ದಿನದ ಅಪರಾಧಗಳ ಪಕ್ಷಿನೋಟ 14ನೇ ಫೆಬ್ರವರಿ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.02.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ತೊಳಿಸಮ್ಮ ಕೋಂ ತಮ್ಮಯ್ಯ, ಗೋವಿಂದಪುರ, ಬೆಂಗಳೂರು ರವರು ದಿನಾಂಕ-13-02-2018 ರಂದು  ಕಮ್ಮಸಂದ್ರ ದೇವಾಸ್ಥಾನಕ್ಕೆ ಹೋಗಿ ಬೆಳಿಗ್ಗೆ 11.00 ಗಂಟೆಯಿಂದ 12.00 ಗಂಟೆಯಲ್ಲಿ ದೇವರುಗಳ ದರ್ಶನ ಮಾಡುವಾಗ ಯಾರೋ ಕಳ್ಳರು ದೂರುದಾರರ 40 ಗ್ರಾಂನ 1,00,000/- ರೂ ಬೆಲೆ ಬಾಳುವ ಬಂಗಾರದ ಕತ್ತಿನ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :‍ ‌02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಬ್ಬಲಕ್ಷ್ಮೀ ಕೋಂ ರಮೇಶ್, ದೇವಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ರಮೇಶ್ ರವರು ದಿನಾಂಕ 12-02-2018 ರಂದು ಮದ್ಯಾನ 1.00 ಗಂಟೆಯಲ್ಲಿ ಟ್ಯಾಕ್ಟರ್ ಸಂಖ್ಯೆ ಕೆ.ಎ 08 ಟಿ 5268 ರಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡು ಕಲ್ಲುಗಳ ಮೇಲೆ ಕುಳಿತುಕೊಂಡು ಸೀತಂಪಲ್ಲಿ ಗೆ ಹೋಗಲು  ಗುಟ್ಟಹಳ್ಳಿ ವೃತ್ತದ ಬಳಿ  ಟ್ಯಾಕ್ಟರ್ ಚಾಲಕ ಟ್ಯಾಕ್ಟರ್ ನ್ನು ಅತಿವೇಗ ಮತ್ತು ಅಜಾಗೂಕತೆಯಿಂದ ಚಲಾಯಿಸಿದಾಗ, ರಮೇಶ್ ರವರು ಟ್ರಾಲಿ ಮೇಲಿಂದ ಕೆಳಗೆ ಬಿದ್ದಾಗ, ಟ್ರಾಲಿ ಚಕ್ರ ಮೇಲೆ ಹರಿದು ಮೃತ ಪಟ್ಟಿರುತ್ತಾನೆ.

ಉರಿಗಾಂ ಪೊಲೀಸ್  ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ತಂಗರಾಣಿ ಕೋಂ ರಘು, ಎಂ.ಎಲ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು   ದಿನಾಂಕ: 10.02.2018 ರಂದು ಬೆಳಿಗ್ಗೆ 7.30 ಗಂಟೆಗೆ ಉರಿಗಾಂ ಸ್ಟೇಷನ್ ಕಡೆಯಿಂದ ಮನೆಗೆ ವಾಪಸ್ಸು ನಡೆದುಕೊಂಡು ಹೋಗುವ ವೇಳೆಯಲ್ಲಿ ಅವರ ಹಿಂದಿನಿಂದ ಆರೋಪಿ ಜಯರಾಮನ್ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ08-ಕೆ8042 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿಹೊಡೆಸಿದ ಪ್ರಯುಕ್ತ ದೂರುದಾರರ ಬಲಕಾಲು ಮುರಿದು ಗಾಯವಾಗಿರುತ್ತೆ.

Leave a Reply

Your email address will not be published. Required fields are marked *