ದಿನದ ಅಪರಾಧಗಳ ಪಕ್ಷಿನೋಟ 14ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  13.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಚಂದ್ರಕಲಾ ಕೊಂ ಕಿರಣ್‌ ಕುಮಾರ್‌, ಆರ್‌.ಬಿ.ಐ ಬಡಾವಣೆ, ಬೆಂಗಳೂರು ರವರು ಗಂಡ ಕಿರಣ್‌ ಕುಮಾರ್‌, 38 ವರ್ಷ ರವರೊಂದಿಗೆ ದಿನಾಂಕ-08-08-2020 ರಂದು ಮದ್ಯಾಹ್ನ 3.30 ಗಂಟೆಗೆ ಕಾರಿನಲ್ಲಿ ಬೇತಮಂಗಲಕ್ಕೆ ಬರುತ್ತಿದ್ದಾಗ, ಬೇತಮಂಗಲದ ಸಂತೇಗೇಟ್ ಬಳಿ ದೂರುದಾರರ ಗಂಡ ಕಿರಣ್‌ಕುಮಾರ್‌ ಕಾರಿನಿಂದ ಇಳಿದು ಆಮೇಲೆ ಬರುತ್ತೇನೆ ಎಂದು ದೂರುದಾರರಿಗೆ ಹೇಳಿ ಯಾವುದೋ ಬಸ್ಸಿನಲ್ಲಿ ಹೋದವರು ವಾಪಸ್ ಬರದೆ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಚಂದ್ರನ್ ಬಿನ್ ಸುಬ್ರಮಣಿ,  ನ್ಯೂ ಮಾಡೆಲ್ ಹೌಸ್, ಕೆ.ಜಿ.ಎಫ್ ರವರ ಅಣ್ಣ ರಾಜ,  48 ವರ್ಷ ರವರು ಮಾನಸಿಕ  ಆಸ್ವಸ್ಥ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 13-08-2020 ರಂದು ರಾಜ ರವರು ಅಲೆದಾಡಿಕೊಂಡು  ಊಟ  ಇಲ್ಲದೇ  ಅನಾರೋಗ್ಯ ಗೊಂಡು  ವಿಕೋಟೆ ಕುಪ್ಪಂ ರಸ್ತೆಯ ಪಂಥನಹಳ್ಳಿ ಗೇಟ್ ಬಳಿ ಅನಾರೋಗ್ಯ ಗೊಂಡು  ಮೃತ ಪಟ್ಟಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಬಿನ್ ನಟೇಶ್, ಬೆನ್ನವಾರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗನಾದ ಅಜಯ್, 12 ವರ್ಷ ರವರು ದಿನಾಂಕ 13.08.2020  ರಂದು ಬೆಳಿಗ್ಗೆ ಕೋಳಿ ಮರಿಗಳಿಗೆ ಮಕ್ಕರಿ ಮುಚ್ಚುವಾಗ, ಒಂದು ಕೋಳಿ ಸತ್ತುಹೋಗಿದ್ದು, ಮನೆಯಲ್ಲಿ ತಿಳಿದರೆ ಹೊಡೆಯುತ್ತೀರೆಂದು ಬೆದರಿ ಅಜಯ್‌ ರವರು ಚಿಕ್ಕಪ್ಪ ಮುರುಗೇಶ್ ರವರ ಮನೆಗೆ  ಹೋಗಿ ಇಲಿಗಳಿಗೆ ತಂದು  ಇಟ್ಟಿದ್ದ  ವಿಷದ  ಔಷದಿ(ಪೋರೇಟ್)  ಅನ್ನು ತಿಂದು ಪುನಃ  ಮನೆಗೆ ವಾಪಸ್ಸು ಬಂದು ಮಲಗಿಕೊಂಡಿದ್ದು, ದೂರುದಾರರು ತಕ್ಷಣ ದ್ವಿಚಕ್ರ ವಾಹನದಲ್ಲಿ ಅಜಯ್ ರವರನ್ನು ಕುಪ್ಪಂ  ಪಿ.ಇ.ಎಸ್  ಆಸ್ಪತ್ರೆಗೆ  ಕರೆದುಕೊಂಡು ಚಿಕಿತ್ಸೆಗೆ ದಾಖಲು ಮಾಡಿದ್ದು,  ಚಿಕಿತ್ಸೆ  ಫಲಕಾರಿಯಾಗದೆ  ಅಜಯ್  ರವರು  ಬೆಳಿಗ್ಗೆ 11.10  ಗಂಟೆಗೆ  ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *