ದಿನದ ಅಪರಾಧಗಳ ಪಕ್ಷಿನೋಟ 13 ನೇ ಏಪ್ರಿಲ್‌ 2019

 

 – ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ ಬಿನ್ ಮುನಿರಾಮಪ್ಪ, ಜಣ್ಣಘಟ್ಟ ಗ್ರಾಮ, ಕೋಲಾರ ತಾಲ್ಲೂಕು ರವರು ದಿನಾಂಕ 12-04-2019 ರಂದು ಸಂಜೆ 07-00 ಗಂಟೆಯಲ್ಲಿ ಮಸ್ಕಂ ನಲ್ಲಿರುವ ಶ್ರೀ ಗಂಗಮ್ಮ ದೇವಸ್ಥಾನಕ್ಕೆ ಬಂದಿದ್ದಾಗ, ಸುಸೈಪಾಳ್ಯ ವಾಸಿ ಅರವಿಂದ್ ಎಂಬಾತನು ದೂರುದಾರರನ್ನು ಕರೆದಿದ್ದು, ದೂರುದಾರರು ನೀನು ನನಗೆ ಗೊತ್ತಿಲ್ಲವೆಂದು ಹೇಳಿ ನಿಂತಿದ್ದಾಗ, ಆರೋಪಿಯು ದೂರುದಾರರ ಬಳಿಗೆ ಬಂದು ಕೆಟ್ಟಮಾತುಗಳಿಂದ ಬೈದು, ಕಬ್ಬಿಣದ ರಾಡಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.

 

– ಚುನಾವಣೆ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಲು, ಸಿರಿಕಲ್ಚರಲ್ ಎಕ್ಸ್‌ಟೆಂಷನ್‌ ಆಫೀಸರ್‌, ಬೇತಮಂಗಲ ರವರು ಲೋಕಸಭೆ ಚುನಾವಣೆಯ  ಕೆ.ಜಿ.ಎಫ್ ವಿಧಾನ ಸಭೆ ಕ್ಷೇತ್ರದ ಎಫ್.ಎಸ್.ಟಿ ಸ್ಕಾಡ್ ನ ನಂಬರ್ 1 ರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 12-04-2019 ರಂದು ಬಿಜೆಪಿ ಅಭ್ಯಾರ್ಥಿ ಎಸ್ ಮುನಿಸ್ವಾಮಿ ವಿರುದ್ದ ಆರೋಪಿ ವಿನೋದ್ ಕುಮಾರ್ (ವಕೀಲರು ಕೆವಿ) ಕಳ್ಳಿಕುಪ್ಪ ಗ್ರಾಮ ರವರು ಪೇಸ್ ಬುಕ್ ನಲ್ಲಿ  ಚುನಾವಣೆಯಲ್ಲಿ ಮತಗಳಿಗೆ ದಕ್ಕೆ ಆಗುವಂತೆ ಕಾಮೆಂಟ್ ಮಾಡಿ, ರೌಡಿ ಶೀಟರ್ ಎಂದು ಅವರ ಚರಿತ್ರೆ ಬಗ್ಗೆ ಕಾಮೆಂಟ್ ಮಾಡಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾರೆಂದು ದೂರು.

Leave a Reply

Your email address will not be published. Required fields are marked *