ದಿನದ ಅಪರಾಧಗಳ ಪಕ್ಷಿನೋಟ 14 ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:13.07.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 07

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 05 ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ.ಮಂಜುನಾಥ ಬಿನ್ ಕದಿರಪ್ಪ, ಗಾಂಧಿನಗರ, ಬಂಗಾರಪೇಟೆ ರವರು ದಿನಾಂಕ 10.07.2019 ರಂದು ರಾತ್ರಿ ತನ್ನ ಮನೆಯ ಮುಂದೆ ನಿಲ್ಲಿಸಿದ್ದ 1,00,000-00 ರೂ ಬೆಲೆ ಬಾಳುವ ದ್ವಿಚಕ್ರ ವಾಹನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್-500 ಬುಲ್ಲೇಟ್ ಸಂಖ್ಯೆ ಕೆಎ-33-ಎಸ್-2999 ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀ. ಶಂಕರ್ ಬಿನ್ ರಮೇಶ್, ಬೂದಿಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 01.07.2019 ರಂದು ರಾತ್ರಿ ಬೂದಿಕೋಟೆಯಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಬಜಾಜ್ ಪಲ್ಸರ್ ಸಂಖ್ಯೆ ಕೆಎ-06-ಇಎಲ್-6276 ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀ. ನರಸಿಂಹಮೂರ್ತಿ ಬಿನ್ ವೆಂಕಟರಮಣಪ್ಪ, ಬೂದಿಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 01.07.2019 ರಂದು ರಾತ್ರಿ ಬೂದಿಕೋಟೆಯಲ್ಲಿರುವ ಅವರ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 73,000-00 ರೂ ಬೆಲೆ ಬಾಳುವ ದ್ವಿಚಕ್ರ ವಾಹನ ಡಿಯೋ ಸಂಖ್ಯೆ ಕೆಎ-08-ಎಕ್ಸ್-6159 ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀ. ಹರೀಶ್ ಕುಮಾರ್, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 01.07.2019 ರಂದು ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 40,000-00 ರೂ ಬೆಲೆಬಾಳುವ ದ್ವಿಚಕ್ರ ವಾಹನ ಹೋಂಡಾ ಡಿಯೋ ಸಂಖ್ಯೆ ಕೆಎ-08-ಡಬ್ಲ್ಯೂ-7392 ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ದೂರುದಾರರಾದ ಶ್ರೀ. ನಾರಾಯಣರೆಡ್ಡಿ ಬಿನ್ ಅಕ್ಕಲರೆಡ್ಡಿ, ನೆರೆಗೆ ಗ್ರಾಮ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ದಿನಾಂಕ 13.07.2019 ರಂದು ಮದ್ಯಾಹ್ನ 12.45 ಗಂಟೆಯಲ್ಲಿ 30,000-00 ರೂ ಬೆಲೆಬಾಳುವ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-01-ಹೆಚ್.ವೈ-4971 ನ್ನು ಬಂಗಾರಪೇಟೆಯ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿ ಬೀಗ ಹಾಕಿಕೊಂಡು ನ್ಯಾಯಾಲಯದೊಳಗೆ ಹೋಗಿದ್ದಾಗ, ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಯ್ಯ ಬಿನ್ ವೆಂಕಟಪ್ಪ, ದಾಸರಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ದಾಸರಹೊಸಹಳ್ಳಿ ಗ್ರಾಮದ ಜಮೀನು ಸರ್ವೆ ನಂ 59/1 ರಿಂದ 59/6 ರ ತೋಟದಲ್ಲಿದ್ದ ಬೋರ್ ವೆಲ್ ದಿನಾಂಕ.05-07-2019 ರಂದು ರಿಪೇರಿಯಾಗಿದ್ದು, ಬೋರ್ ವೆಲ್ ನಲ್ಲಿರುವ ಮೋಟಾರ್ ಪಂಪ್ ಮತ್ತು ಸುಮಾರು 400 ಮೀಟರ್ ಕೇಬಲ್ ವೈಯರ್ ನ್ನು ಹೊರೆಗೆ ತೆಗೆದು ತೋಟದ ಮನೆ ಬಳಿ ಇಟ್ಟಿದ್ದು, ದಿನಾಂಕ 07.07.2019 ರಂದು ಸಂಜೆ 6-00 ಗಂಟೆಯಲ್ಲಿ ದೂರುದಾರರು ತೋಟದ ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ 08.07.2019 ರಂದು ಬೆಳಿಗ್ಗೆ 7.30 ಗಂಟೆಗೆ ಹೋಗಿ ನೋಡಲಾಗಿ ಮನೆ ಬಳಿ ಇಟ್ಟಿದ್ದ 400 ಮೀಟರ್ ಕೇಬಲ್ ವೈಯರ್, ಬೆಲೆ 20,000/- ರೂ ಬಾಳುವುದನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಸುಗಳು ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಕುಲನ್ ಬಿನ್ ಕೃಷ್ಣಮೂರ್ತಿ, ಹೆನ್ರೀಸ್ ಎ ಎಂ ಲೈನ್, ಉರಿಗಾಂ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ:29.05.2018 ರಿಂದ 12.07.2019 ರ ನಡುವೆ ರಾತ್ರಿ ಸಮಯಗಳಲ್ಲಿ ಉರಿಗಾಂ ಹೆನ್ರೀಸ್ ಲೈನಿನಲ್ಲಿ ದೂರುದಾರರ ಮತ್ತು ಅವರ ಲೈನಿನ ಮುನಿಸ್ವಾಮಿ, ಕಲಾ, ಕುಮಾರ್ ರವರುಗಳ ಮನೆಗಳ ಬಳಿ ಕೊಟ್ಟಿಗೆಗಳಲ್ಲಿ ಇದ್ದ ಸುಮಾರು 5,62,000/- ರೂ ಬೆಲೆಬಾಳುವ 19 ಹಸು ಮತ್ತು ಕರುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅರವಿಂದ ಬಿನ್ ಷಣ್ಮುಗಂ, ಕುಪ್ಪಸ್ವಾಮಿ ಮೊದಲಿಯಾರ್‌ ಲೇಔಟ್, ಬಂಗಾರಪೇಟೆ ರವರು ಕಾರು ಸಂಖ್ಯೆ ಕೆಎ-08-ಎಂ-3350 ರಲ್ಲಿ ದಿನಾಂಕ 12/07/2019 ರಂದು ಸಂಜೆ 6-30 ಗಂಟೆಯಲ್ಲಿ ನೇರಳೆಕೆರೆ ಸಮೀಪ ಇರುವ ಇಟ್ಟಿಗೆ ಪ್ಯಾಕ್ಟರಿ ಬಳಿ ರಸ್ತೆಯಲ್ಲಿ ಬರುತ್ತಿರುವಾಗ, ಬಂಗಾರಪೇಟೆ ಕಡೆಯಿಂದ ನೊಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನ ಸ್ಪ್ಲೆಂಡರ್ ಪ್ಲಸ್ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಕಾರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಕಾರಿನ ಬಲಭಾಗದ ಬ್ಯಾನೆಟ್, ಹೆಡ್ ಲೈಟ್, ಹೊಡೆದು ಹೋಗಿ ಬಂಪರ್ ಸೈಡ್ ಮಿರರ್ ಜಖಂ ಗೊಂಡಿರುತ್ತದೆ. ದ್ವಿ ಚಕ್ರ ವಾಹನ ಸವಾರ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾನೆ.

– ದೊಂಬಿ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಜಯಮ್ಮ ಕೊಂ ಮುನಿವೆಂಕಟಪ್ಪ, ಚಿನ್ನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 12-07-2019 ರಂದು ರಾತ್ರಿ 8-00 ಗಂಟೆಗೆ ಮಗ ಪ್ರವೀಣ್ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗಲು ಚಿನ್ನಕೋಟೆ ಗ್ರಾಮದ ಆರೋಪಿ ವೆಂಕಟೇಶಪ್ಪ ರವರ ಮನೆಯ ಮಂದೆ ಹೋಗುತ್ತಿದ್ದಾಗ, ವೆಂಕಟೇಶಪ್ಪ ರವರು ದೂರುದಾರರನ್ನು ಕಂಡು ತನ್ನ ಮಗಳಾದ ಸುಷ್ಮಾ ಮತ್ತು ದೂರುದಾರರ ಮಗನಾದ ಪ್ರವೀಣ್ ರವರ ಪ್ರೀತಿಯ ವಿಚಾರದಲ್ಲಿ ಬೈಯ್ಯುತ್ತಿದ್ದು, ದೂರುದಾರರು ಮತ್ತು ಪ್ರವೀಣ್ ರವರು ಏಕೆ ಬೈಯ್ಯುತ್ತಿರುವುದು ಎಂದು ಪ್ರಶ್ನಿಸಿದಾಗ, ವೆಂಕಟೇಶಪ್ಪ, ಸುಧಾಕರ್‍, ರಜೇಶ್, ಯಲ್ಲಮ್ಮ ಮತ್ತು ಸುಷ್ಮ ರವರು ಗುಂಪು ಕಟ್ಟಿಕೊಂಡು ಬಂದು ದೂರುದಾರರಿಗೆ ಮತ್ತು ಪ್ರವೀಣ್ ರವರಿಗೆ ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದಿರುತ್ತಾರೆ.

–ಹಲ್ಲೆ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ಹನುಮಪ್ಪ, ಚಿನ್ನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ.12-07-2019 ರಂದು ರಾತ್ರಿ 7-30 ಗಂಟೆಯಲ್ಲಿ ಮನೆಯ ಬಳಿ ಕುಳಿತಿದ್ದಾಗ, ಆರೋಪಿ ಪ್ರವೀಣ್ ಎಂಬುವನು ದೂರುದಾರರನ್ನು ಕುರಿತು ಮೊನ್ನೆ ದಿನ ತಮ್ಮ ತಾಯಿ ಚಿನ್ನಕೋಟೆ ರೈಲ್ವೆ ಸ್ಟೇಷನ್ ಬಳಿ ಹೋಗುತ್ತಿದ್ದಾಗ, ಕುಂಟನ ಹೆಂಡತಿ ಹೋಗುತ್ತಿದ್ದಾಳೆ ಎಂದು ಹೀನಾಯವಾಗಿ ಮಾತನಾಡಿದ್ದೀಯಂತೆ ಎಂದು ಕೇಳಿ ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿ, ಒಂದು ಕಬ್ಬಿಣದ ಕಂಬಿಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *