ದಿನದ ಅಪರಾಧಗಳ ಪಕ್ಷಿನೋಟ 14ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 13.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : ಇಲ್ಲ

– ಕೊಲೆ ಪ್ರಯತ್ನ : ಇಲ್ಲ

– ಡಕಾಯಿತಿ :  ಇಲ್ಲ

– ಸುಲಿಗೆ : ಇಲ್ಲ

– ಕನ್ನಕಳುವು : ಇಲ್ಲ

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಬಾಬು, ಕುರುಬರಹಳ್ಳಿ ಬಂಗಾರಪೇಟೆ ರವರು  ಒಂದು ವರ್ಷದ ಹಿಂದೆ ಬೆಂಗಳೂರಿಗೆ ಹೋಗಲು ತನ್ನ ಸ್ವಂತ ದ್ವಿಚಕ್ರ ವಾಹನ ಸಂಖ್ಯೆ ಕೆಎ-08 ಡಬ್ಲೂ-3131 ರಲ್ಲಿ ಬಂಗಾರಪೇಟೆ ಬಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿ ಲಾಕ್ ಮಾಡಿಕೊಂಡು ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿ ನಂತರ ಸಂಜೆ ಸುಮಾರು 6-30 ಗಂಟೆಗೆ ಬಂದು ನೋಡಲಾಗಿ ತನ್ನ ದ್ವಿಚಕ್ರವಾಹ ಕಾಣೆಯಾಗಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ದ್ವಿಚಕ್ರವಾಹನವನ್ನು ಹುಡುಕಾಡಲಾಗಿ ಪತ್ತೆಯಾಗದ ಕಾರಣ ಮತ್ತು ಮೂಲ ದಾಖಲಾತಿಗಳು ಪೈನಾನ್ಸ್ ನಲ್ಲಿ ಇಟ್ಟಿದ್ದು ಪಡೆದುಕೊಳ್ಳುವ ಕಾರಣ ತಡವಾಗಿ ಬಂದು ದೂರು ನೀಡಿರುತಾರೆ.

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.13.03.2020 ರಂದು ಈ ಕೇಸಿನ ಪಿರ್ಯಾದಿ ಶಂಕರಪ್ಪ, ಎತ್ತೂರು ಗ್ರಾಮ, ಕ್ಯಾಸಂಬಳಿ ರವರ ತಮ್ಮನಾದ ರವೀಂದ್ರ ಬಾಬು ರವರು ತಮ್ಮ ಪಲ್ಸರ್ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ 08 ಎಸ್ 3069 ರಲ್ಲಿ ಹಿಂಬದಿಯಲ್ಲಿ ತನ್ನ ತಾಯಿಯಾದ ಜಯಮ್ಮ , ೬೦ ವರ್ಷ ರವರನ್ನು ಕುಳ್ಳರಿಸಿಕೊಂಡು ಕ್ಯಾಸಂಬಳ್ಳಿಯ ಕೆರೆ ಪಕ್ಕದ ರಸ್ತೆಯಲ್ಲಿ ಮದ್ಯಾಹ್ನ 1.00 ಗಂಟೆಯಲ್ಲಿ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂಧ ಚಲಾಯಿಸಿಕೊಂಡು ಬರುತ್ತಿದ್ದಾಗ ರಸ್ತೆಯಲ್ಲಿ ಕುರಿಗಳು ಅಡ್ಡ ಬಂದಿದ್ದರಿಂದ ರವೀಂದ್ರ ಬಾಬು ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿ ಕುಳಿತಿದ್ದ ಜಯಮ್ಮ ರವರು ರಸ್ತೆ ಮೇಲೆ ಬಿದ್ದು ಅವರ ಮುಖಕ್ಕೆ ರಕ್ತ ಗಾಯ ವಾಗಿರುತ್ತೆ, ನಂತರ ಜಯಮ್ಮ ರವರನ್ನು ಚಿಕಿತ್ಸೆಗೆ ಕೋಲಾರ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಪಲಾರಿಯಾಗದೇ ಮೃತ ಪಟ್ಟಿರುತ್ತಾರೆ.

– ಮೋಸ/ವಂಚನೆ : ಇಲ್ಲ

– ದೊಂಬಿ : ಇಲ್ಲ

ಜೂಜಾಟ ಕಾಯ್ದೆ : ಇಲ್ಲ

– ಅಪಹರಣ :  ಇಲ್ಲ

– ಹಲ್ಲೆ : ಇಲ್ಲ

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : ಇಲ್ಲ

– ಅಕ್ರಮ ಮದ್ಯ ಮಾರಾಟ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.03.2020 ರಂದು ರಾತ್ರಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಜಗದೀಶ್ ರೆಡ್ಡಿ ರವರು ಹಾಗೂ ಅವರ  ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನ ನಗರಗಸ್ತಿನಲ್ಲಿದ್ದಾಗ, ಆರೋಪಿಯಾದ ನಾಗಪ್ಪ ಬಿನ್ ರಾಮಣ್ಣ, ಸೂಲಿಕುಂಟೆ ಗ್ರಾಮ ಬಂಗಾರಪೇಟೆ ಎಂಬುವರು ಅವರ ಟೀ ಅಂಗಡಿ ಬಳಿ  ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಪಂಚರ ಸಮಕ್ಷಮ ದಾಳಿ ಮಾಡಿ, ಸ್ಥಳದಲ್ಲಿದ್ದ, ಮಧ್ಯದ  ಪಾಕೇಟ್ ಗಳು, ವಶಪಡಿಸಿಕೊಂಡು, ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

– ಇತರೆ : ಇಲ್ಲ

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

– ಅಸ್ವಾಭಾವಿಕ ಮರಣ ಪ್ರಕರಣ : ಇಲ್ಲ

 

Leave a Reply

Your email address will not be published. Required fields are marked *