ದಿನದ ಅಪರಾಧಗಳ ಪಕ್ಷಿನೋಟ 15ನೇ ಅಕ್ಟೋಬರ್‌ 2019

– ಕನ್ನ ಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪಿ. ಕೃಷ್ಣಪ್ಪ, ಪ್ರಾಂಶುಪಾಲರು, ಸರ್ಕಾರಿ ಪಿ.ಯು ಕಾಲೇಜ್‌, ಸುಂದರಪಾಳ್ಯ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ-12-10-2019 ರಂದು  ಸಂಜೆ 4.00 ಗಂಟೆಗೆ ಕಚೇರಿಗೆ ಬೀಗ ಹಾಕಿ ಕೊಂಡು ನಂತರ ದಿನಾಂಕ 14-10-2019 ರಂದು ಬೆಳಿಗ್ಗೆ 8.00 ಗಂಟೆಗೆ  ಕಾಲೇಜಿಗೆ ಹೋಗಿ ನೊಡಲಾಗಿ, ಪ್ರೌಡಶಾಲಾ ಗ್ರಂಥಾಲಯ ಬಾಗಿಲು ಮತ್ತು ಕಾಲೇಜಿನ ಕಛೇರಿಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುದದಿಂದ ಕಿತ್ತು ಒಳಗಡೆ ಪ್ರವೇಶ ಮಾಡಿ ಕಚೇರಿಯಲ್ಲಿನ ಬೀರುವುಗಳು ಮತ್ತು ಲಾಕರ್ ಗಳನ್ನು ಕಿತ್ತು ದಾಖಲಾತಿಗಳನ್ನು ಹಾಗೂ ಒಂದು ಲೆನೋವಾ ಮೊಬೈಲ್, ಎರಡು ಜೊತೆ ಕ್ರೀಡಾ ಶೂ, ಎಲ್.ಇ.ಡಿ ಟಾರ್ಚ್ ಒಟ್ಟು 3,500/- ರೂ ಬೆಲೆ ಬಾಳುವುದನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂಪತ್‌ ಕುಮಾರ್‌ ಬಿನ್ ಬಾಲಕೃಷ್ಣಯ್ಯ, ಎ.ಆರ್‌.ಎಸ್.ಐ, ಡಿ.ಎ.ಆರ್‌., ಕೆ.ಜಿ.ಎಫ್ ರವರು ದಿನಾಂಕ-14-10-2019 ರಂದು ಸಂಜೆ 6.50 ಗಂಟೆಯಲ್ಲಿ ಹೈವೇ ಪೆಟ್ರೋಲಿಂಗ್ ಕಾರ್ ಸಂಖ್ಯೆ-ಕೆ.ಎ.08.ಜಿ.136 ರನ್ನು ಚಲಾಯಿಸಿಕೊಂಡು  ಬೇತಮಂಗಲ ಕೆ.ಜಿ.ಎಪ್ ಮುಖ್ಯರಸ್ತೆ ನಾಗಶೆಟ್ಟಿಹಳ್ಳಿ ಬಳಿ ಇರುವ ವಿ.ಐ.ಪಿ ಇಟ್ಟಿಗೆ ಕಾರ್ಖಾನೆ ಬಳಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಬೇತಮಂಗಲ ಕಡೆಯಿಂದ ದ್ವಿಚಕ್ರವಾಹನ ಹಿರೋ ಸ್ಪೇಂಡರ್ ಪ್ಲಸ್ ಸಂಖ್ಯೆ ಕೆ.ಎ.08.ಆರ್.8024 ರ ಚಾಲಕ ಮಂಜುನಾಥ ರವರು ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ಹೈವೇ ಪೆಟ್ರೋಲಿಂಗ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದರಿಂದ ಕಾರಿನ ಹಿಂಭಾಗ ಜಖಂ ಆಗಿ ಹಿಂಬದಿಯ ಗ್ಲಾಸ್ ಹೊಡೆದು ಹೋಗಿರುತ್ತೆ.  ದ್ವಿಚಕ್ರ ವಾಹನ ಚಾಲಕ ಮುಂಜುನಾಥ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಆತನ ಹೆಂಡತಿ ಕವಿತಾ ರವರಿಗೆ ಸಾದಾರಣ ಗಾಯಗಳಾಗಿರುತ್ತದೆ.

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುಸ್ತಾಕ್‌ ಪಾಷಾ, ಸಿ.ಪಿ.ಐ, ಉರಿಗಾಂ ವೃತ್ತ ರವರು ದಿನಾಂಕ 14.10.2019 ರಂದು ರಾತ್ರಿ 8.15 ಗಂಟೆಗೆ ಬಂಗಾರಪೇಟೆ ಕೆಜಿಎಪ್ ಮುಖ್ಯರಸ್ತೆ ದೇಶಿಹಳ್ಳಿ ಮಾರ್ಗದಲ್ಲಿರುವ ಆರ್. ಆರ್.ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಜ್ಯೋತಿ ಮಿಲ್ @ ಗೀತಾ ಮಿಲ್ ಗೇಟ್ ಬಳಿ  407 ಟೆಂಪೋ ಸಂಖ್ಯೆ ಕೆ.ಎಲ್ 26-4198 ವಾಹನ ಮಿಲ್ ಒಳಗೆ ಹೋಗಲು ನಿಂತಿದ್ದು, ಪರಿಶೀಲಿಸಲಾಗಿ ಅಕ್ಕಿ ತುಂಬಿರುವ ಬಿಡಿ  ಮೂಟೆಗಳು ಇದ್ದು, ರೇಷನ್ ಅಕ್ಕಿಯಂತೆ ಕಂಡು ಬಂದಿದ್ದು, ಸದರಿ ಅಕ್ಕಿ ಮೂಟೆಗಳನ್ನು ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರಿಂದ ವಾಹನವನ್ನು ವಶಕ್ಕೆ ಪಡೆದು, ಚಾಲಕ, ಸುಕುಮಾರ್‌, ಹರಿ ಮತ್ತು ಮಧು ರವರ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ಪಳನಿ ಬಿನ್ ದೊರಸ್ವಾಮಿನಾಯ್ಡು, ಉರಿಗಾಂಪೇಟೆ, ಕೆ.ಜಿ.ಎಫ್ ರವರ  ಮಗಳಾದ ಶ್ವೇತಾ ರವರಿಗೆ 19 ವರ್ಷ ರವರು ಹೊಟ್ಟೆನೋವಿನ ಬಾದೆಯಲ್ಲಿ ತುಂಬಾ ಬಳುಲುತ್ತಿದ್ದು, ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗದ ಕಾರಣ ಜೀವನದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 14.10.2019 ರಂದು ಬೆಳಿಗ್ಗೆ 6-00 ಗಂಟೆಗೆಯಿಂದ ಮದ್ಯಾಹ್ನ 1-00 ಗಂಟೆ ಮದ್ಯೆ ಮನೆಯ  ರೂಮಿನಲ್ಲಿನ ಪ್ಯಾನಿಗೆ  ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾರ ಶ್ರೀಮತಿ. ಸುಜಾತಮ್ಮ ಕೊಂ ಕೃಷ್ಣಪ್ಪ, ಹುನ್ಕುಂದ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕುಮಾರಿ ನಂದನಿ, 19 ವರ್ಷ ರವರು ದಿನಾಂಕ 09-10-2019 ರಂದು ಬೆಳಿಗ್ಗೆ 07-00 ಗಂಟೆಗೆ ಕೆಲಸಕ್ಕೆ ಹೋದವಳು ಪುನಃ ವಾಪಸ್‌ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *