ದಿನದ ಅಪರಾಧಗಳ ಪಕ್ಷಿನೋಟ 14 ನೇ ಆಗಸ್ಟ್‌ 2019

-ಕನ್ನ ಕಳುವು : 01

ಬೆಮೆಲ್‌ ನಗರ ಪೊಲೀಸ್‌‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.13-08-2019 ರಂದು ದೂರುದಾರರಾದ ಶ್ರೀಮತಿ ವಿ. ಜ್ಯೋತಿ ಕೋಂ ಕಣ್ಣನ್‌ ಭಾರತ್‌ ನಗರ ಕೆ.ಜಿ.ಎಫ್‌ ರವರು ಬೆಳಿಗ್ಗೆ ಸುಮಾರು 10.00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಕೆ.ಜಿ.ಎಫ್. ರಾಬರ್ಟ್ ಸನ್ ಪೇಟೆಯ ಎಲ್.ಐ.ಸಿ. ಕಛೇರಿಗೆ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 7-00 ಗಂಟೆಗೆ ಮನೆಗೆ ವಾಪಸ್ ಬಂದು ಮನೆಯ ಮುಂಭಾಗಿಲನ್ನು ತೆಗೆದು ಮನೆಯೊಳಗೆ ಹೋಗಿ ನೋಡಲಾಗಿ ಮನೆಯ ಹಿಂಭಾಗದ ಬೆಡ್ ರೂಂನ ಬಾಗಿಲು ತೆರೆದಿದ್ದು, ಮನೆಯ ಹಿಂಬಾಗದಲ್ಲಿ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಮೆಟ್ಟಿಲಿನ ಕಬ್ಬಿಣದ ಗ್ರಿಲ್ ನ್ನು ಕಿತ್ತು ಬೆಂಡ್ ಮಾಡಿ ಇಳಿದು ಮನೆಯ ಹಿಂಭಾಗದ ಬೆಡ್ ರೂಮಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಡೋರ್ ಲಾಕ್ ನ್ನು ಕಿತ್ತು ಒಳಗೆ ಪ್ರವೇಶಿಸಿ, ಮತ್ತೊಂದು ಬೆಡ್ ರೂಮಿನ ಮಂಚದ ಮೇಲೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಟ್ಟಿರುವ ಸುಮಾರು 24 ಗ್ರಾಂ ತೂಕದ ಒಂದು ಬಂಗಾರದ ಕತ್ತಿನ ಚೈನು ಬೆಲೆ ಸುಮಾರು 72,000/- ರೂ ಮತ್ತು ಸುಮಾರು 08 ಗ್ರಾಂ ತೂಕದ ಒಂದು ಬಂಗಾರದ ಕೈ ಬೆರಳಿನ ಉಂಗುರ ಬೆಲೆ ಸುಮಾರು 18,000/- ರೂ ಒಟ್ಟು 90,000/- ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
– ಮೋಸ/ವಂಚನೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:13.08.2019 ರಂದು ದೂರುದಾರರಾದ ಶ್ರೀಮತಿ ಶಕುಂತಲಮ್ಮ ಕೋಂ ಜಯರಾಮಾಚಾರಿ ತಲ್ಲಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ ಆರೋಪಿ ಭಾರತಿ ಮತ್ತು ಸುರೇಶ್‌ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಶ್ರೀ ಶಕ್ತಿ ಸಂಘಗಳ ಗುಂಪುಗಳನ್ನು ಮಾಡಿ ಸಾಲ ಕೊಡಿಸುವುದಾಗಿ ಹೇಳಿ ಜೀಡಮಾಕನಹಳ್ಳಿಯಲ್ಲಿ ಕೆಲವು ಸದಸ್ಯರಿಗೆ ಮತ್ತು ಸುಂದರಪಾಳ್ಯ ಗ್ರಾಮದಲ್ಲಿ ಸುಮಾರು 30-40 ಜನರಿಂದ ಕೃಷ್ಣಾಪುರದಲ್ಲಿ ಸುಮಾರು 20-30 ಜನರಿಂದ ತಲ್ಲಪಲ್ಲಿ ಗ್ರಾಮದಲ್ಲಿ ಕೆಲವರಿಗೆ ಗೋಪೇನಹಳ್ಳಿ ಗ್ರಾಮದಲ್ಲಿ 4 ಜನರಿಗೆ ತಲಾ ಒಂದು ಲಕ್ಷ ಲೋನ್ ಕೊಡಿಸುವುದಾಗಿ ಹೇಳಿ ತಲಾ 5000 ಸಾವಿರದಿಂದ 7000 ರೂ ತನಕ ಹಣ ಪಡೆದು ಸದರಿ ಹಣವನ್ನು ಬೇತಮಂಗಲ ಕೆನರಾ 0663101036659 ಖಾತೆಗೆ ಜವಾವಣೆ ಮಾಡಿಸಿಕೊಂಡು ದೂರುದಾರರನ್ನು ನಂಬಿಸಿ ಮೋಸ ಮಾಡಿರುತ್ತಾರೆ.
–ಹಲ್ಲೆ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.08.2019 ರಂದು ದೂರುದಾರರಾದ ಶ್ರೀ. ಮಂಜುನಾಥ ಬಿನ್‌ ರೆಡ್ಡಿಯಪ್ಪ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಬಂಗಾರಪೇಟೆ ಬಾಲಕರ ಸರ್ಕಾರಿ ಪದವಿ ಪುರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೋದನೆ ಮಾಡುತ್ತಿರುವಾಗ ಆರೋಪಿ ಸುರೇಶ್‌ ಮತ್ತು ಇತರರು ತರಗತಿಯ ಕೊಠಡಿಯ ಒಳಗೆ ಆಕ್ರಮ ಪ್ರವೇಶ ಮಾಡಿ ಏಕಾಏಕಿ ದೂರುದಾರರನ್ನು ಹಿಡಿದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ತರಗತಿಯಿಂದ ಹೊರಗೆ ಎಳೆದುಕೊಂಡು ಬಂದು ಕೈಯಿಂದ ಬಾಯಿಯ ಮೇಲೆ, ತುಟಿಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.
– ಇತರೆ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14.08.2019 ರಂದು ದೂರುದಾರರಾದ ಸಿಪಿಐ ರಾಬರ್ಟ್‌‌ಸನ್‌ಪೇಟೆ ರವರು ಮತ್ತು ಸಿಬ್ಬಂದಿರುವರು ನಗರ ಗಸ್ತು ಮಾಡುತ್ತಿದ್ದಾಗ ಕನಮನಹಳ್ಳಿ ಚೆಕ್ ಪೋಸ್ಟ್ ಬಳಿ ವಾಹನಗಳ್ನು ತಪಾಸಣೆ ಮಾಡುತ್ತಿದ್ದಾಗ ತಮಿಳುನಾಡು ಕಡೆಯಿಂದ ಈಚರ್ ವಾಹನ ಸಂಖ್ಯೆ ಟಿ.ಎನ್ 50-ಬಿ-7796 ವಾಹನ ಬಂದಿದ್ದು ಸದರಿ ವಾಹನವನ್ನು ನಿಲ್ಲಿಸಿದಾಗ ಒಬ್ಬ ಆಸಾಮಿ ವಾಹನದಿಂದ ಇಳಿದು ಓಡಿ ಹೋಗಿದ್ದು ಸದರಿ ವಾಹನದ ಚಾಲಕನನ್ನು ವಿಚಾರಿಸಿದಾಗ ಆತನ ಹೆಸರು ಸತ್ಯ @ ಸತ್ಯಮೂರ್ತಿ, ಕಾರಿಮಂಗಲಂ, ಕ್ಲೀನರ್ ಕೆಲಸ ಎಂದು ತಿಳಿಸಿದ್ದು ತನ್ನ ಹೆಸರು ಸೆಂದಿಲ್ ಬಿನ್ ಚಿನ್ನತಂಬಿ, 42 ವರ್ಷ, ಮುಕ್ಕೋನ ಪಾರ್ಕ್ ಬೀದಿ, ಕಾರಿಮಂಗಲ ಗ್ರಾಮ, ಪಾಲಕೋಡ್ ತಾಲ್ಲೂಕು, ಧರ್ಮಪುರಿ ಜಿಲ್ಲೆ, ತಮಿಳುನಾಡು ಎಂದು ತಿಳಿಸಿದ್ದು ಸದರಿ ವಾಹನವನ್ನು ಚೆಕ್ ಮಾಡಲಾಗಿ ಅಕ್ಕಿ ಮೂಟೆಗಳಿದ್ದು ಇದನ್ನು ತಮಿಳುನಾಡಿನ ಕಾರಿಮಂಗಲ ನ ವಾಸಿ ಬಾಲು ಎಂಬುವವರಿಗೆ ಸೇರಿದ್ದಾಗಿದ್ದು ಅವರದೇ ಈಚರ್ ವಾಹನದಲ್ಲಿ ಕಾರಿಮಂಗಲಂ ನಿಂದ ಬಂಗಾರಪೇಟೆಯ ಎಸ್.ಎಲ್.ಎಸ್ ಮಿಲ್ ಮಾಲೀಕರಿಗೆ ಮಾರಾಟ ಮಾಡಲು ತಿಳಿಸಿದ ಮೇರೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಸದರಿ ಅಕ್ಕಿ ಮೂಟೆಗಳಿಗೆ ಬಿಲ್ ಕೇಳಲಾಗಿ ಅವು ತಮಿಳುನಾಡಿನ ಸರ್ಕಾರದ ವತಿಯಿಂದ ವಿತರಿಸಲಾಗಿರುವ ರೇಷನ್ ಅಕ್ಕಿ ಎಂದು ತಿಳಿಸಿದ್ದರ ಮೇರೆಗೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರುತ್ತಾರೆ.
– ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.08.2019 ರಂದು ದೂರುದಾರರಾದ ಶ್ರೀ. ನಾಗರಾಜ್‌ ಬಿನ್‌ ವೆಂಟೇಶಪ್ಪ ಮಾವಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರು ಟ್ರಾಕ್ಟರ್ ಸಂಖ್ಯೆ ಕೆಎ-08-ಟಿ-8224 ರಲ್ಲಿ ನಾಯಕರಹಳ್ಳಿ ವಾಸಿಯಾದ ನಾರಾಯಣಪ್ಪ ರವರ ನರ್ಸರಿ ಬಳಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಎದುರಿಗೆ ಬಂಗಾರಪೇಟೆ ಕಡೆಯಿಂದ ಅರುಣ್‌ಕುಮಾರ್‌ ರವರ ದ್ವಿ ಚಕ್ರ ವಾಹನ ಸಂಖ್ಯೆ ಕೆಎ-07-ಯು-4092 ರ ಹಿಂಭಾಗದಲ್ಲಿ ವೆಂಕಟೇಶ ಎಂಬುವರನ್ನು ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿ,ಕ್ಕಿ ಹೊಡದ ಪ್ರಯುಕ್ತ ದೂರುದಾರರಿಗೆ ರಕ್ತ ಗಾಯಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.08.2019 ರಂದು ದೂರುದಾರರಾದ ಶ್ರೀಮತಿ ತ್ರಿವೇಣಿ ಕೊಂ ನಾಗರಾಜ್‌ ದಾಸರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 12.08.2019 ರಂದು ದೂರುದಾರರು ಸ್ಕೂಟಿ ದ್ವೀಚಕ್ರ ವಾಹನ ಸಂಖ್ಯೆ ಕೆಎ08,ವಿ1753 ರಲ್ಲಿ ತನ್ನ ಅಜ್ಜಿ ಅಕ್ಕಯ್ಯಮ್ಮ ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ದಾಸರಹೊಸಹಳ್ಳಿ ಯಿಂದ ಬಂಗಾರಪೇಟೆ ಕಡೆಗೆ ಬೆಂಗನೂರು ಪುಡ್ ಗೋಡನ್ ಬಳಿ ವಾಹನವನ್ನು ಬಲಕ್ಕೆ ತಿರುಗಿಸು್ತಿದ್ದಾಗ ಹಿಂದಗಡೆಯಿಂದ ನಂಬರ್ ಇಲ್ಲದ ಸಿಟಿ-100 ದ್ವಿಚಕ್ರ ವಾಹನದ ಸವಾರನು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದಾಗ ವಾಹನ ಸಮೇತ ಇಬ್ಬರು ಕೆಳಗೆ ಬಿದ್ದ ಪ್ರಯುಕ್ತ ದೂರುದಾರರಿಗೆ ರಕ್ತ ಗಾಯವಾಗಿರುತ್ತದೆ.

Leave a Reply

Your email address will not be published. Required fields are marked *