ದಿನದ ಅಪರಾಧಗಳ ಪಕ್ಷಿನೋಟ 14ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 13.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕನ್ನ ಕಳುವು : 01

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.  ಬಾಲಸುಬ್ರಮಣಿ ಬಿನ್ ಚಂದ್ರಶೇಖರ್‌, ಟಾಪ್‌ ಲೈ‌ನ್‌, ಚಾಂಪಿಯನ್‌ರೀಫ್ಸ್‌‌, ಕೆ.ಜಿ.ಎಫ್ ರವರು ದಿನಾಂಕ:28.06.2020 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ದಿನಾಂಕ:11.07.2020 ರಂದು ರಾತ್ರಿ ದೂರುದಾರರ ಮನೆಯ ಡೋರ್ ಲಾಕ್ ಮತ್ತು ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮನೆಯ ಒಳಗೆ ಹೋಗಿ ಮನೆಯಲ್ಲಿಟ್ಟಿದ್ದ (1) 33 ಇಂಚಿನ LG TV ಅಂದಾಜು, (2) ಲ್ಯಾಪ್ ಟ್ಯಾಪ್, (3) ಟೇಬಲ್ ಪ್ಯಾನ್, (4) 44 ಗ್ರಾಂ ತೂಕದ ಬಂಗಾರದ ಒಡವೆಗಳು, (5) 103 ಗ್ರಾಮ ತೂಕದ ಬೆಳ್ಳಿ ಸಾಮಾನುಗಳು ಮತ್ತು ನಗದು 2,000 ರೂ ಎಲ್ಲ ಒಟ್ಟು 1,84,600/- ರೂಗಳ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕುಮಾರಿ. ಕಸ್ತೂರಿ ಬಿನ್ ಲೇಟ್ ಶಾಂತ್‌ಕುಮಾರ್‌, 5ನೇ ಕ್ರಾಸ್, ಗೀತಾ ರಸ್ತೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರಿಗೆ ದಿನಾಂಕ 30.01.2020 ರಂದು ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಟಿ.ಸಿ.ಪಾಳ್ಯ ವಾಸಿ ವಿಜಯ ರಾಘವೇಂದ್ರ ರವರ ಜೊತೆಯಲ್ಲಿ ನಿಶ್ವಿತಾರ್ಥ ಆಗಿದ್ದು, ನಂತರ ವಿಜಯ, ವೆಂಕಟೇಶ್‌, ತಿಲಗ, ಗಂಗಾಧರ, ರವಿ ರವರುಗಳು ದೂರುದಾರರ  ಮನೆಗೆ ಬಂದು 250 ಗ್ರಾಂ ಬಂಗಾರವನ್ನು ಹಾಗೂ ದ್ವಿ-ಚಕ್ರ ವಾಹನ ಮತ್ತು ಮದುವೆ ಖರ್ಚು ನೀಡಬೇಕೆಂದು ಒತ್ತಾಯ ಮಾಡಿರುತ್ತಾರೆ. ದಿನಾಂಕ 25.05.2020 ರಂದು ಮದುವೆ ದಿನಾಂಕವನ್ನು ನಿಗದಿ ಪಡಿಸಿ ಲಗ್ನ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದ್ದು, ವೆಂಕಟೇಶ್‌‌ ರವರು ದೂರುದಾರರ ತಾಯಿಗೆ ಪೋನ್ ಮಾಡಿ “ ಈಗ ಕರೊನಾ ವೈರಸ್ ಮತ್ತು ಲಾಕ್ ಡೌನ್ ನಡೆಯುತ್ತಿದೆ  ನನ್ನ ಮಗನಿಗೆ ಗ್ರಹಗತಿ ಸರಿ ಇರುವುದಿಲ್ಲ, ನಿನ್ನ ಮಗಳನ್ನು ಮದುವೆ ಮಾಡಿಕೊಂಡರೆ ನನ್ನ ಮಗನಿಗೆ ಪ್ರಾಣ ಅಪಾಯವಿದೆ ಬೇರೆ ಹುಡುಗನನ್ನು ನೋಡಿಕೊಳ್ಳಿ” ಎಂದು ಹೇಳಿದ್ದು, ನಂತರ ದಿನಾಂಕ:-02.07.2020 ರಂದು ಗೀತಾ ರಸ್ತೆಯ ಕಾರ್ನರ್ ಬಳಿ ತಿಲಗ, ಗಂಗಾಧರ್‌ ಮತ್ತು ವಿಜಯ ರವರ ಸಹೋದರ ದೂರುದಾರರಿಗೆ ಮತ್ತು ಅವರ ತಾಯಿಗೆ  ಕೆಟ್ಟದಾಗಿ ಬೈದಿರುತ್ತಾರೆ.

Leave a Reply

Your email address will not be published. Required fields are marked *