ದಿನದ ಅಪರಾಧಗಳ ಪಕ್ಷಿನೋಟ 15ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 14.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ನರಗುಣನ್ ಬಿನ್ ನಾಧಮುನಿ, ಕೆನಡೀಸ್‌ ಲೈನ್, ಉರಿಗಾಂ, ಕೆ.ಜಿ.ಎಫ್  ರವರು ದಿನಾಂಕ:13.03.2020 ರಂದು ಬೆಳಿಗ್ಗೆ 06.30 ಗಂಟೆಯಲ್ಲಿ ಮನೆಯಲ್ಲಿ ಮಲಗಿರುವಾಗ,  ದೂರುದರರ ನಾದಿನಿ ಸತ್ಯವಾಣಿ ರವರ ತಾಯಿಯನ್ನು ದೂರುದಾರರು ಮನೆಯಲ್ಲಿ ಇಟ್ಟುಕೊಂಡಿರುವ ವಿಚಾರದಲ್ಲಿ ಸತ್ಯವಾಣಿ  ಆಕೆಯ ಗಂಡ ಪಿ.ಕೆ.ಎಸ್ ಕುಮಾರ್, ದೂರುದರರ ಇನ್ನೊಬ್ಬ ನಾದಿನಿ ತಿಲಗಂ, ಈಕೆಯ ಮಗ ಸೋನೇಶ್ @ ಸೋನು ಎಂಬುವರು ದೂರುದರರ ಮನೆಯ ಬಳಿ ಬಂದು ದೂರುದಾರರನ್ನು ಆಚೆ ಎಳೆದುಕೊಂಡು ಬಂದು ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

– ಕನ್ನಕಳುವು : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02ಕನ್ನ ಕಳುವು ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ಮಾಲಾ ಕೊಂ ಪ್ರವೀಣ್‌, ಉದಯನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 13.03.2020 ರಂದು ಬೆಳಿಗ್ಗೆ 10-00 ಗಂಟೆಗೆ ಮನೆ ಬಾಗಿಲಿಗೆ ಡೋರ್ ಲಾಕ್ ಮತ್ತು ಕಾಂಪೌಂಡ್ ಗೇಟ್ ಗೆ ಬೀಗ ಹಾಕಿಕೊಂಡು ಮಗನೊಂದಿಗೆ ಪೈಪ್ ಲೈನ್ ನಲ್ಲಿರುವ ತಾಯಿ ಮನೆಗೆ ಹೋಗಿ, ರಾತ್ರಿ 10-00  ಮನೆಗೆ ಹೋಗಿ ನೋಡಲಾಗಿ, ಬಾಗಿಲಿಗೆ ಹಾಕಿದ್ದ ಡೋರ್ ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು, ಹಾಲ್ ನಲ್ಲಿರುವ ಪ್ಲೇವುಡ್ ಕಬೋರ್ಡ್  ನಲ್ಲಿ ಇಟ್ಟಿದ್ದ (1)ಒಂದು ಬಂಗಾರದ ಮಾಂಗಲ್ಯ ಸರ 24 ಗ್ರಾಂ, (2) ಒಂದು ಜೊತೆ ಬಂಗಾರ ಓಲೆ ಮತ್ತು ಮಾಟಿ 04 ಗ್ರಾಂ, (3) 44,000/- ರೂ ನಗದು ಒಟ್ಟು ಬೆಲೆ 1,28,000/- ರೂ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀಮತಿ. ಕಲೈವಾಣಿ ಕೊಂ ಪ್ರಕಾಶಂ, ರಾಜೀವ್‌ ಗಾಂಧಿ ಲೇಔಟ್‌, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 13.03.2020 ರಂದು ರಾತ್ರಿ 9-30 ಗಂಟೆಗೆ ಕುಟುಂಬ ಸಮೇತ ಜಾತ್ರೆಯ ಪುಷ್ಪ ಪಲ್ಲಕ್ಕಿಯನ್ನು ನೋಡಿಕೊಂಡು ರಾತ್ರಿ 11.30 ಗಂಟೆಗೆ ಮನೆಯ ಬಳಿ ಬಂದು ನೋಡಲಾಗಿ, ಬಾಗಿಲಿನ ಲಾಕರ್ ನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಬೆಡ್ ರೂಂನಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ   1) ಬಂಗಾರದ ಕತ್ತಿನ ಚೈನ್ ಮತ್ತು ಡಾಲರ್ 21 ಗ್ರಾಂ, 2) ಬಂಗಾರದ ಮಾಂಗಲ್ಯ ಮತ್ತು ರಾಜಾರಾಣಿ ಕಾಸುಗಳು 08 ಗ್ರಾಂ, 3) ಬಂಗಾರದ ಗುಂಡುಗಳು 02 ತೂಕ 04 ಗ್ರಾಂ, 4) ಮಾಂಗಲ್ಯ ಸರಕ್ಕೆ ಹಾಕುವ ಬಂಗಾರದ ಪೈಪ್ ಕೊಳ ೦2 ತೂಕ 02 ಗ್ರಾಂಗಳು, 5) 2 ಜೊತೆ ಬೆಳ್ಳಿ ಕಾಲು ಚೈನುಗಳು 8೦ ಗ್ರಾಂಗಳು ಮತ್ತು ನಗದು ಹಣ 5,೦೦೦/- ರೂ ಒಟ್ಟು 1,12,500/- ರೂ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಕೊಂ ವೆಂಕಟರಾಮಪ್ಪ, ಉಕ್ಕರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 13.03.2020 ರಂದು ರಾತ್ರಿ 9.00 ಗಂಟೆಗೆ ಅಪ್ಪೇನಹಳ್ಳಿ ಗ್ರಾಮಕ್ಕೆ ಹೆಂಡತಿಯ ಮನೆಗೆ ಹೋಗಿ,  ಮಕ್ಕಳನ್ನು ನೋಡಿ ಮಾತನಾಡಿಸುತ್ತಿದ್ದಾಗ ದೂರುದರರ ಮಾವ ಕೃಷ್ಣಪ್ಪ ಅತ್ತೆ ಮುಂಡಮ್ಮ ರವರು ಬಂದು ಮಕ್ಕಳನ್ನು ಕಿತ್ತುಕೊಂಡು ಕೆಟ್ಟ ಮಾತುಗಳಿಂದ ಬೈದಿದ್ದು, ದೂರುದಾರರ ಹೆಂಡತಿ ಪವಿತ್ರ  ರವರು  ಒಂದು ಮಚ್ಚಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರಾಜೇಶ್ವರಿ ಕೊಂ ರಾಜಣ್ಣ, ವಿಜಯನಗರ, ಬಂಗಾರಪೇಟೆ  ರವರ  ಮಗ ನವೀನ್‌ ಕುಮಾರ್‌ ರವರು ದಿನಾಂಕ 09.03.2020 ರಂದು ಸಂಜೆ 6-14 ಗಂಟೆಯಲ್ಲಿ ಅತ್ತಿಗಿರಿಕೊಪ್ಪ ಗ್ರಾಮದ ಈಶ್ವರ ದೇವಾಲಯ ಬಳಿ ಇರುವ ಜಮೀನನ್ನು ಸ್ವಚ್ಚಗೊಳಿಸುವಾಗ, ಜಯದೇವಪ್ಪ, ವರದರಾಜ, ನಂದೀಶ ಮತ್ತು ಶ್ರೀಕಂಠ ರವರು ಕೊಲೆ ಮಾಡಲು ಪ್ರಯತ್ನಿಸಿ, ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು, ದೂರುದಾರರಿಗೆ ಮತ್ತು ನವೀನ್‌ ಕುಮಾರ್‌ ರವರಿಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ತುಳಿಸಮ್ಮ ಕೊಂ ವೆಂಕಟೇಶಪ್ಪ, ಬಡಮಾಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಮೋನಿಕಾ, 20 ವರ್ಷ ರವರು ದಿನಾಂಕ-13-03-2020 ರಂದು ರಾತ್ರಿ 08.00  ಗಂಟೆಯಲ್ಲಿ ಅದೇ ಗ್ರಾಮದಲ್ಲಿರುವ ಅಳಿಯ ಮಹೇಶ್ ರವರ ಮನೆಯಿಂದ ಹೋದವಳು ಮತ್ತೆ ಮನೆಗೆ  ಬಾರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಯ್ಯ ಬಿನ್ ನಾರಾಯಣಸ್ವಾಮಿ, ಮಸ್ಕಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳಾದ   ಶ್ರೀಮತಿ ಶ್ರೀಪ್ರಿಯಾ @ ಮಂಜು ಕೊಂ  ಪ್ರದೀಪ್ ಕುಮಾರ್ ರವರು ದಿನಾಂಕ 08.03.2020  ರಂದು  ರಾತ್ರಿ 10.30 ಗಂಟೆಯಲ್ಲಿ ಬಿಸಿ ನೀರು ಕುಡಿಯಲು  ಗ್ಯಾಸ್   ಮೇಲೆ  ನೀರು  ಪಾತ್ರೆ  ಇಡುವಷ್ಟರಲ್ಲಿ, ಮಲಗಿದ್ದ  ಶ್ರೀಮತಿ ಶ್ರೀಪ್ರಿಯಾ@ ಮಂಜು ರವರ 05 ತಿಂಗಳ ಮಗು  ಅಳಲು ಪ್ರಾರಂಬಿಸಿದ್ದು,  ಆಗ ಶ್ರೀಪ್ರಿಯಾ@ ಮಂಜು ಮಗುವನ್ನು  ಸುಧಾರಿಸಿ  ಪುನಃ   ಅಡುಗೆ  ಮನೆಗೆ ಹೋಗಿ ಬೆಂಕಿ ಕಡ್ಡಿ ಅಂಟಿಸಿದಾಗ ಆಕಸ್ಮಿಕವಾಗಿ ಬೆಂಕಿ  ಶ್ರೀಮತಿ ಶ್ರೀಪ್ರಿಯಾ@ ಮಂಜು  ರವರು  ತೊಟಿದ್ದ ನೈಟಿಗೆ  ಬೆಂಕಿ ಹತ್ತಿಕೊಂಡು ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ  ಪಲಕಾರಿಯಾಗದೆ  ಶ್ರೀಮತಿ ಶ್ರೀಪ್ರಿಯ@ ಮಂಜು ಕೊಂ ಪ್ರದೀಪ್ ಕುಮಾರ್ ರವರು ದಿನಾಂಕ 14.03.2020  ರಂದು ಮದ್ಯಾಹ್ನ 3.35 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *