರಿ, ೪. ಅಮರೇಶ, ಬೆಟ್ಕೂರು ಗ್ರಾಮ ರವರು ಯಾವುದೇ ಪರವಾನಗಿ ಇಲ್ಲದೇ ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದವರನ್ನು ಪಿ.ಎಸ್.ಐ ಶ್ರೀ. ಸುನೀಲ್‌ಕುಮಾರ್ ಮತ್ತು ಸಿಬ್ಬಂದಿವರು ದಾಳಿ ಮಾಡಿ ಆರೋಪಿಗಳನ್ನು ಮತ್ತು 1,760/- ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯರಾಮಪ್ಪ ಬಿನ್ ಯಲ್ಲಪ್ಪ, ನಲ್ಲೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಮಗಳಾದ ಶೃತಿ, 27 ವರ್ಷ ರವರನ್ನು 6 ವರ್ಷಗಳ ಹಿಂದೆ ಕೋಲಾರ ತಾಲ್ಲೂಕು ಅಬ್ಬಿಣಿ ಗ್ರಾಮದ ವೆಂಕಟಪ್ಪ ರವರ ಮಗನಾದ ಶ್ರೀನಿವಾಸ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಶೃತಿ ರವರಿಗೆ ಆರೋಗ್ಯ ಸರಿಇಲ್ಲದ ಕಾರಣ ದೂರುದಾರರ ಮನೆಯಲ್ಲಿ ಬಂದು ಇದ್ದು, ದಿನಾಂಕ 09-03-2019 ರಂದು ದೂರುದಾರರು ಮತ್ತು ಆತನ ಹೆಂಡತಿ ನಾರಾಯಣಮ್ಮ ರವರು ಬೆಳಿಗ್ಗೆ 9.00 ಗಂಟೆಗೆ  ಕೂಲಿ ಕೆಲಸಕ್ಕೆ ಹೋಗಿ  ಸಂಜೆ 5.00 ಗಂಟೆಗೆ  ಮನೆಗೆ ಬಂದು ನೋಡಲಾಗಿ ಶೃತಿ ರವರು ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *