ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 12.11.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 13.11.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ಆರ್, ಆಂಜನೇಯರೆಡ್ಡಿ,  ಎನ್. ಯಲುವಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ಮಾವ ವಿ.ರೆಡ್ಡಪ್ಪ, ಜಿ.ಮಾರಾಂಡಹಳ್ಳಿ. ಮುಳಬಾಗಿಲು ರವರು  ದಿನಾಂಕ: 11.11.2020 ರಂದು ಮದ್ಯಾನ 3.30 ಗಂಟೆಯಲ್ಲಿ ಬೇತಮಂಗಲದ ಬಳಿ ಹೋಗುತ್ತಿದ್ದಾಗ ಪಕ್ಕದಲ್ಲಿ ಹೋಗುತ್ತಿದ್ದ ಟ್ಯಾಕ್ಷರ್ ಸಂಖ್ಯೆ ಕೆ.ಎ-08-ಟಿ-5199 ರಲ್ಲಿ ಟ್ಯಾಕ್ಷರ್ ಚಾಲಕ ದಿಡೀರ್  ಬಲಗಡೆ ತಿರುಗಿದಾಗ ಪಿರ್‍ಯಾದಿಯ ಮಾವ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದು ಪರಿಣಾಮ ವಿ.ರೆಡ್ಡಪ್ಪ ರವರ ಎಡಕಾಲಿಗೆ ರಕ್ತಗಾಯವಾಗಿರುತ್ತೆ.

ಅಸ್ವಾಭಾವಿಕ ಮರಣ ಪ್ರಕರಣ01

ಕಾಮಸಮುದ್ರ ಪೊಲೀಸ್ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಗೋಪಾಲಪ್ಪ, ಬೊಯಿನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಮಂಜುನಾಥ, ೩೫ ವರ್ಷ ರವರಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಮತ್ತು ನಾಟಿ ಔಷಧಿ ಕೊಡಿಸಿದ್ದರು ¸ಸಹ  ಹೊಟ್ಟೆ ನೋವು ಗುಣಮುಖವಾಗದೆ ಇದ್ದು,, ಮೃತನು  ಹೊಟ್ಟೆ ನೋವಿನ ಬಾದೆ ತಳಲಾರದೆ, ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 11.11.2020 ರಂದು ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆ ಮದ್ಯೆ ಮನೆಯಲ್ಲಿ ಪ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ.

Leave a Reply

Your email address will not be published. Required fields are marked *