ದಿನದ ಅಪರಾಧಗಳ ಪಕ್ಷಿನೋಟ 14ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 13.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. 

– ಕನ್ನ ಕಳುವು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಶಂಕರ್‌ ಬಿನ್ ಪೆರುಮಾಳ್‌ ನಾಯ್ಡು, ಗಣೇಶ್‌ಪುರಂ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು  ತನ್ನ ತಾಯಿಯೊಂದಿಗೆ ದಿನಾಂಕ 26.10.2018 ರಂದು ಮನೆಗೆ ಬೀಗ ಹಾಕಿಕೊಂಡು ತಮಿಳುನಾಡಿನ ನೇವೇಲಿಗೆ ಹೋಗಿ, ದಿನಾಂಕ 11.11.2018 ರಂದು ಬೆಳಗಿನ ಜಾವ 03-30 ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಮನೆಯ ಹಿಂಭಾಗದ ಭಾಗಿಲಿಗೆ ಹಾಕಿದ್ದ ಬೋಲ್ಟನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು, ಮನೆಯ ಹಾಲ್ ನಲ್ಲಿ ಇಟ್ಟಿದ್ದ 22,000/- ರೂ ಬೆಲೆ ಬಾಳುವ ಸಾಮ್ ಸಂಗ್ ಎಲ್.ಇ.ಡಿ ಟಿವಿ, ಡಿ.ವಿ.ಡಿ ಮತ್ತು ಒಂದು ಜೊತೆ ಸ್ವೀಕರ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :‍ 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮನೋಹರ್‌ ಬಿನ್ ವೆಂಕಟಾಚಲಂ, ಚೆಲ್ದಿಗಾನಹಳ್ಳಿ ಗ್ರಾಮ, ಕುಪ್ಪಂ ತಾಲ್ಲೂಕು, ಆಂದ್ರಪ್ರದೇಶ ರವರ ದ್ವಿ ಚಕ್ರ ವಾಹನ ಹೊಂಡಾ ಸೈನ್ ಸಂಖ್ಯೆ ಕೆ.ಎ53-ಎಕ್ಸ್-6498 ವಾಹನವನ್ನು ದಿನಾಂಕ-12-11-2018 ರಂದು ರಾತ್ರಿ  8.30 ಗಂಟೆಯಲ್ಲಿ  ಅದೇ ಗ್ರಾಮದ ಮುರಳಿ, 27 ವರ್ಷ ರವರು ಚಲಾಯಿಸಿಕೊಂಡು ವಿ.ಕೋಟೆ-ಕುಪ್ಪಂ ರಸ್ತೆ ಸಂದಘಟ್ಟ ಕ್ರಾಸ್ ಬಳಿ ಅತಿವೇಗ ಮತ್ತು ಅಜಾಗೂರೂಕತೆ ಯಿಂದ ಚಲಾಯಿಸಿಕೊಂಡು ಹೋಗಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಇರುವ ವಿದ್ಯುತ್ ಪೋಲಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.

-ಅಸ್ವಾಬಾವಿಕ ಮರಣ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಿಸ್ಟರ್‌ ಕಾಂಚನಾ ಬಿನ್ ಎಸ್‍ ಟಿ ಜಾರ್ಜ್, ನ್ಯೂ ವೆಸ್ಟ್‌ ಗಿಲ್ಬರ್ಟ್ಸ್, ಮಾರಿಕುಪ್ಪಂ, ಕೆ.ಜಿ.ಎಫ್ ರವರ ತಮ್ಮ ಫೆಡ್ರಿಕ್, 56 ವರ್ಷ ರವರಿಗೆ ಪಾರ್ಶ್ವವಾಯು ಹೊಡೆದಿದ್ದರಿಂದ ಚಿಕಿತ್ಸೆಯನ್ನು ಕೊಡಿಸಿದ್ದರು ಸಹ ಗುಣಮುಖವಾಗದ ಕಾರಣ ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳಲು ಯಾರು ಇಲ್ಲವೆಂದು ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ  ದಿನಾಂಕ 12.11.2018 ರಂದು ಮದ್ಯಹ್ಮಾ 12.30 ಗಂಟೆಯಿಂದ 14.30 ಗಂಟೆಯ ಮದ್ಯೆ ಯಾವುದೋ ವಿಷ ಸೇವನೆ ಮೃತಪಟ್ಟಿರುತ್ತಾನೆ.

Leave a Reply

Your email address will not be published. Required fields are marked *