ದಿನದ ಅಪರಾಧಗಳ ಪಕ್ಷಿನೋಟ 14 ನೇ ಮಾರ್ಚ್‌ 2019

– ಕೊಲೆ ಪ್ರಯತ್ನ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್‌ ರೆಡ್ಡಿ ಬಿನ್ ರಾಮರೆಡ್ಡಿ, ಮರದಘಟ್ಟ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮನೆಯ ಬಳಿಗೆ ದಿನಾಂಕ 13.03.2019 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಮುನಿವೆಂಕಟರೆಡ್ಡಿ ಎಂಬುವವರು ಬಂದು ನೋಡುತ್ತಿದ್ದು, ದೂರುದಾರರು ನಮ್ಮ ಮನೆ ಕಡೆ ಬರಬೇಡಿ ಎಂದು ಹೇಳಿದಾಗ, ಮುನಿವೆಂಕಟರೆಡ್ಡಿ ರವರು ದೂರುದಾರರನ್ನು ಕುರಿತು ಕೆಟ್ಟ ಮಾತುಗಳಿಂದ ಬೈದು ಹೊರಟುಹೋಗಿ, ನಂತರ ಮದ್ಯಾಹ್ನ 3.00 ಗಂಟೆಯಲ್ಲಿ ದೂರುದಾರರು ದ್ವಿ ಚಕ್ರ ವಾಹನದಲ್ಲಿ ಅದೇ ಗ್ರಾಮದ ಚಿನ್ನಮುನೆಪ್ಪ ರವರ ಮನೆಯ ಮುಂದೆ ಹೋಗುತ್ತಿದ್ದಾಗ, ಅಲ್ಲಿಯೇ ಇದ್ದ ಯತೀಶ್‌ರೆಡ್ಡಿ, ರಾಜಾರೆಡ್ಡಿ, ಮುನಿವೆಂಕಟರೆಡ್ಡಿ, ಭಾರತಮ್ಮ ಮತ್ತು ಗಾಯತ್ರಿ ರವರು ದೂರುದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ  ಮುಖಕ್ಕೆ ಮೆಣಸಿನ ಕಾಯಿ ಪುಡಿಯನ್ನು ಚೆಲ್ಲಿ, ದೊಣ್ಣೆಗಳಿಂದ ಮತ್ತು ಚಾಕುವಿನಿಂದ ದೂರುದಾರರನ್ನು ಸಾಯಿಸುವ ಉದ್ದೇಶದಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

 

 –ರಸ್ತೆ ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೂಯಿಲ್ ಬಿನ್ ಐಸಾಕ್‌, ಬಿ. ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ  ಅಕ್ಕ ಮೇರಿ ಜಾಕ್ಲಿನ್ ರವರು ಆಕೆಯ ಗಂಡ ಜೋಸೆಫ್ ಆನಂದರಾಜ್ ರವರ   ಸುಜುಕಿ ಸ್ವಿಸ್ ದ್ವಿಚಕ್ರವಾಹನ ಸಂಖ್ಯೆ KA53-EG-2217 ರಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ದಿನಾಂಕ 12.03.2019 ರಂದು ರಾತ್ರಿ 8.30 ಗಂಟೆಗೆ ಬಿ.ಎಂ.ರಸ್ತೆಯಲ್ಲಿ ತ್ರೇಸರಾಜ್ ರವರ ಮನೆಯ ಹತ್ತಿರ ಬಲಗಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ, ರಾಬರ್ಟ್ ಸನ್ ಪೇಟೆ ಕಡೆಯಿಂದ  ಕೆಎ04-EG-0836 ಪಲ್ಸರ್ ದ್ವಿಚಕ್ರವಾಹನದ ಸವಾರ ಮೊಹಮ್ಮದ್ ಶಾಯಿದ್ ರವರು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ  ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ್ದು, ಮೇರಿ ಜಾಕ್ಲಿನ್ ರವರನ್ನು ಚಿಕಿತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು,  ದಿನಾಂಕ 13.03.2019 ರಂದು ಸಂಜೆ 5.27 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚೌಡಪ್ಪ ಬಿನ್ ಹನುಮಪ್ಪ, ಜಂಗಮಗುರುವೇಪಲ್ಲಿ ಗ್ರಾಮ, ವಿ.ಕೋಟೆ ಮಂಡಲ್, ಆಂದ್ರಪ್ರದೇಶ ರವರ ಮಗಳಾದ ಸುಮಿತ್ರಾ ರವರನ್ನು ಒಂದು ವರ್ಷದ ಹಿಂದೆ ನಾಗರಾಜ್, ಜಕ್ಕರಸನಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ಸುಮಾರು ಎರಡು ತಿಂಗಳು ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡಿದ್ದು, ಕಾಲಕ್ರಮೇಣ ನಾಗರಾಜ್‌ ರವರು ಸುಮಿತ್ರಾ ರವರಿಗೆ  ತವರು ಮನೆಯಿಂದ ಹೆಚ್ಚಾಗಿ ವರದಕ್ಷಿಣೆ ತರುವಂತೆ ಬೈದು, ಹೊಡೆದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಅತ್ತೆ ಕಾಂತಮ್ಮ ರವರೂ ಸಹಾ ಸುಮಿತ್ರಾ ರವರನ್ನು ಹಿಂಸಿಸುತ್ತಿದ್ದು, ಇದನ್ನು ಸಹಿಸಲಾಗದೇ ದಿನಾಂಕ 13-03-2019 ರಂದು ಬೆಳಿಗ್ಗೆ 9-00 ಗಂಟೆಯಿಂದ 10-00 ಗಂಟೆಯ ಮಧ್ಯೆ ಕುರುಬೂರು ಗ್ರಾಮದ ಗೋಪಾಲರೆಡ್ಡಿ ರವರ ಕೃಷಿ ಹೊಂಡದ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ.

 ಇತರೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸೆಲ್ವರಾಜ್ ಬಿನ್ ಲೇಟ್ ಎಲನ್ ರವರು  2009 ನೇ ಸಾಲಿನಿಂದ ಬಿ.ಜಿ.ಎಂ.ಎಲ್. ಸಂಸ್ದೆಗೆ ಸೇರಿದ ಟಾಪ್ ಲೈನ್ ಮನೆ ಸಂಖ್ಯೆ ಸಿ-678 ರಲ್ಲಿ ವಾಸವಾಗಿದ್ದು, ದಿನಾಂಕ 11-03-2019 ರಂದು ಸಂಜೆ 6-45 ಗಂಟೆಯಲ್ಲಿ ಅನ್ಬಳಗನ್ ರವರು ದೂರುದಾರರು ವಾಸವಾಗಿರುವ ಮನೆಯ ಬಳಿ ಬಂದು “ಮನೆಯು ನನಗೆ ಸೇರಿದ್ದು, ಮನೆಯನ್ನು ಖಾಲಿ ಮಾಡಿ” ಎಂದು ಹೇಳಿ ಮನೆಯ ಕಾಂಪೌಂಡ್ ಗೆ ಆಕ್ರಮವಾಗಿ ನುಗ್ಗಿ ಗೇಟ್ ಮತ್ತು ಮನೆಯ ಮುಂಭಾಗಿಲು ಹೊಡೆದು ಹಾಕಿರುತ್ತಾನೆ.

ಅಕ್ರಮ ಮದ್ಯ ಮಾರಾಟ : ಇಲ್ಲ

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:13.03.2019 ರಂದು ರಾತ್ರಿ 7.00 ಗಂಟೆಯಲ್ಲಿ ಕಂಗಾಡ್ಲಹಳ್ಳಿಯ ಶಾಂತಮ್ಮ ಎಂಬುವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡುವವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ನಾರಾಯಣಸ್ವಾಮಿ, ಹೆಚ್.ಸಿ ಮತ್ತು  ಶ್ರೀ. ಸತೀಶ್ ರೆಡ್ಡಿ, ಪಿ.ಸಿ ರವರು ದಾಳಿ ಮಾಡಿದಾಗ ಮದ್ಯಪಾನ ಸೇವನೆ ಮಾಡುತ್ತಿದ್ದ ವ್ಯಕ್ತಿಗಳು ಓಡಿಹೋಗಿದ್ದು ಸ್ಥಳದಲ್ಲಿದ್ದ 1) 2 ಕಿಂಗ್ ಪಿಶರ್ ಬಿಯರ್ ಬಾಟಲುಗಳು ಒಂದೊಂದು 650 ಎಂ ಎಲ್ 2) 1 ಟಬೋರ್ಡ್ 650 ಎಂ ಎಲ್ 3) 5 ಐವಾರ್ಡ್ ವಿಸ್ಕಿ ಪಾಕೇಟ್ ಗಳು ಒಂದೊಂದು ಪಾಕೇಟ್ 90 ಎಂ ಎಲ್ 4) 1 ವರ್ಜಿನಲ್ ಚಾಯ್ಸ್ ವಿಸ್ಕಿ ಪಾಕೇಟ್ 90 ಎಂಎಲ್ 5) 2 ಬ್ಯಾಕ್ ಪೇಪರ್ ಪ್ಯಾಕೇಟ್ ಗಳು ಒಂದೊಂದು 180 ಎಂಎಲ್ 6) 1 ಮ್ಯಾಕ್ ಡೋಲ್ ರಮ್ 180 ಎಂಎಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 13.03.2019 ರಂದು ಸಂಜೆ 4.00 ಗಂಟೆಯಲ್ಲಿ ನ್ಯೂ ತೆಲುಗು ಮಾಡೆಲ್ ಹೌಸ್ ನ ಮನೆ ಸಂಖ್ಯೆ 01ರ ಮುಂದೆ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಜಯರಾಜ್‌ ಎಂಬುವರು ಕುಳಿತುಕೊಂಡು ಕಾನೂನುಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಮಾಡುತ್ತಿದ್ದು ಸದರಿ ಆಸಾಮಿಯನ್ನು ದೂರುದಾರರಾದ ಶ್ರೀ. ಮುರಳಿ, ಹೆಚ್.ಸಿ ಮತ್ತು  ಪಿಸಿ 288 ರವರು ವಶಕ್ಕೆ ಪಡೆದು ಆಸಾಮಿಯಿಂದ ಒಂದು ಪ್ಲಾಸ್ಟಿಕ್ ಲೋಟ ಮತ್ತು HAYWARDS CHEERS WHISKY 90ML ನ 5 ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.

 

Leave a Reply

Your email address will not be published. Required fields are marked *