ದಿನದ ಅಪರಾಧಗಳ ಪಕ್ಷಿನೋಟ 14ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 13.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮನುಷ್ಯ ಕಾಣೆಯಾಗಿರುವ ಪ್ರಕರಣ: 02

                ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಮಹಿಳಾ ಪ್ರಕರಣ ದಾಖಲಾಗಿರುತ್ತದೆ.

೧. ಈ ಕೇಸಿನ ಪಿರ್‍ಯಾದಿಯಾದ ಶ್ರೀಮತಿ ತೊಳಸಿ, ದೇಶಿಹಳ್ಳಿ ಗ್ರಾಮ ಬಂಗಾರಪೇಟೆ ರವರ ಮಗಳಾದ ಭಾನುಪ್ರಿಯಾ, ೩೧ ವರ್ಷ ರವರು ಸುಮಾರು ಆರು ತಿಂಗಳ ಹಿಂದೆ ಬಂಗಾರಪೇಟೆಯ ದೇಶಿಹಳ್ಳಿಯಲ್ಲಿರುವ ಪಿರ್ಯಾದಿಯ ಮೈದುನನ ಮನೆಗೆ ಬಂದಿರುತ್ತಾರೆ. ದಿನಾಂಕ 09.12.2020 ರಂದು ಬೆಳಿಗ್ಗೆ ಸುಮಾರು 9.30 ಗಂಟೆಯಲ್ಲಿ ಭಾನುಪ್ರಿಯಾ ರವರು ಬಂಗಾರಪೇಟೆಯ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬರದೇ ಕಾಣೆಯಾಗಿರುತ್ತಾರೆ.

೨. ದಿನಾಂಕ 12.12.2020 ರಂದು ಈ ಕೇಸಿನ ಪಿರ್ಯಾದಿದಾರರಾದ ರಾಮಾಂಜಿನಪ್ಪ, ಅನಿಗಾನಹಳ್ಳಿ ಗ್ರಾಮ ಬಂಗಾರಪೇಟೆ ರವರ ಹೆಂಡತಿ  ಶ್ರೀಮತಿ ಅಂಜಿನಮ್ಮ, ವಯಸ್ಸು 40 ವರ್ಷ ರವರು ಮನೆಯಲ್ಲಿರದೇ ಕಾಣೆಯಾಗಿರುತ್ತಾರೆಂದು, ಆಂಜಿನಮ್ಮ ರವರ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲವೆಂದು, ಆಂಜಿನಮ್ಮ ರವರು ಪತ್ತೆಯಾಗಿರುವುದಿಲ್ಲ.

Leave a Reply

Your email address will not be published. Required fields are marked *