ದಿನದ ಅಪರಾಧಗಳ ಪಕ್ಷಿನೋಟ 14ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 13.09.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಇತರೆ :  02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.09.2020 ರಂದು ಸಂಜೆ 5.30  ಗಂಟೆಯಲ್ಲಿ ಕದರಿನತ್ತ ಗ್ರಾಮದ ವಾಸಿಯಾದ ರಕ್ಮೋಜಿರಾವ್ ಬಿನ್ ಮನ್ನೋಜಿರಾವ್ ರವರ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿ/ಪರವಾನಿಗಿ ಇಲ್ಲದೆ ಮದ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈತನನ್ನು ಮತ್ತು ಸ್ಥಳದಲ್ಲಿದ್ದ 1) Haywards Deluxe Whisky 90 ml 05 ಮದ್ಯದ ಖಾಲಿ ಪಾಕೇಟ್ ಗಳು, 2) ಐದು ಪ್ಲಾಸ್ಟಿಕ್ ಲೋಟಗಳು, 3) ಐದು  ಖಾಲಿ ವಾಟರ್ ಪ್ಯಾಕೆಟ್ ಗಳು ಮತ್ತು ಅರ್ಧಭಾಗದಷ್ಟು ನೀರಿರುವ ಬಿಸ್ಲೆರಿ ವಾಟರ್ ಬಾಟೆಲ್ ಗಳನ್ನು ಪಿ.ಎಸ್.ಐ ಶ್ರೀ ದಯನಂದ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.09.2020 ರಂದು ಮದ್ಯಾಹ್ನ 3.15 ಗಂಟೆಯಲ್ಲಿ ಕದಿರೇನಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸ ಬಿನ್ ಲೇಟ್ ವೆಂಕಟಗೌಂಡರ್ ರವರ ವಾಸದ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿ/ಪರವಾನಿಗಿ ಇಲ್ಲದೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈತನನ್ನು ಮತ್ತು ಸ್ಥಳದಲ್ಲಿದ್ದ, 1) Haywards Cheers Whisky 90 ml ನ 10 ಮದ್ಯದ ಪಾಕೇಟ್ ಗಳು ಅರ್ದಂಬರ್ಧ ಮದ್ಯವಿದ್ದು, ಚೆಲ್ಲಿ ಹೋಗಿರುತ್ತದೆ, ಎಂಟು ಪ್ಲಾಸ್ಟಿಕ್ ಲೋಟಗಳು, ಹತ್ತು ಖಾಲಿ ವಾಟರ್ ಪ್ಯಾಕೆಟ್ ಗಳು ಮತ್ತು ಅರ್ಧಭಾಗದಷ್ಟು ನೀರಿರುವ ಬಿಸ್ಲೆರಿ ವಾಟರ್ ಬಾಟೆಲ್ ಗಳನ್ನು ಪಿ.ಎಸ್.ಐ ಶ್ರೀ. ಜಗದೀಶ್‌ರೆಡ್ಡಿ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಮರೇಂದ್ರ ಬಿನ್ ವೆಂಕಟರಾಮರೆಡ್ಡಿ, ಸೋನೇಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಹೆಂಡತಿ ಶ್ರೀಮತಿ ಅಖೀಲಾ, 27 ವರ್ಷ ರವರು ದಿನಾಂಕ 12.09.2020 ರಂದು ಬೆಳಗ್ಗೆ 9.30 ಗಂಟೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *