ದಿನದ ಅಪರಾಧಗಳ ಪಕ್ಷಿನೋಟ 14ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:‍13.01.2020 ರಂದು ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರಿಮತಿ. ಸೂರ್ಯಭಾಮ ಕೊಂ ಡ್ಯಾಲಿ, ಪಿಚರ್ಡ್‌ ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ.13.01.2020 ರಂದು ಬೆಳಿಗ್ಗೆ 11-45 ಗಂಟೆಗೆ ಬ್ಯಾಂಕ್ ನಲ್ಲಿ 1 ಲಕ್ಷ 10 ಸಾವಿರ ರೂ (ಒಂದು ಲಕ್ಷ ಹತ್ತು ಸಾವಿರ) ಹಣ ಡ್ರಾ ಮಾಡಿ ಬ್ಯಾಗಿನಲ್ಲಿ ಹಣ, ಬ್ಯಾಂಕ್ ಅಕೌಂಟ್ ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮೊಬೈಲ್ ಪೋನ್ ಇಟ್ಟಿಕೊಂಡು ನಡೆದುಕೊಂಡು  5 ನೇ ಕ್ರಾಸ್ ನಲ್ಲಿ ಹೋಗುವಾಗ, ದೂರುದಾರರ ಕೈಯಲ್ಲಿದ್ದ ಹಾಲಿನ ಪ್ಯಾಕೇಟ್ ಕೆಳಗೆ ಬಿದ್ದಿದು, ಯಾರೋ ಇಬ್ಬರು ವಯಸ್ಕ ಗಂಡಸರು ದ್ವಿಚಕ್ರ ವಾಹನದಲ್ಲಿ ಬಂದು ದೂರುದಾರರ ಬಳಿ ವಾಹನ ನಿಲ್ಲಸಿ, ಇಬ್ಬರೂ ಆಕೆಯ ಬಳಿ ಮಾತಾಡಿ, ದೂರುದಾರರು ಕೆಳಗೆ ಬಿದಿದ್ದ ಹಾಲಿನ ಪ್ಯಾಕೇಟ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಸದರಿ ಆರೋಪಿಗಳ ಪೈಕಿ ಒಬ್ಬ ಪಿರ್ಯಾದಿ ಬಳಿಯಿದ್ದ ಹಣದ ಬ್ಯಾಗನ್ನು ಕೊಡು ಇಡುದುಕೊಳ್ಳುತ್ತೇನೆಂದು ಹೇಳಿದ್ದು, ದೂರುದಾರರು ಹಣವಿದ್ದ ಬ್ಯಾಗನ್ನು ಆತನ ಬಳಿ ಕೊಟ್ಟು, ಕೆಳಗೆ ಬಿದಿದ್ದ ಹಾಲಿನ ಪ್ಯಾಕೇಟ್ ತೆಗೆದುಕೊಂಡು ಪುನಃ ಅವರ ಬಳಿ ಮಾತಾಡಿದಾಗ ಆಕೆಯ ಮನಸ್ಸನ್ನು ಪರಿವರ್ತಿಸಿ, ಆಕೆಯ ಬಳಿಯಿದ್ದ ಹಣವನ್ನು ಮೋಸದಿಂದ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೊರಟು ಹೋಗಿರುತ್ತಾರೆ.

– ಹಲ್ಲೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ವೆಂಕಟೇಶಪ್ಪ, ಸಿದ್ದನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಬೆಸ್ಕಾಂ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 12.01.2020 ರಂದು ಮಧ್ಯಾಹ್ನ 2.00 ಗಂಟೆಗೆ ತಮ್ಮ ಇಲಾಖೆಯ ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯದ ನಿಮಿತ್ತ ಸಿದ್ದನಹಳ್ಳಿ ಗ್ರಾಮದ ವಾಸಿಗಳಾದ ರಾಮಕೃಷ್ಣಪ್ಪ ರವರ ಹತ್ತು ಕುಟುಂಬಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ದನಹಳ್ಳಿ ಗ್ರಾಮದ ಬಳಿ ಕಾಮಗಾರಿ ಕಾರ್ಯ ನಡೆಸುತ್ತಿದ್ದಾಗ, ಚೌಡೇಶ್‌, ತಿಪ್ಪೇಗೌಡ, ಶಶಿಕುಮಾರ್‌ ಮತ್ತು ಶ್ರೀನಿವಾಸ ರವರು ಸದರಿ ಕಾಮಗಾರಿಯನ್ನು ನಿಲ್ಲಿಸು ಅವರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ನಾವು ಬಿಡುವುದಿಲ್ಲವೆಂದು ಹೇಳಿ ವಿದ್ಯುತ್ ಕಂಬವನ್ನು ನಿಲ್ಲಿಸಲು ಅಗೆದಿರುವ ಗುಂಡಿಗಳನ್ನು ಮುಚ್ಚಿಹಾಕಿರುತ್ತಾರೆ. ಇದನ್ನು ದೂರುದಾರರು ಕೇಳಿದಕ್ಕೆ  ಕೈಗಳಿಂದ ಮತ್ತು ಕಬ್ಬಿಣದ ಸಲಾಖೆಯಿಂದ ಹೊಡೆದು ರಕ್ತ ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಲು ಬಿನ್ ಆಂಜನೇಯಪ್ಪ, ಎಂ.ಆರ್. ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರನ್ನು ದಿನಾಂಕ 07.01.2020 ರಂದು ಸಂಜೆ 5.30 ಗಂಟೆಯಲ್ಲಿ  ವಿಜಯ್ ಕುಮಾರ್, ತಿಮ್ಮರಾಯಪ್ಪ, ಲೋಕೇಶ್ ರವರುಗಳು ನಿವೇಶನ ವಿಚಾರದಲ್ಲಿ ಜಗಳ ಮಾಡಿ, ನಂತರ ದಿನಾಂಕ 11.01.2020 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಮಾರಿಕುಪ್ಪಂ ಪೊಲಿಸ್ ಠಾಣೆಯ ಬಳಿಗೆ ಹೋಗಿದ್ದಾಗ, ವಿಜಯ್‌ಕುಮಾರ್‌, ಲೋಕೇಶ್‌, ತಿಮ್ಮರಾಯಪ್ಪ, ಶ್ರೀಕಾಂತ್‌, ಕಾರ್ತಿಕ್‌ ಮತ್ತು ದೀಪಕ್‌ ರವರು ಅಲ್ಲಿಗೆ ಬಂದು ಅಕ್ರಮ ಗುಂಪು ಕಟ್ಟಿಕೊಂಡು ದೂರುದಾರರ ಮೇಲೆ ಜಗಳ ತೆಗೆದು, ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದಿರುತ್ತಾರೆ.

Leave a Reply

Your email address will not be published. Required fields are marked *