ದಿನದ ಅಪರಾಧಗಳ ಪಕ್ಷಿನೋಟ 13ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:12.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಕನ್ನಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೊಹಮ್ಮದ್‌ ಇಮ್ರಾನ್‌ ಬಿನ್ ಸಜ್ಜದ್‌ ಪಾಷಾ, ಕೊತ್ತೂರು ಗ್ರಾಮ, ಕೆ.ಜಿ.ಎಫ್‌ ತಾಲ್ಲೂಕು ರವರು  ದಿನಾಂಕ:09.02.2020 ರಂದು ಬೆಳಿಗ್ಗೆ 10-30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಚಿಕ್ಕಮಂಗಳೂರಿಗೆ ಹೋಗಿ, ದಿನಾಂಕ:12.02.2020 ರಂದು ರಾತ್ರಿ 9-00 ಗಂಟೆಗೆ ವಾಪಸ್ ಮನೆಗೆ ಬಂದು ನೋಡಿದಾಗ ಬೀರುಗಳನ್ನು ತೆಗೆದು ಬಟ್ಟೆ ಚೆಲ್ಲಾಪಿಲ್ಲಿಯಾಗಿ  ಕೆಳಗೆ ಹಾಕಿದ್ದು, ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಒಂದು ಕಬ್ಬಿಣದ ಗಡಾರಿಯಿಂದ ಮೀಟಿ ಬಾಗಿಲನ್ನು ತೆಗೆದು ಒಳಗೆ ಹೋಗಿ ಮನೆಯ ಬೀರುವಿನಲ್ಲಿಟ್ಟಿದ್ದ  1,05,000/- ರೂ ಬೆಲೆ ಬಾಳುವ ಬಂಗಾರದ ಒಡವೆಗಳು ಹಾಗೂ ನಗದು ಹಣ 15,000 ರೂಗಳನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಕೃಷ್ಣ ಬಿನ್ ವೆಂಕಟಸ್ವಾಮಿ, ಕದಿರೇಗೌಡನಕೋಟೆ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ:13.02.2020 ರಂದು ಬೆಳಿಗ್ಗೆ 5.45 ಗಂಟೆಯಲ್ಲಿ ಕದಿರೇಗೌಡನ ಕೋಟೆ ವಾಸಿ ಶ್ರೀ ಪ್ರಕಾಶ್ ರವರು ಹೀರೊ ಪ್ಯಾಷನ್ ಪ್ರೋ ದ್ವಿಚಕ್ರವಾಹನ  ನಂ ಕೆ.ಎ – 07 ಇ.ಎ 9723 ರಲ್ಲಿ ಬಂಗಾರಪೇಟೆ ಕಡೆಗೆ ಹೋಗಲು ಘಟ್ಟಕಾಮದೇನಹಳ್ಳಿ ಗ್ರಾಮ ದಾಟಿ ಹೋಗುತ್ತಿರುವಾಗ, ಎದರುಗಡೆಯಿಂದ ಕ್ವಾಲೀಸ್ ಕಾರ್ ನಂ ಕೆ.ಎ.03 – ಎಂ.ಎ 3414 ನ ಚಾಲಕ ಅತಿವೇಗವಾಗಿ ಮತ್ತು ನಿರ್ಲಕ್ಷತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಪ್ರಕಾಶ್ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶ್ ರವರು ಗಾಡಿ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರೇಣುಕಾ ಕೊಂ ನಾರಾಯಣಪ್ಪ, ಅನಿಗಾನಹಳ್ಳಿ ಗ್ರಾಮ, ಮಾಲೂರು ತಾಲ್ಲೂಕು ರವರು ದಿನಾಂಕ 11.02.2020 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಕೋಲಾರದಿಂದ ಬಂಗಾರಪೇಟೆ ಕಡೆಗೆ ಬರಲು ಅವರ ದೊಡ್ಡಪ್ಪ ನಾರಾಯಣಪ್ಪ ರವರ ದ್ವಿಚಕ್ರ ವಾಹನ ಹೆವಿ ಡ್ಯೂಟಿ ಸಂಖ್ಯೆ ಕೆಎ-03-ಇ-7469 ರಲ್ಲಿ  ಹಿಂಬದಿಯಲ್ಲಿ ಕುಳಿತುಕೊಂಡಿದ್ದು, ನಾರಾಯಣಪ್ಪ ರವರು ಸದರಿ ದ್ವಿಚಿಕ್ರ ವಾಹನವನ್ನು ಚಲಾಯಿಸಿಕೊಂಡು ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆ ಹಂಚಾಳ ಗೇಟ್ ಸಮೀಪ ಬರುತ್ತಿದ್ದಾಗ, ಕೋಲಾರ ಕಡೆಯಿಂದ ಗ್ರಾಂಡ್ ಐ10 ಕಾರ್ ಸಂಖ್ಯೆ ಕೆಎ-02-ಎಂಎಲ್-8516 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣಪ್ಪ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ದೂರುದಾರರು ಮತ್ತು ನಾರಾಯಣಪ್ಪ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪುಷ್ಪಲತಾ ಕೊಂ ಹರಿನಾಥರೆಡ್ಡಿ, ಪೆದ್ದಬರನೇಪಲ್ಲಿ ಗ್ರಾಮ, ವಿ.ಕೋಟ ಮಂಡಲ್‌, ಆಂದ್ರಪ್ರದೇಶ ರವರು ದಿನಾಂಕ 12.02.2020 ರಂದು ಬೆಳಿಗ್ಗೆ 9.00   ಗಂಟೆಗೆ   ತನ್ನ  ಅಕ್ಕ ಭಾರತಮ್ಮ  ರವರೊಂದಿಗೆ  ರಾಜಪೇಟೆ  ರಸ್ತೆಯಲ್ಲಿರುವ  ಪವನ್‌ಕುಮಾರ್‌ ರವರ ಮನೆಯಲ್ಲಿದ್ದ ದೂರುದಾರರ ಅತ್ತೆ ಕಾಂತಮ್ಮ   ರವರನ್ನು ಜಮೀನು ವಿಚಾರದ ಬಗ್ಗೆ ಕೇಳಲು ಹೋದಾಗ ಪವನ್‌ಕುಮಾರ್‌  ಏಕಾಏಕಿ ದೂರುದಾರರನ್ನು  ಕೆಟ್ಟ  ಮಾತುಗಳಿಂದ ಬೈದು “ ನಿಮಗೆ ಕೊಟ್ಟಿರುವ  ಜಮೀನು ಕೊಡುವುದಿಲ್ಲ, ನಿನ್ನ  ಕೈಯಲ್ಲಿ  ಏನಾಗುತ್ತೋ ಅದನ್ನು ಮಾಡಿಕೋ” ಎಂದು ಒಂದು ದೊಣ್ಣೆಯಿಂದ ಹೊಡೆದು, ಪ್ರಾಣ ಬೆದರಿಕೆ  ಹಾಕಿರುತ್ತಾನೆ.

 

 

Leave a Reply

Your email address will not be published. Required fields are marked *