ದಿನದ ಅಪರಾಧಗಳ ಪಕ್ಷಿನೋಟ 13 ನೇ ಮಾರ್ಚ್‌ 2019

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರಭಾವತಿ, ಎಸ್.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ಮಗಳಾದ ಕುಮಾರಿ ಸ್ವಾತಿ, 19 ವರ್ಷ ಎಂಬುವರು  ದಿನಾಂಕ 08-03-2019 ರಂದು ಬೆಳಿಗ್ಗೆ 7-30 ಗಂಟೆಗೆ  ಬಿ.ಇ.ಎಂ.ಎಲ್ ಸಂಯುಕ್ತ ಕಾಲೇಜಿನಲ್ಲಿ ಗ್ರೂಪ್ ಡಿಸ್ಕಷನ್ ಗೆ ಹೋಗಿ ಬರುವುದಾಗಿ ತಿಳಿಸಿ ಹೊದವಳು ವಾಪಸ್ಸು ಮನೆಗೆ ಬರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣ ಪ್ರಕರಣ :  02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಪದ್ಮಾವತಿ, ಬೌರಿಲಾಲ್ ಪೇಟೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ  ಮಗ ಚಂದ್ರು, 40 ವರ್ಷ ರವರು ವಿಪರೀತ ಮದ್ಯಪಾನ ಮಾಡುತ್ತಾ ಹಾಗೂ ತನ್ನ ಹೆಂಡತಿ ಮಕ್ಕಳು ಜೊತೆಯಲ್ಲಿಲ್ಲದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ.12.03.2019 ರಂದು ರಾತ್ರಿ 8-30 ಗಂಟೆಯಲ್ಲಿ ಮಲಗುವ ರೂಮಿನ ಮೇಲ್ಛಾವಣಿಯ ಕಬ್ಬಿಣದ ಹುಕ್ಕಿಗೆ ವೇಲ್ ಬಟ್ಟೆಯಿಂದ ನೇಣು ಹಾಕಿಕೊಂಡು ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣರೆಡ್ಡಿ ಬಿನ್ ಮುನಿರೆಡ್ಡಿ, ಕಲಂಗನಪಲ್ಲಿ ಗ್ರಾಮ, ಚಿತ್ತೂರು ಜಿಲ್ಲೆ ಆಂದ್ರಪ್ರದೇಶ ರವರು   ದಿನಾಂಕ-12-03-2019 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ  ತಮ್ಮ  ಮಾವಿನ ತೋಪಿನಲ್ಲಿ  ಸುತ್ತಾಡುತ್ತಿರುವಾಗ ತೋಪಿನ ಮದ್ಯ ಬಾಗದಲ್ಲಿ ಒಂದು ಮರಕ್ಕೆ ತಮಿಳುನಾಡು ವಾಸಿಯಾದ ಮೂರ್ತಿ ವಯಸ್ಸು 24 ವರ್ಷ ಎಂಬುವರು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *