ದಿನದ ಅಪರಾಧಗಳ ಪಕ್ಷಿನೋಟ 13 ನೇ ಜೂನ್‌ 2019

 

  ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಣೆ ಮಾಡಲು ಅಡ್ಡಿ ಉಂಟು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.12-06-2019 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯಿಂದ ಚಿನ್ನಕೋಟೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ದೂರುದಾರರಾದ ಕೃಷ್ಣಪ್ಪ, ಪಿ.ಡಿ.ಓ. ವಾಸ ರಾಮಪುರ ಗ್ರಾಮ ಮುಳಬಾಗಿಲು ತಾಲ್ಲೂಕು ರವರು ಗ್ರಾಮ ಪಂಚಾಯ್ತಿ  ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಸಾಮಾನ್ಯ ಸಭೆಯನ್ನು ನಡೆಸುತ್ತಿದ್ದಾಗ, ಮಧ್ಯಾಹ್ನ ಸುಮಾರು 12-30 ಗಂಟೆಯಲ್ಲಿ ಆರೋಪಿ-1 ವೆಂಕಟೇಶ್ ಕೆ. ಸುಪ್ರೀಮ್ ಚಿನ್ನಕೋಟೆ ವಾಸಿ ಮತ್ತು ಆರೋಪಿ-2 ಅಮರನಾಥ್ ದೇವಗಾನಹಳ್ಳಿ ವಾಸಿ ರವರು ಏಕಾ ಏಕಿ ಸಭೆಯೊಳಗೆ ಪ್ರವೇಶಿಸಿ ದೂರುದಾರರನ್ನು ಕುರಿತು ನೀನ್ಯಾರು ಮೀಟಿಂಗ್ ಮಾಡುವುದಕ್ಕೆ, ಸಭೆ ನಿಲ್ಲಿಸು, ನೀನು ಸರಿಯಾಗಿ ಕೆಲಸ ಮಾಡಲ್ಲ ಎಂದು ಕೆಟ್ಟಮಾತುಗಳಿಂದ ಬೈದು ಆರೋಪಿ ವೆಂಕಟೇಶ್ ರವರು ದೂರುದಾರರ ಶರ್ಟ್ ಕಾಲರ್ ನ್ನು ಹಿಡಿದು ಕೈ ಮುಷ್ಟಿಯಿಂದ ಗಡ್ಡದ ಬಳಿ ಹೊಡೆದಿರುತ್ತಾನೆ. ಸಾಮಾನ್ಯ ಸಭೆ ನಡೆಯದಂತೆ ತಡೆದು, ದೂರುದಾರರಿಗೆ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸದಂತೆ ಆರೋಪಿಗಳು ಅಡ್ಡಿ ಪಡಿಸಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಣೆ ಮಾಡಲು ಅಡ್ಡಿ ಉಂಟು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12-06-2019 ರಂದು ಸಂಜೆ ಸುಮಾರು 7-45 ಗಂಟೆಗೆ ಕೇಸಿನ ದೂರುದಾರರಾದ ಮಣಿಕಂಟ, ಪೊಲೀಸ್ ಕಾನ್ಸ್‌ಟೇಬಲ್, ಬೇತಮಂಗಲ ಪೊಲೀಸ್ ಠಾಣೆ ಮತ್ತು ರಾಜ್ ಕುಮಾರ್ ಪೊಲೀಸ್ ಕಾನ್ಸ್‌ಟೇಬಲ್‌, ಬೇತಮಂಗಲ ಪೊಲೀಸ್ ಠಾಣೆ ರವರುಗಳು ಸಾದಾ ಉಡುಪಿನಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಮಾನ್ಯ ನ್ಯಾಯಾಧೀಶರ ಆದೇಶದಂತೆ ಕೆ.ಜಿ.ಎಫ್ ನ ಬಾಲಕರ ಬಾಲಮಂದಿರದಲ್ಲಿ ಬಿಟ್ಟು ಬೇತಮಂಗಲಕ್ಕೆ ವಾಪಸ್ಸು ಹೋಗಲು ಆಟೋದಲ್ಲಿ ಕುಳಿತುಕೊಂಡು ಹೊರಡುವಷ್ಟರಲ್ಲಿ ಆರೋಪಿಗಳಾದ ಕಾರ್ತಿಕ್  ಮತ್ತು ಎಬಿನಿಜರ್‌, ಚಾಮರಾಜಪೇಟೆ, ಕೆ.ಜಿ.ಎಫ್ ವಾಸಿಗಳು ದ್ವಿಚಕ್ರ ವಾಹನದಲ್ಲಿ ಆಟೋ ಮುಂದೆ ಬಂದು ಅಡ್ಡ ಹಾಕಿಕೊಂಡು ದೂರುದಾರರ ಮಣಿಕಂಟ ಮತ್ತು ರಾಜಕುಮಾರ್ ರವರನ್ನು ಕುರಿತು ತಮಿಳು ಭಾಷೆಯಲ್ಲಿ ಕೆಟ್ಟಮಾತುಳಿಂದ ಬೈದಾಗ, ದೂರುದಾರರು ನಾವು ಬೇತಮಂಗಲ ಪೊಲೀಸರು, ನಮಗೇಕೆ ಅಡ್ಡ ಹಾಕಿಕೊಂಡಿದ್ದೀರಾ ಎಂದು ಕೇಳುವಷ್ಟರಲ್ಲಿ ಸದರಿ ಇಬ್ಬರು ಆರೋಪಿಗಳು ದೂರುದಾರರನ್ನು ಮತ್ತು ರಾಜ್ ಕುಮಾರ್ ರವರನ್ನು ಕೆಟ್ಟ ಮಾತುಗಳಿಂದ ಬೈಯ್ಯುತ್ತಾ, ನಮ್ಮ ಮೇಲೆ ಕೇಸು ಹಾಕಿ ಜೈಲು ಕಳುಹಿಸುತ್ತೀರ, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಎಂದು ಮಣಿಕಂಟ ರವರ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಎಳೆದಾಡಿ, ದೂರುದಾರರ ಮತ್ತು ರಾಜ್ ಕುಮಾರ್ ರವರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

 

Leave a Reply

Your email address will not be published. Required fields are marked *