ದಿನದ ಅಪರಾಧಗಳ ಪಕ್ಷಿನೋಟ 13ನೇ ಏಪ್ರಿಲ್‌ 2020 

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 12.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಇತರೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಲಾಕ್‌ ಡೌನ್‌ ಉಲ್ಲಂಘನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ರಾಜ್ಯದಲ್ಲಿ ಕೋವಿಡ್-19 ಕೋರೋನಾ ವೈರಸ್ ಸಂಬಂಧ ಎಲ್ಲಾ ರೀತಿಯ ಮಧ್ಯವನ್ನು ಸರ್ಕಾರ ನಿಷೇಧ ಮಾಡಿದ್ದರು ಸಹಾ ದಿನಾಂಕ 12.04.2020 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ  ಕೆಂಪಾಪುರದಿಂದ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಹೋಗುವ ಕಾಲು ದಾರಿಯಲ್ಲಿ ಎಜಿಲ್ ಅರಸನ್‌ ಬಿನ್ ಲೇಟ್ ದಾಸ್, ಪ್ರಸಾದ್ @ ಪ್ರಕಾಶ್‌ ಬಿನ್ ಎಳಿಚಪ್ಪನ್‌, ಇಬ್ಬರು ವಾಸ. ಚಾಮರಾಮಪೇಟೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಮತ್ತು ಸಂತೋಷ್‌ ಕುಮಾರ್‌ ಬಿನ್ ಆರೋಗ್ಯದಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್‌ ರವರು ಅಕ್ರಮವಾಗಿ  ಸೇಂದಿಯನ್ನು ಮಾಡುತ್ತಿದ್ದು, ಎ.ಎಸ್.ಐ. ಶ್ರೀ. ರಾಮದಾಸ್‌ ಮತ್ತು ಸಿಬ್ಬಂದಿ ಆರೋಪಿಗಳನ್ನು ಮತ್ತು ಸ್ಥಳದಲ್ಲಿದ್ದ 14 ಲೀಟರ್‌  ಸೇಂದಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *