ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 14.04.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮಮ್ಮ ಕೊಂ ಶ್ರೀರಾಮಪ್ಪ, ದಾದೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ಮತ್ತು ವೆಂಕಟಾಪುರ ಗ್ರಾಮದ ವಾಸಿ ರಾಮಚಂದ್ರಪ್ಪ ರವರು ದಿನಾಂಕ 14-04-2020 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ವೆಂಕಟಾಪುರ ಚೆಕ್ ಪೋಸ್ಟ್ ಬಳಿ ನಿಂತುಕೊಂಡಿದ್ದಾಗ, ಕೆ.ಜಿ.ಎಪ್ ಕಡೆಯಿಂದ ಬರುತ್ತಿದ್ದ ಸುಜಕಿ ಆಕ್ಸಿಸ್ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07-ಎಕ್ಸ್-9659 ರ ಸವಾರ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ದೂರುದಾರರಿಗೆ ಮತ್ತು ರಾಮಚಂದ್ರಪ್ಪ ರವರಿಗೆ ಡಿಕ್ಕಿ ಪಡಿಸಿದ ಪ್ರಯುಕ್ತ ಇಬ್ಬರಿಗೂ ಗಾಯಗಳಾಗಿರುತ್ತೆ.