ದಿನದ ಅಪರಾಧಗಳ ಪಕ್ಷಿನೋಟ 14ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 13.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕಲಂ 304 ಐಪಿಸಿ ಅಪರಾಧಾತ್ಮಕ ಮಾನವ ವದೆ (culpable homicide not amounting to murder) ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸಂಗೀತಾ ಕೊಂ ಜೋಸೆಫ್‌, ಸುಸೈಪಾಳ್ಯ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ 13.05.2020 ರಂದು ಸಂಜೆ 7.00 ಗಂಟೆಯ ರಿಚರ್ಡ್ ರವರು ದೂರುದಾರರ ಮನೆಯ ಬಳಿ ಬಂದು ದೂರುದಾರರ ಗಂಡ ಜೋಸೆಫ್ ರವರನ್ನು ಕರೆದುಕೊಂಡು ಹೋಗಿ,  ಗಣಿಯೊಳಗೆ ಇಳಿದರೆ ಜನರು ಸಾಯುತ್ತಾರೆಂದು ತಿಳಿದಿದ್ದರು ಸಹ  ಆರೋಪಿ ರಿಚರ್ಡ್ ರವರು ನಿರ್ಲಕ್ಷತೆಯನ್ನು ತೋರಿಸಿ ಜೋಸೆಫ್, ಕಂದ  ಮತ್ತು ಸಂತೋಷ್ @ ಪಡಿಯಪ್ಪ ರವರನ್ನು  ಮಾರಿಕುಪ್ಪಂನ ಹಾಂಕಾಕ್ಸ್ ಬ್ಲಾಕ್ ಬಳಿ ಇರುವ ಎಂ.ಎಂ ಶಾಷ್ಟ್ ನೊಳಗೆ ಚಿನ್ನ ಮಿಶ್ರೀತ ಮಣ್ಣನ್ನು ತೆಗೆದುಕೊಂಡು ಬರಲು ಇಳಿಸಿದ್ದು, ಮೂರು ಜನರು ಮೇಲಕ್ಕೆ ಬರದೇ ಗಣಿಯೊಳಗೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *