ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕು|| ರಾಧ ಬಿನ್ ಗೋವಿಂದಪ್ಪ, ಕೊಡಗೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 12-12-2019 ರಂದು ರಾತ್ರಿ 7.45 ಗಂಟೆಯಲ್ಲಿ ತಮ್ಮ ಮುರಗೇಶನೊಂದಿಗೆ ಮನೆಯಲ್ಲಿದ್ದಾಗ, ಮಂಜುನಾಥ, ನಾಗಮ್ಮ ಮತ್ತು ಹನುಮಂತಪ್ಪ ರವರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಹಣದ ವಿಚಾರದಲ್ಲಿ ಜಗಳ ಮಾಡಿ, ಕೈಗಳಿಂದ ಮತ್ತು ಕೋಲಿನಿಂದ ಹೊಡೆದು ಗಾಯಗಳುಂಟುಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಜ ಬಿನ್ ಜೇಮ್ಸ್, ಗಾಂಧಿನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ. 12.12.2019 ರಂದು ಸಂಜೆ 6.30 ಗಂಟೆಯಲ್ಲಿ ಮನೆಯಲ್ಲಿದ್ದಾಗ, ಅಜೀತ್ ಎಂಬಾತನು ಮನೆ ಬಳಿ ವಿನಾಕರಣ ಕೆಟ್ಟ ಮಾತುಗಳಿಂದ ಬೈಯುತ್ತಿದ್ದು, ಇದನ್ನು ದೂರುದಾರರ ಹೆಂಡತಿ ಶ್ರೀಮತಿ. ರತ್ನ ರವರು ಕೇಳಿದಾಗ, ಇಬ್ಬರ ಮೇಲೆ ವಿನಾಕಾರಣ ಗಲಾಟೆ ಮಾಡಿ, ಕೈಗಳಿಂದ ಮತ್ತು ಇಟ್ಟಿಗೆ ಕಲ್ಲಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿದ್ದು, ರಾಕೇಶ್ ಎಂಬುವರು ದೂರುದಾರರ ಹೆಂಡತಿ ರತ್ನ ರವರಿಗೆ ಕೈಗಳಿಂದ ಮತ್ತು ಇಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.
– ಇತರೆ : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.12.2019 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ದೂರುದಾರರಾದ ಶ್ರೀ ಎನ್.ವಿ ಗೋಪಾಲ್, ಹೆಚ್.ಸಿ 35 ಮತ್ತು ಮಹಿಳಾ ಹೆಚ್ ಸಿ 75 ರವರು ಹೆನ್ರೀಸ್ 1 ನೇ ಲೈನಿನಲ್ಲಿ ಕಡೆ ಗಸ್ತು ಮಾಡುತ್ತಿದ್ದಾಗ, ವೆನ್ನಿಲಾ, ಜಯಂತಿ ಮತ್ತು ಕೋದನಾಯಕಿ ರವರು ಒಬ್ಬರಿಗೊಬ್ಬರು ಕೆಟ್ಟ ಮಾತುಗಳಿಂದ ಬೈದಾಡಿಕೊಂಡು, ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುತ್ತಾ ಜಗಳ ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.