ದಿನದ ಅಪರಾಧಗಳ ಪಕ್ಷಿನೋಟ 13ನೇ ಸೆಪ್ಟೆಂಬರ್‌ 2019

 – ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಮುನಿಯಪ್ಪ, ಗುಟ್ಟೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 12.09.2019 ರಂದು ರಾತ್ರಿ 7-00 ಗಂಟೆಗೆ  ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08 ಎಕ್ಸ್-8203 ರಲ್ಲಿ ಮಗ ಸುಬ್ರಮಣಿ ರವರೊಂದಿಗೆ ಹಿಂಬದಿಯಲ್ಲಿ ಕುಳಿತುಕೊಂಡು ಆರನೇ ಮೈಲಿಯ ತಿರುವಿನ ಬಳಿ ಹೋಗುತ್ತಿದ್ದಾಗ, ಬಂಗಾರಪೆಟೆಯ ಕಡೆಯಿಂದ ಕೆ.ಎ.40-6503 ಷೇರ್ ಆಟೋವಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗ್ರತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ, ದೂರುದಾರರು ಮತ್ತು ಆತನ ಮಗ ಸುಬ್ರಮಣಿ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ ಇಬ್ಬರಿಗೂ ರಕ್ತಗಾಯಗಳಾಗಿರುತ್ತೆ.

– ಇತರೆ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಸ್‌.ಸಿ/ಎಸ್‌.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ 3 ತಿಂಗಳ ಹಿಂದೆ ಈ ಕೇಸಿ ಆರೋಪಿ 1 ಸೋಮಶೇಖರ್ ರೆಡ್ಡಿ, ಸಕ್ಕನಹಳ್ಳಿ ಗ್ರಾಮ ರವರು ಸಕ್ಕನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿಸಿದ್ದು, ಕೆಲಸ ಮಾಡಿಸಿದ ಸ್ಥಳದಲ್ಲಿ ಸಿಕ್ಕಿದ ಕಲ್ಲುಗಳು ಮತ್ತು ಕಲ್ಲು ಚಪ್ಪಡಿಗಳನ್ನು ಪಂಚಾಯ್ತಿಗೆ ನೀಡದೇ ಆತನೇ ಬಳಿಸಿಕೊಂಡು ಕಳಪೆ ಕಾಮಗಾರಿ ಮಾಡಿರುತ್ತಾನೆ. ಗ್ರಾಮದಲ್ಲಿ ಬಡವರಿಗೆ ಜಾಭ್ ಕಾರ್ಡ್ ವಿತರಿಸದೇ ಬೆಂಗಳೂರಿನಲ್ಲಿ ಅವರ ಸಂಬಂದಿಕರಿಗೆ ಜಾಭ್ ಕಾರ್ಡ್ ವಿತರಿಸಿರುತ್ತಾನೆ. ಕೂಲಿಯವರನ್ನು ಬಳಸಿಕೊಳ್ಳದೇ ಜೆ.ಸಿ.ಬಿ ಮೂಲಕ ಕೆಲಸ ಮಾಡಿರುತ್ತಾನೆ. ಇದನ್ನು ಈ ಕೇಸಿನ ದೂರುದಾರರಾದ ಕುಪೇಂದ್ರ, ಸಕ್ಕನಹಳ್ಳಿ ಗ್ರಾಮ  ಕೇಳಿದ್ದಕ್ಕೆ ಆರೋಪಿ ಗಲಾಟೆ ಮಾಡಿರುತ್ತಾನೆ.  ದಿನಾಂಕ 10.09.2019 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ದೂರುದಾರರು ಅವರ ಮನೆಯ ಬಳಿ ವಾಕ್ ಮಾಡುತ್ತಿರುವಾಗ ಅರೋಪಿಗಳಾದ ಸೋಮಶೇಕರ್ ರೆಡ್ಡಿ, ಸಂತೋಷರೆಡ್ಡಿ, ಬಾಬು ರೆಡ್ಡಿ, ಮತ್ತು ಮಂಜುಳಾ ರವರುಗಳು ದೂರುದಾರರ ಮನೆಯ ಬಳಿ ಬಂದು ನಡು ರಸ್ತೆಯಲ್ಲಿ ನಿಂತು ಕಾಮಗಾರಿ ನಡೆಯುವ ಸ್ಥಳಕ್ಕೆ ಯಾಕೆ ಬಂದಿದ್ದು ನಿನ್ನದು ಏನು ಕೆಲಸ ಎಂದು ಕೆಟ್ಟ ಮಾತುಗಳಿಂದ ಬೈದು, ಜಾತಿ ನಿಂದನೆ ಮಾಡಿ ಗಲಾಟೆ ಮಾಡಿ ಲಾಂಗ್ ಮಚ್ಚನ್ನು ತೆಗೆದುಕೊಂಡು ಕೊಲೆ ಬೆದರಿಕೆ ಹಾಕಿರುತ್ತಾರೆ.

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂತೋಷ್ ಬಿನ್ ಶ್ರೀರಾಮರೆಡ್ಡಿ, ಸೋನೆಪಲ್ಲಿ ಗ್ರಾಮ, ಕೆ.ಜಿಎಫ್ ತಾಲ್ಲೂ ರವರು ದಿನಾಂಕ 07.09.2019  ರಂದು ರಾತ್ರಿ 8.30  ಗಂಟೆಯಲ್ಲಿ ಜಯರಾಮಪ್ದ  ರವರ  ಮನೆ ಬಳಿ   ಗಲಾಟೆಯಾಗುತ್ತಿದ್ದು, ಅಲ್ಲಿ ನಿಂತಿದ್ದಾಗ ಪದ್ಮನಾಭರೆಡ್ಡಿ, ಆನಂದರೆಡ್ಡಿ ಮತ್ತು ಮದನ್ ರೆಡ್ಡಿ   ರವರು ದೂರುದಾರರ ಬಳಿ ಬಂದು  ಜಗಳ ಮಾಡಿ, ಕೆಟ್ಟ  ಮಾತುಗಳಿಂದ ಬೈದು,  ಕೈಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಕೊಡ್ಯಪ್ಪ, ಬೊಗ್ಗಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ರಾಜೇಶ್ವರಿ, 19 ವರ್ಷ ರವರು ದಿನಾಂಕ 31.08.2019 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸನ್ ಬಿನ್ ಸುಬ್ರಮಣಿ, ಪೈಪ್ ಲೈನ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಹೆಂಡತಿ ಕಲೈವಾಣಿ, 35 ವರ್ಷ ರವರು ದಿನಾಂಕ. 11.09.2019 ರಂದು ಸಂಜೆ 7.00 ಗಂಟೆಗೆ ಮಾರುಕಟ್ಟೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *