ದಿನದ ಅಪರಾಧಗಳ ಪಕ್ಷಿನೋಟ 13ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 12.05.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 – ರಸ್ತೆ ಅಪಘಾತಗಳು : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ್ ಬಿನ್ ಚಂದ್ರ ಶೇಖರ್, 36 ವರ್ಷ, ವಾಸ ನಂ. 93, ಎಲೆಕ್ಟ್ರಿಕಲ್ ಕಾಲೋನಿ, ಉರಿಗಾಂ ಪೋಸ್ಟ್, ಕೆ.ಜಿ.ಎಫ್ ರವರು ದಿನಾಂಕ:12.05.2020 ರಂದು ಸಂಜೆ 7.00 ಗಂಟೆಗೆ ಸ್ಮಿತ್ ರಸ್ತೆಯಲ್ಲಿ ಡಿ.ಎ.ಆರ್ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಪಲ್ಸರ್   ದ್ವಿ ಚಕ್ರವಾಹನ ಕೆ.ಎ-02-ಜಿ-3062 ರ ಸವಾರ ಕೃಷ್ಣಪ್ಪ ರವರು ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ದೂರುದಾರರಿಗೆ ಮತ್ತು ದ್ವಿಚಕ್ರವಾಹನ ಸವಾರ ಕೃಷ್ಣಪ್ಪ  ರವರಿಗೆ ರಕ್ತಗಾಯಗಳಾಗಿರುತ್ತದೆ.

– ಇತರೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯ ತೆಡ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶಿಲ್ಪ ಕೊಂ ಮುರಳೀಧರ, ಕಾಮದಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು ಮತ್ತು ಆಕೆಯ ಗಂಡ ಮುರಳಿಧರ ರವರು ದಿನಾಂಕ 12.05.2020 ರಂದು ಬೆಳಿಗ್ಗೆ 11.00   ಕಾಮಸಮುದ್ರಂ ಸಂತೆ ಬೀದಿಯಲ್ಲಿರುವ ವಾಟರ್ ಫಿಲ್ಟರ್ ಬಳಿ ಕುಡಿಯುವ ನೀರು ತರಲು ಹೋದಾಗ, ಅಲ್ಲಿ ದಾರಿಗೆ ಅಡ್ಡಲಾಗಿ ಟಾಟಾ ಸುಮೋ ವಾಹನವನ್ನು ಹೇಮಂತ್ ರವರು ನಿಲ್ಲಿಸಿಕೊಂಡಿದ್ದು ದೂರುದಾರರು ಆತನನ್ನು ಕುರಿತು ನಾವು ನೀರು ಹಿಡಿಯಬೇಕು ದಾರಿ ಬಿಡಿ ಎಂತ ಕೇಳಿದಾಗ ಹೇಮಂತ್‌ ರವರು ಲಾಂಗ್ ಮತ್ತು ದೊಣ್ಣೆಯಿಂದ ಹೊಡೆದು, ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *