ದಿನದ ಅಪರಾಧಗಳ ಪಕ್ಷಿನೋಟ 13ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  12.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಸ್ವಾಭಾವಿಕ ಮರಣ ಪ್ರಕರಣ : 04

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಜಯಪ್ಪ, ಕುವೆಂಪುನಗರ, ದಾಸರಹೊಸಹಳ್ಳಿ ರವರ ತಾಯಿ ನಾಗಮ್ಮ, 80 ವರ್ಷ ರವರ ಎರಡೂ ಮೊಣಕಾಲಿನ ಚಿಪ್ಪುಗಳು ಸವೆದುಹೋಗಿದ್ದು, ವೈದ್ಯರು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ.12-08-2020 ರಂದು ಬೆಳಿಗ್ಗೆ 5-30 ಗಂಟೆಯಿಂದ 8-30 ಗಂಟೆಯ ಮದ್ಯೆ ಮನೆಯ ಮಹಡಿಯ ಮೇಲೆ ಗ್ರಿಲ್ ಬಾಗಿಲಿಗೆ ಸೀರೆಯಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಪ್ರಭಾವತಿ ಬಿನ್ ವೆಂಕಟರಾಮಪ್ಪ, ಚಿಂತಗುಮ್ಮನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ವೆಂಕಟರಾಮಪ್ಪ ಬಿನ್ ಲೇಟ್ ವೆಂಕಟೇಶಪ್ಪ, 45 ವರ್ಷ ರವರು ಮಾನಸಿಕ ಅಸ್ವಸ್ಥನಾಗಿದ್ದು, ದಿನಾಂಕ 11.08.2020 ರ ರಾತ್ರಿ 8.30 ಗಂಟೆಯಿಂದ ದಿನಾಂಕ 12.08.2020 ರ ಬೆಳಿಗ್ಗೆ 6.30 ಗಂಟೆಯ ಮಧ್ಯೆ ಕುರಿಗಳು ಕಟ್ಟಿ ಹಾಕುವ ಶೆಡ್ ನಲ್ಲಿ ನೈಲಾನ್ ಹಗ್ಗದಿಂದ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ದೂರುದಾರರಾದ ಶ್ರೀಮತಿ. ಶಾಂತಾಬಾಯಿ, ದೊಡ್ಡಪನ್ನಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡನಾದ ಧರ್ಮೋಜಿರಾವ್ ಬಿನ್ ಲೇಟ್ ಸಂತೋಜಿರಾವ್, 55 ವರ್ಷ ರವರು ದಿನಾಂಕ 11.08.2020 ರಂದು 9.00 ಗಂಟೆಗೆ ಜಮೀನಿನಲ್ಲಿರುವ ಶೆಡ್ ಗೆ ಹೋಗುತ್ತಿದ್ದಾಗ, ಧರ್ಮೋಜಿರಾವ್ ರವರಿಗೆ ಆನೆಗಳು ತುಳಿದು  ಮೃತಪಟ್ಟಿರುತ್ತಾರೆ.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವ ಬಿನ್ ಮಾಣಿಕ್ಯಂ, ಉರಿಗಾಂಪೇಟೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗನಾದ ಸೂರ್ಯ, 22 ವರ್ಷ ರವರು ಮದ್ಯವ್ಯಸನಿಯಾಗಿದ್ದು, ಯಾವುದೇ ಕೆಲಸ ಮಾಡಲು ಶಕ್ತನಿಲ್ಲದೆ ಹಾಗೂ ಕುಡಿಯಲು ಹಣ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ. 12.08.2020 ರಂದು ಮದ್ಯಾಹ್ನ 1.30 ಗಂಟೆಗೆ ಸೂರ್ಯ ರವರು ಬೆಡ್ ರೂಮ್ ನ ಮೇಲ್ಚಾವಣಿಗೆ ಅಳವಡಿಸಿದ್ದ ಫ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *