ದಿನದ ಅಪರಾಧಗಳ ಪಕ್ಷಿನೋಟ 14 ನೇ ಸೆಪ್ಟೆಂಬರ್‌ 2019

– ಸಾಧಾರಣ ಕಳ್ಳತನ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸ್ ಬಿನ್ ವೆಂಕಟಪ್ಪ, ಅಜ್ಜಪ್ಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಪರ್ಗುಶನ್ ಟ್ರಾಕ್ಟರ್ ನಂ KA-08 T-1618 ಮತ್ತು ಟ್ರಾಲಿ ನಂ KA-08 T-1619 ಅನ್ನು ದಿನಾಂಕ. 12-06-2019 ರಂದು ಬೆಳಿಗ್ಗೆ 11-30 ಗಂಟೆಗೆ ಮಲ್ಲೆಂಗುರ್ಕಿ ಗ್ರಾಮದ ವೆಂಕಟೇಶ್ ರವರು ಅಜ್ಜಪನಹಳ್ಳಿ ಗ್ರಾಮದ ಹೊರವಲಯಲ್ಲಿರುವ ದೂರುದಾರರ ತೋಟದ ಮನೆಯ ಬಳಿ ನಿಲ್ಲಿಸಿ ಹೊರಟು ಹೋಗಿದ್ದು, ದೂರುದಾರರು ದಿನಾಂಕ 13-09-2019 ರಂದು ಬೆಳಿಗ್ಗೆ 5-30 ಗಂಟೆಯಲ್ಲಿ ತೋಟದ ಮನೆಯ ಬಳಿ ಬಂದು ನೋಡಲಾಗಿ ಪರ್ಗುಶನ್ ಟ್ರಾಕ್ಟರ್ ಬೆಲೆ 2,00,000/- ರೂ ಬಾಳುವುದನ್ನು  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಫಸೀನಾ ಸುಲ್ತಾನ ಕೊಂ ಸೈಯದ್ ಇಮ್ರಾನ್ ಅಹ್ಮದ್, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 14.08.2016 ರಂದು ಸೈಯದ್ ಇಮ್ರಾನ್ ಅಹ್ಮದ್ ರವರನ್ನು ಮದುವೆಯಾಗಿದ್ದು, ಮದುವೆ ಕಾಲದಲ್ಲಿ ವರದಕ್ಷಿಣೆಯಾಗಿ  ಐದು ಲಕ್ಷ ರೂ ಬೆಲೆಬಾಳುವ ಬಂಗಾರದ ವಡವೆಗಳು, ನಗದು  01 ಲಕ್ಷ ರೂ ನೀಡಿದ್ದು, ಮದುವೆಯಾಗಿ  ಏಳು ತಿಂಗಳು ನಂತರ ಸೈಯದ್ ಇಮ್ರಾನ್ ಅಹ್ಮದ್, ಸೈಯದ್ ಅಹ್ಮದ್ ಮತ್ತು ಪರ್ವಿನ್ ತಾಜ್‌ ರವರು ದೂರುದಾರರಿಗೆ ತವರು ಮನೆಯಿಂದ ವರದಕ್ಷಿಣೆಯಾಗಿ ಇನ್ನೂ ಹೆಚ್ಚಿಗೆ ಹಣವನ್ನು ತರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ 3 ಲಕ್ಷ ರೂಗಳು ಹಾಗೂ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ನೀಡಿದ್ದರೂ ಆರೋಪಿಗಳು ದೂರುದಾರರಿಗೆ ಐದು ಲಕ್ಷ ರೂಗಳನ್ನು ತೆಗೆದುಕೊಂಡು ಬಾ, ಇಲ್ಲದಿದ್ದರೆ ಮನೆಗೆ ಬರಬೇಡ, ಮನೆಗೆ ಬಂದರೆ  ಸಾಯಿಸಿ ಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ.

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜ್ಯೋತಿ ಕೊಂ ಶ್ರೀನಿವಾಸಗೌಡ, ಕಾಡುಕದಿರೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 12.09.2019 ರಂದು ಸಂಜೆ 7.00 ಗಂಟೆಯಲ್ಲಿ ಮನೆ ಬಳಿ ಇದ್ದಾಗ, ಶಶಿಕಲಾ ರವರು ಹೋಗಿ ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಕಟ್ಟಿಗೆಯಿಂದ ಹೊಡೆದು ಬೆರಳುಗಳನ್ನು ಕಚ್ಚಿ ರಕ್ತಗಾಯಪಡಿಸಿರುತ್ತಾರೆ.

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13.09.2019 ರಂದು ದೂರುದಾರರಾದ ಶ್ರೀಮತಿ ಮಿನ್ನಲಾ ದೇವಿ ಕೋಂ ಆರ್‍ಮುಗಂ ಎನ್‌.ಟಿ ಬ್ಲಾಕ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ: 11.09.2019 ರಂದು ದೂರುದಾರರ ಮಗಳಾದ ಶ್ಯಾ ಮಲಾ ರವರು ಸಂಸಾರದ ವಿಚಾರದಲ್ಲಿ ಆಕೆಯ ಗಂಡ ಕುಮರೇಶನ್ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡು ಎನ್.ಟಿ ಬ್ಲಾಕ್ ನಲ್ಲಿರುವ ಮಿನ್ನಲಾ ದೇವಿ ರವರ ಮನೆಗೆ ಬಂದಿದ್ದು ಆಗ ಆರೋಪಿ ಕುಮರೇಶನ್ ಶ್ಯಾಮಲಾರವರನ್ನು ಹಿಂಬಾಲಿಸಿಕೊಂಡು ಬಂದು  ಜಗಳ ಕಾದು ಕೈಗಳಿಂದ ಹೊಡೆದಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.09.2019 ರಂದು ದೂರುದಾರರಾದ ಶ್ರೀ. ಗೋವಿಂದಪ್ಪ ಬಿನ್‌ ನಾರಾಯಣಪ್ಪ ಗೊಲ್ಲಹಳ್ಳಿ ಗ್ರಾಮ ರವರು ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಭವ್ಯ  ರವರಿಗೆ ಸುಮಾರು 8 ವರ್ಷಗಳಿಂದ ತಲೆ ನೋವು, ನರಗಳ ದೌರ್ಬಲ್ಯ, ಪಿಟ್ಸ್ ಇದ್ದು ಬೆಂಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತಿಂಗಳಿಗೆ ಒಂದು ಬಾರಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ 13.09.2019 ರಂದು  ತೊಟದ ಕಡೆ ಹಸುವನ್ನು ಮೇಯಿಸಿಕೊಂಡು ಬರಳು ಹೋಗಿದ್ದು, ಎಷ್ಟು ಹೊತ್ತಾದರು ಮನೆಗೆ ಬಾರದೇ ಇದ್ದಾಗ ಹುಡುಕಿಕೊಂಡು ಸಂಜೆ ಸುಮಾರು 4-00 ಗಂಟೆಗೆ ಕೃಷ್ಣಪ್ಪ ರವರ ಬಾವಿ ಬಳಿ ಹೋದಾಗ ಕೃಷ್ಣಪ್ಪ ರವರ ಬಾವಿಯಲ್ಲಿ ಚಪ್ಪಲಿಗಳು ತೇಳುತ್ತಿದ್ದು, ತಮ್ಮ ಗ್ರಾಮದ ವಾಸಿಗಳು ನೀರಿಗಿಳಿದು ಹುಡಿಕಾಡಲಾಗಿ ತನ್ನ ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *