ದಿನದ ಅಪರಾಧಗಳ ಪಕ್ಷಿನೋಟ 14ನೇ ಅಕ್ಟೋಬರ್‌ 2019

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೋಕೇಶ್ ಬಿನ್ ರಂಗಪ್ಪ, ಚಿಗರಾಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಾಯಿ ರಾಜಮ್ಮ, 42 ವರ್ಷ ರವರು ದಿನಾಂಕ: 13.10.2019 ರಂದು ಸಂಜೆ 06:00 ಗಂಟೆಯಲ್ಲಿ ಕೆ.ಜಿ.ಎಫ್. – ಬೇತಮಂಗಲ ರಸ್ತೆ  ಶ್ಯಾಂ ಪಾರ್ಮಹೌಸ್ ಬಳಿ ರಸ್ತೆಯ ಪಕ್ಕ ನಡೆದುಕೊಂಡು ಬರುತ್ತಿದ್ದಾಗ, ಯಾವುದೋ ಒಂದು ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜಮ್ಮ ರವರಿಗೆ ಡಿಕ್ಕಿಪಡಿಸಿ ಸ್ಥಳದಿಂದ ಪರಾರಿಯಾಗಿದ್ದು, ಅಪಘಾತದಿಂದ ರಾಜಮ್ಮ ರವರಿಗೆ ತೀರ್ವ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಕುಮಾರ್‌ ಬಿನ್ ಮುನಿರತ್ನಪ್ಪ, ಮಸ್ಕಂ, ಡಿ ಬ್ಲಾಕ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರ ಹೆಂಡತಿ ಎ.ರಕ್ಷಿತ ರವರು ದಿನಾಂಕ 07.10.2019 ರಂದು ಮದ್ಯಾಹ್ನ 2.30 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಲು ಬಿನ್ ಆದಿಮೂಲಂ, ಉರಿಗಾಂಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ 13.10.2019 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಸ್ಮಶಾನದ ಬಳಿ ಇರುವ ರಾಜಕಾಲುವೆಯಲ್ಲಿ ಸುಮಾರು 35-40 ವರ್ಷದ ಅನಾಮದೇಯ ಗಂಡಸಿನ  ಶವ ಬೋರಲಾಗಿ ಬಿದ್ದಿದ್ದು, ಕೊಳೆತು ದುರ್ವಾಸನೆ ಬರುತ್ತಿರುತ್ತೇಂದು ದೂರು.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಧಾಕರ್‌ ಬಿನ್ ನಾಗರಾಜ್, ಸೋರೇಗೌಡನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಾತ ಸಂಜೀವಪ್ಪ, 73 ರವರಿಗೆ ಸುಮಾರು ಹದಿನೈದು ವರ್ಷಗಳಿಂದ ಸಕ್ಕರೆ, ಅಲ್ಸರ್, ಗ್ಯಾಸ್ಟಿಕ್ ಖಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜುಗುಪ್ಸೆಗೊಂಡು, ದಿನಾಂಕ 13.10.2019 ರಂದು ಬೆಳಿಗ್ಗೆ 8.00 ಗಂಟೆಯಿಂದ ಮದ್ಯಾಹ್ನ  2.00 ಗಂಟೆ ಮದ್ಯೆ ಸಂಜೀವಪ್ಪ ರವರು ಅನಿಗಾನಹಳ್ಳಿಯ ಚಂದ್ರು ರವರ ನೀಲಗಿರಿ ತೋಪಿನಲ್ಲಿರುವ ಹೊಂಗೆಮರದ ಕೊಂಬೆಗೆ  ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *