ದಿನದ ಅಪರಾಧಗಳ ಪಕ್ಷಿನೋಟ 15ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 14.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 01

ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಾಮ್‌ರಾಜ್‌ ಬಿನ್ ಸಿಂಗಾರಂ, ಎಸ್.ಟಿ ಬ್ಲಾಕ್, ಕೆ.ಜಿ.ಎಫ್ ರವರು ದಿನಾಂಕ.20.08.2020 ರಂದು ಮದ್ಯಾಹ್ನ 3-00 ಗಂಟೆಗೆ ರಾಬರ್ಟ್ ಸನ್ ಪೇಟೆ, ಕೆ.ಜಿ.ಎಫ್ ನ ಎಸ್.ಬಿ.ಐ.  ಬ್ಯಾಂಕಿನ  ಎ.ಟಿ.ಎಂ ಕೇಂದ್ರದಲ್ಲಿ ಹಣವನ್ನು ಡ್ರಾ ಮಾಡಲು ಹೋದಾಗ ಯಾರೋ ಅಪರಿಚಿತ ವ್ಯಕ್ತಿ ದೂರುದಾರರಿಗೆ ಸಹಾಯ ಮಾಡುವ ನೆಪದಲ್ಲಿ ಎ.ಟಿ.ಎಂ ಕಾರ್ಡನ್ನು ತೆಗೆದುಕೊಂಡು ಬೇರೆ ಎ.ಟಿ.ಎಂ. ಕಾರ್ಡನ್ನು ನೀಡಿ ದೂರುದಾರರ ಬ್ಯಾಂಕ್ ಖಾತೆಯಲ್ಲಿದ್ದ 30,000/- ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆ.

– ಇತರೆ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ಕಳ್ಳಿಕುಪ್ಪ ಗ್ರಾಮದ ವಾಸಿ ರಘು ರವರು ಅವರ ಚಿಲ್ಲರೆ ಅಂಗಡಿ ಮುಂಬಾಗದಲ್ಲಿ ತೆಂಗಿನ ಗರಿಗಳನ್ನು ಹಾಕಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ದಿನಾಂಕ-14-09-2020 ರಂದು  ಸಂಜೆ 6-30 ಗಂಟೆಯಲ್ಲಿ ಪಿ.ಎಸ್.ಐ ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ರಘು ರವರ ಅಂಗಡಿ ಬಳಿ ಹೋಗಿ ನೋಡಲಾಗಿ ಯಾರೋ 3-4 ಜನ ಕುಳಿತು ಮದ್ಯಪಾನ ಮಾಡುತ್ತಿದ್ದು ಪೊಲೀಸರನ್ನು ಕಂಡು ಓಡಿಹೋಗಿದ್ದು, ಆರೋಪಿ ರಘು ಮತ್ತು ಸ್ಥಳದಲ್ಲಿದ್ದ 1) 05 RAJA   WHISKY 90 ML. ಖಾಲಿ  TETRA  ಪ್ಯಾಕೇಟ್ಗಳು  2) 03 ಪ್ಲಾಸ್ಟಿಕ್   ಗ್ಲಾಸ್ ಗಳು  3)ಎರಡು ಖಾಲಿ ವಾಟರ್ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ವೆಂಕಟಪ್ಪ, ಕೀರುಮಂದೆ ಗ್ರಾಮ, ಬಂಗಾರಪೇಟ ತಾಲ್ಲೂಕು ರವರ ಮೊಮ್ಮಗಳಾದ  ಕಲಾವತಿ ಕೋಂ ಲೇಟ್  ಪ್ರಭಾಕಾರ್, 22 ವರ್ಷ ರವರು ಸುಮಾರು 2 ವರ್ಷಗಳ ಹಿಂದೆ  ತಮಿಳು ನಾಡಿನ ಹೊಸೂರು ಬಳಿಯ ಜೊನ್ನಬಂಡ ಗ್ರಾಮದ ವಾಸಿ  ಪ್ರಭಾಕರ್ ರವರೊಂದಿಗೆ ಮದುವೆ ಮಾಡಿಕೊಂಡಿದ್ದು ಪ್ರಭಾಕರ್ ರವರು ಮೃತ ಪಟ್ಟನಂತರ ಕಲಾವತಿ ರವರು ದೂರುದಾರರ ಮನೆಗೆ ಬಂದು ಸುಮಾರು ಒಂದು ವರ್ಷದಿಂದ ವಾಸವಾಗಿದ್ದು, ದಿನಾಂಕ:13.09.2020 ರಂದು ರಾತ್ರಿ ಕಲಾವತಿ ರವರು ಮನೆಯಿಂದ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *