ದಿನದ ಅಪರಾಧಗಳ ಪಕ್ಷಿನೋಟ 12 ನೇ ಆಗಸ್ವ್‌ 2019

– ಇತರೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ 11.08.2019 ರಂದು ಶ್ರೀಮತಿ ಯಶೋಧಮ್ಮ ಗೃಹ ರಕ್ಷಕ ದಳ ರವರು ಸಂಜೆ ಸುಮಾರು 5.00 ಗಂಟೆಯಲ್ಲಿ ಬಂಗಾರಪೇಟೆ ಬಸ್ ನಿಲ್ದಾಣದ ಸಮೀಪ ಸಮವಸ್ತ್ರದಲ್ಲಿ ಸಂಚಾರಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಆರೋಪಿಗಳಾದ ಸುಮನ್‌ ಮತ್ತು ಸುಬ್ರಮಣೆ , ಚಿಕ್ಕ ಎಳೇಸಂದ್ರ ಗ್ರಾಮ ರವರು ದ್ವಿಚಕ್ರವಾಹನದಲ್ಲಿ ಬಂದು ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವಾಹನವನ್ನು ನಿಲ್ಲಿಸಿದಾಗ, ದೂರುದಾರರು ಇಲ್ಲಿ ವಾಹನಗಳನ್ನು ನಿಲ್ಲಿಸಬಾರದು ಸಂಚಾರಕ್ಕೆ ತೊಂದರೆಯಾಗುತ್ತೆ ವಾಹನವನ್ನು ತೆಗೆಯಿರಿ ಎಂದು ಸೂಚಿಸಿದಾಗ ಆರೋಪಿಗಳು ಏರುಧ್ವನಿಯಲ್ಲಿ ವಾಹನವನ್ನು ತೆಗೆಯುವುದಿಲ್ಲ ಎಂದು ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು ಸಮವಸ್ತ್ರದ ಕಾಲರ್ ಪಟ್ಟಿಯನ್ನು ಹಿಡಿದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *