ದಿನದ ಅಪರಾಧಗಳ ಪಕ್ಷಿನೋಟ 13ನೇ ಅಕ್ಟೋಬರ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 12.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 02.10.2020 ರಂದು ಬೆಳಿಗ್ಗೆ ಪಿರ್‍ಯಾದಿದಾರರಾದ  ಕೋದಂಡಪಾಣಿ, ಸುಮತಿನಗರ, ರಾಬರ್ಟ್‌‌ಸನ್‌ಪೇಟೆ ರವರು ದ್ವಿಚಕ್ರ ವಾಹನ HERO SPLENDOR PRO CAST ಸಂಖ್ಯೆ  KA-08-Q-9445 ನ್ನು  ರಾತ್ರಿ 8.00 ಗಂಟೆಗೆ ಮನೆಯ ಹತ್ತಿರ ನಿಲ್ಲಿಸಿ ಬೀಗ ಹಾಕಿಕೊಂಡು ಮನೆಯೊಳಗೆ ಹೋಗಿ, ನಂತರ ದಿನಾಂಕ 03.10.2020 ರಂದು ಬೆಳಿಗ್ಗೆ  06.30 ಗಂಟೆಗೆ ಬಂದು ವಾಹನವನ್ನು  ನೋಡಲಾಗಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ವಾಹನದ ENGINE NO, HA10ELCHJ04876 CHASSIS NO- MBLHA10ASCHJ04540  ಆಗಿರುತ್ತೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 11.10.2020 ರಂದು ಸಂಜೆ 4.15 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ರಾಘುರಾಮ, ನಂದಂಬಲ್ಲಿ ಗ್ರಾಮ ಕೋಲಾರ ರವರು  ಬಂಗಾರಪೇಟೆ ಕಡೆಯಿಂದ ನಂದಂಬಳ್ಳಿ ಗ್ರಾಮಕ್ಕೆ ಹೋಗಲು ದ್ವಿಚಕ್ರ ವಾಹನ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-07-ಇಎ-5713 ರ ಹಿಂಬದಿಯಲ್ಲಿ ತನ್ನ ಹೆಂಡತಿಯವರಾದ ಮಂಜುಳ ಎಂಬುವರನ್ನು ಕುಳ್ಳರಿಸಿಕೊಂಡು ಯಳಬುರ್ಗಿ ಗ್ರಾಮದ ಸಮೀಪ ಥಾರ್ ರಸ್ತೆಯಲ್ಲಿ ಪಿರ್ಯಾದಿದಾರರು ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಎದುರುಗಡೆಯಿಂದ ದ್ವಿಚಕ್ರ ವಾಹನ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-08-ಆರ್-8137 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪ್ರಯುಕ್ತ ಪಿರ್ಯಾದಿ ಹಾಗೂ ಅವರ ಹೆಂಡತಿಯಾದ ಮಂಜುಳ ಇಬ್ಬರೂ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ, ಪಿರ್ಯಾದಿಗೆ ಎಡಗಾಲಿಗೆ ರಕ್ತಗಾಯ, ಬಲಗಾಲಿನ ಇಮ್ಮಡಿಗೆ ತರಚಿದ ಗಾಯವಾಗಿರುತ್ತದೆ. ಮಂಜುಳ ರವರಿಗೆ ತೊಡೆಗೆ ತರಚಿದ ಗಾಯವಾಗಿರುತ್ತದೆ. ಆರೋಪಿಯು ಅಪಘಾತಪಡಿಸಿ, ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

 

– ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಕುಮಾರ್‌ ಬಿನ್ ಗೋಪಾಲಪ್ಪ, ಬೂದಿಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮ ಶ್ರೀರಾಮ್, 33 ವರ್ಷ ರವರು ಒಂದೂವರೆ ವರ್ಷದ ಹಿಂದೆ ಆಟೋವಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂಗಾರಪೇಟೆ ಕಡೆಯಿಂದ ಬೂದಿಕೋಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಪಘಾತವಾಗಿ, ಒಬ್ಬರು ಮೃತಪಟ್ಟಿದ್ದು, ಶ್ರೀರಾಮ್ ರವರ ವಿರುದ್ದ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ  ನಡೆಯುತ್ತಿದ್ದು,  ಪ್ರಕರಣವು ಏನಾಗುತ್ತೋ ಎಂದು ಭಯಪಟ್ಟು ದಿನಾಂಕ 12.10.2020 ರಂದು ಬೆಳಿಗ್ಗೆ 8.00 ಗಂಟೆಯಿಂದ ಮದ್ಯಾಹ್ನ 2.00 ಗಂಟೆ ಮಧ್ಯೆ ಬೂದಿಕೋಟೆಯಿಂದ ಕಾರಮಾನಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಸಪ್ಪಲಮ್ಮ ದೇವಸ್ಥಾನದ ಹಿಂಭಾಗ ಹುಣಸೆಮರದ ಕೊಂಬೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *