ದಿನದ ಅಪರಾಧಗಳ ಪಕ್ಷಿನೋಟ 14ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:13.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗೇಶ್‌ ಬಿನ್ ತಿಮ್ಮಯ್ಯ, ತಿಮ್ಮಾಪುರ ಗ್ರಾಮ, ಬಂಗಾರಪೇಟೆ ತಾಲ್ಲುಕು ರವರ ಮಗನಾದ 5 ವರ್ಷದ ಗಗನ್ ಎಂಬುವರು ದಿನಾಂಕ 13.02.2020 ರಂದು ಬೆಳಿಗ್ಗೆ 9.45 ಗಂಟೆಯಲ್ಲಿ ತಿಮ್ಮಾಪುರ ಗ್ರಾಮದಲ್ಲಿರುವ ಅಂಗನವಾಡಿ ಶಾಲೆಯ ಬಳಿ ಆಟವಾಡುತ್ತಿದ್ದಾಗ, ಮರಗಲ್ ಕಡೆಯಿಂದ ಆಟೋ ಸಂಖ್ಯೆ ಕೆಎ-08-7438 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗಗನ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ, ಗಗನ್ ರವರಿಗೆ ರಕ್ತಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *