ದಿನದ ಅಪರಾಧಗಳ ಪಕ್ಷಿನೋಟ 13ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 12.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀಣಿವಾಸಯ್ಯ ಬಿನ್ ಕೃಷ್ಣಪ್ಪ, ಪೊಲೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಜಮೀನಿನೊಳಗೆ ದಿನಾಂಕ 11.03.2020 ರಂದು  ದೂರುದಾರರ ಚಿಕ್ಕತಾತನ ಮಗನಾದ ವೆಂಕಟರಾಮಪ್ಪ ಮತ್ತು ಅವರ ಮಕ್ಕಳಾದ ಹರೀಕೃಷ್ಣ. ಮಂಜುನಾಥ, ನವೀನ್ ರವರು ಅಕ್ರಮ ಪ್ರವೇಶ ಮಾಡಿ, ಟ್ರಾಕ್ಟರ್ ಮುಖಾಂತರ ಜಮೀನನ್ನು ಉಳುಮೆ ಮಾಡಿದ್ದು, ದಿನಾಂಕ 11.03.2020 ಸಂಜೆ 5-00 ಗಂಟೆಗೆ ದೂರುದಾರರು ಜಮೀನಿನ ಬಳಿ ಹೋಗಿ ಕೇಳಿದಕ್ಕೆ ವೆಂಕಟರಾಮಪ್ಪ, ಹರೀಕೃಷ್ಣ. ಮಂಜುನಾಥ, ನವೀನ್ ರವರು  ಕೆಟ್ಟ ಮಾತುಗಳಿಂದ ಬೈದು,  ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರತ್ತದೆ. ದಿನಾಂಕ 12.03.2020 ರಂದು ರಾತ್ರಿ  7.15 ಗಂಟೆಯಲ್ಲಿ  ಸೂಲಿಕುಂಟೆ ಗ್ರಾಮದ ರಾಜೇಶ್ವರಿ @ ಪುಟ್ಟಮ್ಮ ಕೋಂ ನಾರಾಯಣಸ್ವಾಮಿ ಎಂಬುವರು ಅವರ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಮಧ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈಕೆಯನ್ನು ಮತ್ತು ಸ್ಥಳದಲ್ಲಿದ್ದ, Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ 06 ನೀರಿನ ಪಾಕೆಟ್ ಗಳು, ತುಂಬಿರುವ 04 ನೀರಿನ ಪಾಕೆಟ್ ಗಳನ್ನು ಪಿ.ಎಸ್.ಐ ಶ್ರೀ. ಜಗದೀಶ್‌ ರೆಡ್ಡಿ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸಾವಿತ್ರಮ್ಮ ಕೊಂ ನಾರಾಯಣಸ್ವಾಮಿ, ಯಲುವನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ಮಗಳಾದ ಪ್ರೇಮ, 19 ವರ್ಷ ಎಂಬುವರಿಗೆ ಈಗ್ಗೆ ಸುಮಾರು ನಾಲ್ಕು ತಿಂಗಳ ಹಿಂದೆ ಕುಪ್ಪಂ ತಾಲ್ಲೂಕಿನ ವಿಜಲಾಪುರ ಬಳಿಯಿರುವ ಸಿಂಗಸಂದ್ರ ಗ್ರಾಮದ ವರದರಾಜು ಬಿನ್ ರಾಮಮೂರ್ತಿ ಎಂಬುವರೊಂದಿಗೆ ಮದುವೆ ಮಾಡಿದ್ದು, ದಿನಾಂಕ 08.03.2020 ರಂದು ಪ್ರೇಮ ರವರು ಯಲುವಹಳ್ಳಿ ಗ್ರಾಮಕ್ಕೆ ಬಂದಿದ್ದು, ದಿನಾಂಕ 11.03.2020 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *