ದಿನದ ಅಪರಾಧಗಳ ಪಕ್ಷಿನೋಟ 14ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 13.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಶ್ರೀನಿವಾಸ್ ಬಿನ್ ಚಿಕ್ಕನಾರಾಯಣಪ್ಪ, ನ್ಯೂಟೌನ್, ಬೇತಮಂಗಲ, ಕೆ.ಜಿ.ಎಫ್ ತಾಲ್ಲೂಕು ರವರ ಅಣ್ಣ ಆನಂದ್, 44 ವರ್ಷ ರವರು  ದಿನಾಂಕ:-12.10.2020 ರಂದು ಬೆಳಗ್ಗೆ 9:15 ಗಂಟೆಯಲ್ಲಿ ದ್ವಿಚಕ್ರವಾಹನ ಸಂಖ್ಯೆ ಕೆಎ-51-ಜೆ-9688 ರಲ್ಲಿ ಬೇತಮಂಗಲ-ಕೆ.ಜಿ.ಎಫ್ ಮುಖ್ಯ ರಸ್ತೆ ಬೇತಮಂಗಲ ನ್ಯೂಟೌನ್ ಬಳಿ ಬರುತ್ತಿದ್ದಾಗ, ಹಿಂಬದಿಯಿಂದ ದ್ವಿಚಕ್ರವಾಹನ ಸಂಖ್ಯೆ ಕೆಎ-08-ವೈ-0506 ರ ಸವಾರ  ಆತನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆನಂದ್ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆನಂದ್ ರವರು  ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಬ್ದುಲ್ ರೆಹಮಾನ್‌ ಬಿನ್ ಮೊಹ್ಮದ್ ಹುಸ್ಮಾನ್, ಸರ್ಕಾರಿ ಉರ್ದು ಶಾಳೆ ಹತ್ತಿರ, ಬಂಗಾರಪೇಟೆ ರವರು ಮನೆಯನ್ನು ನವೀಕರಣ ಮಾಡುತ್ತಿದ್ದಾಗ, ದಿನಾಂಕ 23.09.2020 ರಂದು ಸಂಜೆ 5.00 ಗಂಟೆಯಲ್ಲಿ ದೂರುದಾರರ ಚಿಕ್ಕಪ್ಪನ ಮಕ್ಕಳಾದ ಮೊಹಮದ್ ಅಶ್ವಾಕ್ ಮತ್ತು ಬಲೀಕುದ್ದೀನ್ ರವರುಗಳು ಬಂದು, ಗೋಡೆಯನ್ನು ಕಬ್ಬಿಣದ ಗಡಾರೆಯಿಂದ ಹೊಡೆದಿದ್ದು, ದೂರುದಾರರು ಕೇಳಿದ್ದಕ್ಕೆ ಕಬ್ಬಿಣದ ಗಡಾರಿಯಿಂದ ಹಲ್ಲೆ ಮಾಡಲು ಬಂದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರುಗೇಶ್ ಬಿನ್ ಕೋಡ್ಯಪ್ಪ, ದೇವರಗುಟ್ಟಹಳ್ಳಿ ಗ್ರಾಮ ರವರ ತಂದೆ ಕೋಡ್ಯಪ್ಪ, 65 ವರ್ಷ ರವರು ದಿನಾಂಕ 12.10.2020 ರಂದು ರಾತ್ರಿ  ಹಸುಗಳ ಕೊಟ್ಟಿಗೆಯಲ್ಲಿ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *