ದಿನದ ಅಪರಾಧಗಳ ಪಕ್ಷಿನೋಟ 13ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 12.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಶಿಕುಮಾರ್‌ ಬಿನ್ ಸಗಾಯಂ, ಪಾರಾಂಡಹಳ್ಳಿ, ಕೆ.ಜಿ.ಎಫ್ ರವರು ದಿನಾಂಕ:-10.12.2020 ರಂದು ರಾತ್ರಿ 8:30 ಗಂಟೆಯಲ್ಲಿ ಪಿಚ್ಚರ್ಡ್ ರಸ್ತೆಯ 1 ನೇ ಕ್ರಾಸ್ ಹುಲ್ಲು ಮಾರ್ಕೇಟ್ ನ ಬಾರ್ ಮುಂದೆ ಆಟೋ ಚಲಾಯಿಸಿಕೊಂಡು ಬರುತ್ತಿದ್ದಾಗ ಬಾರ್ ಮುಂದೆಯಿಂದ ಅಶ್ವೀನ್ ಎಂಬುವನು ದೂರುದಾರರ ಆಟೋ ನಿಲ್ಲಿಸಿದ್ದು, ದೂರುದಾರರು ಬಾಡಿಗೆದಾರರೆಂದು ತಿಳಿದು ಆಟೋ ನಿಲ್ಲಿಸಿ ಅಶ್ವಿನ್‌ ಬಳಿ ಹೋದಾಗ ಅಶೋಕನಗರದ ಕಡೆ ಬಾಡಿಗೆಗೆ ಬರುವಂತೆ ಕೇಳಿದ್ದು, ದೂರುದಾರರು ಆ ಕಡೆ ಬರುವುದಿಲ್ಲವೆಂದು ಹೇಳಿದ್ದರಿಂದ ಅಶ್ವಿನ್‌  ದೂರುದಾರರ ಮೇಲೆ ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು, ಖಾಲಿ ಬಿಯರ್ ಬಾಟಲ್ ನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *