ದಿನದ ಅಪರಾಧಗಳ ಪಕ್ಷಿನೋಟ 15ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 14.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಹೇಶ್ ಬಿನ್ ಗೋವಿಂದಪ್ಪ, ಮುದವತ್ತಿ ಗ್ರಾಮ, ಕೋಲಾರ ತಾಲ್ಲೂಕು ರವರು ದಿನಾಂಕ 14.12.2020 ರಂದು ಸಂಜೆ 6-05 ಗಂಟೆಗೆ ಆಕ್ಟೀವಾ  ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07 ಇ.ಎ-4888 ರಲ್ಲಿ ಬಂಗಾರಪೇಟೆಯಿಂದ ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗಲು ಸೂಲಿಕುಂಟೆ ಗ್ರಾಮದಿಂದ ಸ್ವಲ್ಪ ಮುಂದೆ ಗ್ಯಾಸ್ ಪೈಪ್ ಲೈನ್ ಬಳಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07, ಇ.ಸಿ-8696 ಸವಾರ ಕೇಶವಮೂರ್ತಿ, ರಾಮನಾಯಕನಹಳ್ಳಿ ಗ್ರಾಮ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋವಿಂದಪ್ಪ ಬಿನ್ ಬಸಪ್ಪ, ಮಜರಾ ಗಾಂಧಿನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ, ದಿನಾಂಕ 13.12.2020 ರಂದು ರಾತ್ರಿ 8.00 ಗಂಟೆಯಲ್ಲಿ ಶಂಕರ್, ರಾಜು ರವರು ತಮ್ಮ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಂಚ ಎಂಬುವರಿಗೆ ‘ನಾವು ಹೇಳಿರುವ ವ್ಯಕ್ತಿಗೆ ಓಟು ಹಾಕುವಂತೆ ಬೆದರಿಕೆ ಹಾಕಿ, ಕೈಗಳಿಂದ ಹೊಡೆಯುತ್ತಿದ್ದಾಗ  ದೂರುದಾರರ ಮಗ ಗುಂಡುರಾಜ್ ರವರು ಗಲಾಟೆ ಬಿಡಿಸಲು ಹೋದಾಗ, ಕೆಟ್ಟ ಮಾತುಗಳಿಂದ ಬೈದು ಕೋಲಿನಿಂದ ಹೊಡೆದಿದ್ದು,  ನಂತರ ಗುಂಡುರಾಜ್ ನೊಂದಿಗೆ ದೂರುದಾರರು ಅಂಗಡಿಗೆ ಹೋಗುತ್ತಿದ್ದಾಗ,  ಶಂಕರ್‌‌, ರಾಜು ಮತ್ತು ಶಶಾಂಕ್‌ ರವರುಗಳು ಗುಂಪು ಕಟ್ಟಿಕೊಂಡು ಬಂದು ಗುಂಡುರಾಜ್ ಗೆ ಹೊಡೆದು ಹಲ್ಲೆ ಮಾಡುತ್ತಿದ್ದು, ದೂರುದಾರರು ಅಡ್ಡಹೋದಾಗ ಅವರಿಗೂ ಕೋಲು & ದೊಣ್ಣೆಗಳಿಂದ ಹೊಡೆದಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ವೆಂಕಟಗಿರಿಯಪ್ಪ, ಉಕ್ಕುಂದ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಗೌತಮಿ, 22 ವರ್ಷ ರವರನ್ನು ನಾಲ್ಕು ದಿನಗಳ ಹಿಂದೆ ಹೊಸೂರು ವಾಸಿಯಾದ ಪ್ರಶಾಂತ್ ಕುಮಾರ್ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ದಿನಾಂಕ 13.12.2020 ರಂದು ರಾತ್ರಿ 9.00 ಗಂಟೆಯಲ್ಲಿ ಗೌತಮಿ ರವರು ಉಕ್ಕುಂದ ಗ್ರಾಮದಲ್ಲಿರುವ ಅವರ ಚಿಕ್ಕಪ್ಪನ ಮನೆಗೆ ಹೋಗಿ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಂಡು ಬರುತ್ತೇನೆಂದು ಮನೆಯಿಂದ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *