ದಿನದ ಅಪರಾಧಗಳ ಪಕ್ಷಿನೋಟ 15ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍14.01.2020 ರಂದು    ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಕನ್ನಕಳುವು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು   ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ   ಪಿರ್ಯಾದಿದಾರರ ಪ್ರಮೀಳಮ್ಮ, ಅಜ್ಜಪ್ಪನಹಳ್ಳಿ ಗ್ರಾಮ ಬಂಗಾರಪೇಟೆ ರವರ ಮಗಳಾದ ಶ್ರೀಮತಿ. ಕೋಕಿಲ ರವರು ಅಕ್ಷಂತರ ಗೊಲ್ಲಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ಓಂ ಶಕ್ತಿ ಮಾಲೆಯನ್ನು ಹಾಕಿ ತಮಿಳುನಾಡಿನ ಮೇಲ್ ಮರವತ್ತೂರಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಬೇಕಾಗಿದ್ದು ಆಕೆಯ ಗಂಡ ಕೆ.ಎಸ್.ಆರ್.ಟಿ.ಸಿ. ಇಲಾಖೆಯಲ್ಲಿ ಕೆಲಸಕ್ಕೆ ಹೋಗಬೇಕಾಗಿದ್ದು, ಮನೆಯಲ್ಲಿ ಯಾರು ಇರುವುದಿಲ್ಲವೆಂದು ದಿನಾಂಕ.07-01-2020 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ದೂರುದಾರರ ಅಳಿಯ ಶಂಕರಪ್ಪ ರವರು ದೂರುದಾರರ ಮನೆಗೆ ಬಂದು ತನ್ನ ಹೆಂಡತಿಯ ಬಂಗಾರದ ಒಡವೆಗಳನ್ನು ನೀಡಿದ್ದು ಸದರಿ ಒಡವೆಗಳನ್ನು ಮನೆಯ ಹಾಲ್ ನಲ್ಲಿದ್ದ ಬೀರುವಿನ ಲಾಕರ್ ನಲ್ಲಿಟ್ಟು, ಬೀರುವಿಗೆ ಬೀಗ ಹಾಕಿ, ಅದೇ ದಿನ ರಾತ್ರಿ ಸುಮಾರು 8-00 ಗಂಟೆಗೆ ಪಿರ್ಯಾದಿಯು ಮನೆಯ ಬಾಗಿಲಿನ ಬೀಗವನ್ನು ಹಾಕಿಕೊಂಡು ಆಕೆಯ ಅಳಿಯ ಶಂಕರಪ್ಪನ ಜೊತೆ ಅಕ್ಷಂತರ ಗೊಲ್ಲಹಳ್ಳಿ ಗ್ರಾಮಕ್ಕೆ ಹೋಗಿ, ಅವರ ಮನೆಯಲ್ಲಿದ್ದಾಗ ದಿನಾಂಕ.14-01-2020 ರಂದು ಬೆಳಗಿನ ಜಾವ ಸುಮಾರು 5-30 ಗಂಟೆಗೆ ಪಿರ್ಯಾದಿಯ ಮೈದುನನಾದ ಆನಂದ್ ರವರು, ಕೋಕಿಲ ರವರ ಮೊಬೈಲ್ಗೆ ಕರೆ ಮಾಡಿ, ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಹೊಡೆದು ಬಾಗಿಲು ತೆರೆದಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದಿ ಮತ್ತು ಕೋಕಿಲ ರವರು ಬೆಳಿಗ್ಗೆ ಸುಮಾರು 06-30 ಗಂಟೆಗೆ ಮನೆಗೆ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಮುಂಭಾಗಿಲಿನ ಬೀಗವನ್ನು ಹೊಡೆದು, ಮನೆಯೊಳಗೆ ಪ್ರವೇಶಿಸಿ ಹಾಲ್ ನಲ್ಲಿದ್ದ ಬೀರುವಿನ ಬೀಗವನ್ನು ಹೊಡೆದು, ಬೀರುವಿನ ಒಳಗಿನ ಲಾಕರ್ ನ್ನು ಯಾವುದೋ ಆಯುಧದಿಂದ ಮೀಟಿ ಲಾಕರ್ನಲ್ಲಿಟ್ಟಿದ್ದ 1) ಒಂದು ಚಿನ್ನದ ನಕ್ಲೆಸ್, ಸುಮಾರು 34.240 ಮಿಲಿ ಗ್ರಾಂ ತೂಕ, ಬೆಲೆ ಸುಮಾರು 1,05,700/- ರೂ 2) ವೆಂಕಟರಮಣಸ್ವಾಮಿ ಡಾಲರ್ ಇರುವ ಒಂದು ಚಿನ್ನದ ಕತ್ತಿನ ಚೈನು, ಸುಮಾರು 15 ಗ್ರಾಂ ತೂಕ, ಬೆಲೆ ಸುಮಾರು 40,500/- ರೂ ಮತ್ತು 3) ಕೈ ಬೆರಳಿನ ಚಿನ್ನದ 05 ಉಂಗುರಗಳು, ತೂಕ ಸುಮಾರು 13 ಗ್ರಾಂ, ಬೆಲೆ ಸುಮಾರು 35,100/-ರೂಗಳು, ಇವುಗಳ ಒಟ್ಟು ಬೆಲೆ 1,81,300/-ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14.01.2020 ರಂದು ಬೆಳಗ್ಗೆ ಈ ಕೇಸಿನ ದೂರುದಾರರಾದ ಸುಶೀಲಮ್ಮ, ವಿಲೇಜ್ ಮಾರಿಕುಪ್ಪಂ ವಾಸಿ ರವರ ಮಗಳಾದ ಸುಶ್ಮಿತ, ೨೦ ವರ್ಷ ರವರು ಮನೆಯಿಂದ ಹೋದವಳು ಮತ್ತೆ ಮನಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *