ದಿನದ ಅಪರಾಧಗಳ ಪಕ್ಷಿನೋಟ 15ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:14.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್‌ ಬಾಬು ಬಿನ್ ವೆಂಕಟೇಶಪ್ಪ, ತಾತೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ತಂದೆ ವೆಂಕಟೇಶಪ್ಪ ರವರು ದಿನಾಂಕ 14.02.2020 ರಂದು ಬೆಳಗಿನ ಜಾವ ಒಬ್ಬರೆ ಬರುವುದನ್ನು ನೋಡಿಕೊಂಡು ನಾಗಪ್ಪ ಮತ್ತು ಅವರ ಕುಟುಂಬದವರು ವೆಂಕಟೇಶಪ್ಪ ರವರನ್ನು ಅಡ್ಡಗಟ್ಟಿ, ಹೊಡೆದು ಕತ್ತು ಹಿಸುಕಿ  ಸಾಯಿಸಿ ದೂರುದಾರರ ಜಮೀನಿನಲ್ಲಿ ಪೆಟ್ರೋಲ್ ಸುರಿದು  ಬೆಂಕಿ ಇಟ್ಟು ಸುಟ್ಟಿರುತ್ತಾರೆಂದು ದೂರು.

Leave a Reply

Your email address will not be published. Required fields are marked *