ದಿನದ ಅಪರಾಧಗಳ ಪಕ್ಷಿನೋಟ 15ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 14.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಸಾವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೆಲ್ವಂ ಬಿನ್ ಕದಿರಪ್ಪ, ಮಂಕಲದೊಡ್ಡಿ ಗ್ರಾಮ, ಅಂದ್ರಪ್ರದೇಶ ರವರ ಮಗಳಾದ  ಸ್ವಪ್ನ,  19 ವರ್ಷ ರವರನ್ನು  ದಿನಾಂಕ- 29-10-2020 ರಂದು  ದಳವಾಹಿ ಹೊಸಹಳ್ಳಿ  ಗ್ರಾಮದ  ವಾಸಿಯಾದ ಆ1 ರವರಿಗೆ   ದಳವಾಹಿ ಹೊಸಹಳ್ಳಿ ಗ್ರಾಮದ  ದೇವರಾಜ್‌ ಎಂಬುವರಿಗೆ ವರದಕ್ಷಿಣೆ ಕೊಟ್ಟು ಮದುವೆಮಾಡಿದ್ದು, 8 ದಿನಗಳ ಹಿಂದೆ  60,000 ರೂಗಳನ್ನು  ತವರು ಮನೆಯಿಂದ  ತೆಗೆದುಕೊಂಡು ಬಾ ಎಂದು ದೇವರಾಜ್ ರವರು ಗಲಾಟೆ ಮಾಡುತ್ತಿರುವುದಾಗಿ ದೂರುದಾರರಿಗೆ ತಿಳಿಸಿದ್ದು, ಸ್ವಪ್ನ ರವರಿಗೆ ಗಂಡ ದೇವರಾಜ್ ಹಾಗೂ ರತ್ನಪ್ಪ ಮತ್ತು ಪ್ರಕಾಶ್ ರವರು ವರದಕ್ಷಿಣೆ ಕಿರುಕಳ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ದಿನಾಂಕ 14-02-2021 ರಂದು  ಸಂಜೆ 6.30 ಗಂಟೆಯಲ್ಲಿ  ಸ್ವಪ್ನ  ರವರು ಅಡುಗೆ ಮನೆಯ ಶೀಟುಗಳ  ಪೈಪ್ ಗೆ  ಸೀರೆಯಿಂದ  ನೇಣು  ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

– ಜೂಜಾಟ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 14.02.2021 ರಂದು ಸಂಜೆ 4.15 ಗಂಟೆಯಲ್ಲಿ ಗಾಜಗ ಕೆರೆಯ ಸಮೀಪ ಬಾಬು, ರಮೇಶ್, ನಾಗೇಶ್, ಮದುಸೂದನ್ ಮತ್ತು ಕೃಷ್ಣಪ್ಪ ರವರು ಯಾವುದೇ ಪರವಾನಿಗೆಯಿಲ್ಲದೇ ಕೋಳಿ ಹುಂಜಗಳನ್ನು ಬಳಸಿಕೊಂಡು, ಹಣವನ್ನು ಪಣವಾಗಿಟ್ಟು ಕೋಳಿಪಂದ್ಯದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಸಿ.ಪಿ.ಐ ಶ್ರೀ. ಸುನಿಲ್ ಕುಮಾರ್‌  ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ ಹಣ 1,280/- ರೂಗಳನ್ನು ಮತ್ತು ಕೋಳಿ ಹುಂಜಗಳ ಕಾಲಿಗೆ ಕಟ್ಟುವ 2 ಕತ್ತಿಗಳನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಅನು, ಗುಟ್ಟಹಳ್ಳಿ ಗ್ರಾಮ, ಬಂಗಾರಪೇಟ ತಾಲ್ಲೂಕು ರವರ ಗಂಡನಾದ ಶ್ರೀನಿವಾಸ, 48 ವರ್ಷ ರವರಿಗೆ 08 ವರ್ಷಗಳಿಂದ ಮೂರ್ಛೆ ರೋಗವಿದ್ದು, ಚಿಕಿತ್ಸೆ ಕೊಡಿಸಿದರೂ ಸಹ ವಾಸಿಯಾಗದೆ ಇದ್ದುದರಿಂದ ಶ್ರೀನಿವಾಸ ರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:13.02.2021 ರಿಂದ 14.02.2021 ರ ಮದ್ಯಾಹ್ನ 12.30 ಗಂಟೆ ಮದ್ಯೆ ಹೊನ್ನೇನಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಯಾವುದೋ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *