ದಿನದ ಅಪರಾಧಗಳ ಪಕ್ಷಿನೋಟ 13 ನೇ ಆಗಸ್ವ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:12.08.2019 ರಂದು ಸಂಜೆ 5.00 ಗಂಟೆಯಿಂದ ದಿನಾಂಕ: 13.08.2019 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ: 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಅಸ್ಲಂ, ಭಾರತಿಪುರಂ ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 12/08/2019 ರಂದು ಸಂಜೆ 7:00 ಗಂಟೆಗೆ ತನ್ನ ಸ್ನೇಹಿತರಾದ 1. ಶಾಂತ 2. ಶರಣ್ 3. ಪ್ರಭು 4. ಬಬ್ಲು ರವರುಗಳೊಂದಿಗೆ ಅಂಡ್ರಸನ್ ಪೇಟೆಯ ನೂರಿ ಕಾಲೇಜಿನ ಹಿಂಭಾಗ ಕುಳಿತು ಮಾತನಾಡುತ್ತಿದ್ದಾಗ ಆರೋಪಿಗಳಾದ ಪ್ರೇಮ್, ಲಾಲ್ ಹಾಗೂ ಮಂಕಿ ಟೋಪಿಗಳನ್ನು ಹಾಕಿಕೊಂಡಿರುವ 08 ಜನರು ಬಂದು ಅವರಲ್ಲಿ ಪ್ರೇಮ್, ರವರು ದೂರುದಾರರ ತಲೆಯ ಹಿಂಭಾಗ ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿದ್ದು, ನಂತರ ಎಲ್ಲರೂ ಸೇರಿ ಕಾಲುಗಳನ್ನು ಹಗ್ಗದಿಂದ ಹಾಗೂ ಕೈಗಳನ್ನು ಮತ್ತು ಬಾಯಿಯನ್ನು ಬಟ್ಟೆಯಿಂದ ಕಟ್ಟಿಹಾಕಿ ನಂತರ ಪ್ರೇಮ್ ಹಾಗೂ ಲಾಲ್ ಕಲ್ಲುಗಳಿಂದ ಕಾಲುಗಳ ಮೇಲೆ ಹಾಕಿ ನಂತರ ಪ್ರೇಮ್ ರವರು ಒಂದು ಚಾಕುವಿನಿಂದ ಬಲಕಾಲಿನ ಮೊಣಕಾಲಿನ ಹಿಂಭಾಗಕ್ಕೆ ಹಾಗೂ ಎಡಕಾಲಿನ ಮೊಣಕಾಲಿನ ಕೆಳಭಾಗದ ಹಿಂಭಾಗದಲ್ಲಿ ತಿವಿದು ರಕ್ತಗಾಯ ಪಡಿಸಿರುತ್ತಾನೆ, ಆರೋಪಿ ಲಾಲ್ ರವರು ಚಾಕುವಿನಿಂದ ಬಲ ತೋಳಿನ ಮೇಲೆ ಮತ್ತು ಮುಂಗೈ ಮೇಲೆ ಹಾಗೂ ಎಡಗೈ ಮೊಣಕೈನ ಮೇಲೆ ತಿವಿದು ರಕ್ತಗಾಯ ಪಡಿಸಿ ನಂತರ ಒಂದು ಕಲ್ಲಿನಿಂದ ಬಾಯಿಗೆ ಗುದ್ದಿದ್ದು, ಒಂದು ಹಲ್ಲು ಬಿದ್ದು ಹೋಗಿರುತ್ತೆ, ಎರಡು ವರ್ಷಗಳ ಹಿಂದೆ ಆಂಥೋನಿಯನ್ನು ಕೊಲೆ ಮಾಡಿದ್ದೀಯಾ ಎಂತ ಕೆಟ್ಟ ಮಾತುಗಳಿಂದ ಬೈದು ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿ ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.08.2019 ರಂದು ಮದ್ಯಾಹ್ನ ಸುಮಾರು 2.30 ಗಂಟೆಯಲ್ಲಿ ದೂರುದಾರರು ನಾರಾಯಣಪ್ಪ ಬಿನ್ ಗಂಟ್ಲಪ್ಪ, ನೆರ್‍ನಹಳ್ಳಿ, ಡಿಕೆಹಳ್ಳಿ ರವರ ಮನೆಯ ಸಮೀಪ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಐತಾಂಡಹಳ್ಳಿ ಕಡೆಯಿಂದ ಬಂಗಾರಪೇಟೆ ಕಡೆಗೆ ಬರಲು ಬಲ್ಲೇರಾ ಪಿಕಪ್ ವಾಹನ ಸಂಖ್ಯೆ ಕೆಎ ೫೧-ಸಿ-೫೨೬೩ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿರವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯವರು ರಸ್ತೆಯ ಮೇಲೆ ಬಿದ್ದು ರಕ್ತಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *