ದಿನದ ಅಪರಾಧಗಳ ಪಕ್ಷಿನೋಟ 15ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 14.05.2020 ರಂದು   ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಯ್ಯ ಟಿ.ಎಸ್ ವಯಸ್ಸು 46 ವರ್ಷ, ಶೆಟ್ಟಿಕುಂಟೆ ಗ್ರಾಮ, ಕ್ಯಾಸಂಬಳ ಹೋಬಳಿ ರವರು ಚಾಲನಾ ಪರವಾನಿಗೆಯನ್ನು ನವೀಕರಣ ಮಾಡಿಸಿಕೊಳ್ಳಲು ದಿನಾಂಕ: 14.05.2020 ರಂದು ಮಧ್ಯಾಹ್ನ ಸುಮಾರು 1-00 ಗಂಟೆಯಲ್ಲಿ ಕೆಜಿಎಫ್ ಎ.ಆರ್.ಟಿ.ಓ ಕಚೇರಿಯಲ್ಲಿ ಚಾಲನಾ ಪರವಾನಿಗೆ ಶುಲ್ಕ ಕಟ್ಟಲು ಎ.ಆರ್.ಟಿ.ಓ ಕಛೇರಿ ಮಂಭಾಗದಲ್ಲಿರುವ ಶೆಡ್ನಲ್ಲಿ ಕ್ಯೂ ನಲ್ಲಿ ನಿಂತುಕೊಂಡಿದ್ದಾಗ ಇದ್ದಕ್ಕಿದ್ದ ಹಾಗೆ ಕೆಳಗೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟಿರುತ್ತಾರೆ ಎಂದು ಈ ಕೇಸಿನ ದೂರುದಾರರಾದ ಶ್ರೀಮತಿ ಲಕ್ಷ್ಮಮ್ಮ, ಶೆಟ್ಟಿಕುಂಟೆ ಗ್ರಾಮ ರವರು ದೂರು ನೀಡಿರುತ್ತಾರೆ.

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14-05-2020 ರಂದು ದೂರುದಾರರಾದ ಶ್ರೀಮತಿ ಗಾಯಿತ್ರಿ ಕೊಂ ಶ್ರೀನಿವಾಸ ರವರು ನೀಡಿದ ದೂರಿನಲ್ಲಿ  ದಿನಾಂಕ 14-05-2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ದೂರುದಾರರು ವಾಕಿಂಗ್ ಮಾಡಲು ಎಸ್ ಪಿ ಕಛೇರಿ ಕಡೆ ಹೋಗುತ್ತಿದ್ದಾಗ ಚಾಂಪಿಯನ್ ರೀಪ್ಸ್ ಪೊಲೀಸ್ ಹಳೆಯವಸತಿ ಗೃಹ ಒಂದರಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ದೂರುದಾರರು ಹೋಗಿ ನೋಡಲಾಗಿ, ಸುಮಾರು 25-30 ವರ್ಷದ ಅನಾಮದೇಯ ಅಪರಿಚಿತ ಹೆಂಗಸ್ಸು ಮೃತಪಟ್ಟಿರುತ್ತಾರೆ.  ಹೆಂಗಸಿನ ಮೃತದೇಹದ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಮೃತ ದೇಹವನ್ನು ರಾಬರ್ಟ್‌ಸನ್‌‌ಪೇಟೆ ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

Leave a Reply

Your email address will not be published. Required fields are marked *