ದಿನದ ಅಪರಾಧಗಳ ಪಕ್ಷಿನೋಟ 13ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 12.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರಾದ ಶಂಗಲಮ್ಮ, ದೋಣಿಮೊಡಗು ಗ್ರಾಮ ರವರ ಮಗನಾದ ಚಂದ್ರಪ್ಪ, ವಯಸ್ಸು 28 ವರ್ಷ ರವರು ಬುದ್ದಿ ಮಾಂದ್ಯರಾಗಿದ್ದು ಆಗಾಗ ಮನೆ ಬಿಟ್ಟು ಹೋಗಿ ವಾಪಸ್ ಬರುತ್ತಿದ್ದು ದಿನಾಂಕ 31.01.2021 ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಚಂದ್ರಪ್ಪ ರವರು ಮನೆಯಿಂದ ಹೊರಗಡೆ ಹೋದವರು ಸಂಜೆ 6.00 ಗಂಟೆ ಆದರೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ  ಶ್ರೀಮತಿ ಮೂರ್ತಮ್ಮ, ಗಾಂಧಿನಗರ, ಕೋಲಾರ ರವರ ಗಂಡ ಎಲ್. ನಾಗೇಶ್, ೩೬ ವರ್ಷ ರವರು  ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಪ್ಲಂಬಿಂಗ್ ಕೆಲಸಕ್ಕೆ ಗಾಂದಿನಗರದಿಂದ ಬೇರೆ ಗ್ರಾಮ ಮತ್ತು ಇತರೇ ಕಡೆಗಳಿಗೆ  ಹೋಗುತ್ತಿದ್ದರು.  ಈಗಿರುವಲ್ಲಿ ತನ್ನ ಗಂಡ ಸುಮಾರು 2 ತಿಂಗಳಿಂದ ಕೋಲಾರ ತಾಲ್ಲೂಕು ವಡಗೂರು ಗ್ರಾಮದ  ಹರೀಶ್ ಗೌಡ ರವರ  ಬೇತಮಂಗಲ ಹೋಬಳಿಗೆ ಸೇರಿದ  ತಂಬಾರ್ಲಹಳ್ಳಿ ಗ್ರಾಮದಲ್ಲಿರುವ ಹರೀಶ್ ಗೌಡ   ಪೌಲ್ಟ್ರಿ ಪಾರಂನಲ್ಲಿ  ಪ್ಲಮಿಂಗ್ ಕೆಲಸಕ್ಕೆ ಹೋಗುತ್ತಿದ್ದು ಅದೇ ರೀತಿ ದಿನಾಂಕ-11-02-2021 ರಂದು  ಬೆಳಿಗ್ಗೆ 9.00 ಗಂಟೆಗೆ ಕೆಲಸಕ್ಕೆ ಹೋಗಿರುತ್ತಾರೆ.  ಅದೇ ದಿನ ಎಲ್.ನಾಗೇಶ್ ರವರು ಮದ್ಯಾಹ್ನ 3.30 ಗಂಟೆಯಲ್ಲಿ ಹರೀಶ್ ಗೌಡ ರವರ ಪೌಲ್ಟ್ರಿ ಪಾರಂನಲ್ಲಿ ಹೊಸದಾಗಿ ಪೈಪ್ ಹಾಕಲು ನೆಲವನ್ನು ಅಗೆಯುತ್ತಿದ್ದಾಗ ಆಕಸ್ಮಿಕವಾಗಿ ನೆಲದ ಒಳಗೆ  ಹಾಕಿದ್ದ ವಿದ್ಯುತ್ ಕೇಬಲ್ ಗೆ ಗಡಾರೆ ತಗುಲಿದ ಕಾರಣ ಎಲ್.ನಾಗೇಶ್ ರವರಿಗೆ ವಿದ್ಯುತ್ ಸ್ವರ್ಶವಾಗಿದ್ದು ಅವರನ್ನು ಕೂಡಲೇ ಚಿಕಿತ್ಸೆಗಾಗಿ ಕೋಲಾರ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರು  ಪರೀಕ್ಷಿಸಿ ಸದರಿ ನಾಗೇಶ್ ರವರು ವಿದ್ಯುತ್ ಸ್ವರ್ಶದಿಂದ ದಾರಿ ಮದ್ಯೆ  ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *