ದಿನದ ಅಪರಾಧಗಳ ಪಕ್ಷಿನೋಟ 12 ನೇ ಏಪ್ರಿಲ್‌ 2019

 – ಹಲ್ಲೆ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಚಿನ್ನಪ್ಪ, ಉದಯನಗರ, ಪಾರಾಂಡಹಳ್ಳಿ ಅಂಚೆ, ಬಂಗಾರಪೇಟೆ ರವರು ದಿನಾಂಕ 07.04.2019 ರಂದು ಸಂಜೆ 7.00 ಗಂಟೆಯಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ಮಲ್ಲಂಪಲ್ಲಿ ಗ್ರಾಮದ ಶ್ರೀ. ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹೋಗಿದ್ದಾಗ, ಆರೋಪಿಗಳಾದ ಮುರುಳಿ ಮತ್ತು ರತನ್ ಎಂಬುವವರು ಆವಾಚ್ಚ ಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದು, ಆರೋಪಿಗಳಿಬ್ಬರೂ ದೂರುದಾರರ ಸ್ನೇಹಿತನಾದ ಹನುಮಂತಪ್ಪನನ್ನು ನೋಡಿ ಕೆಟ್ಟಮಾತುಗಳಿಂದ ಬೈದಿದ್ದು, ದೂರುದಾರರು ದೊಡ್ಡವರಿಗೆ ಮರ್ಯಾದೆ ಇಲ್ಲವೇ ಎಂದು ಕೇಳಿದ್ದಕ್ಕೆ ಇಬ್ಬರೂ ಜಗಳಕಾದು  ಕೈ ಮತ್ತು ಕಾಲುಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

– ಇತರೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಬಾಲ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯಶ್ರೀನಿವಾಸಲು, ಸೀನಿಯರ್‌ ಆಫೀಸರ್‌, ಫ್ಲೈಯಿಂಗ್‌ ಸ್ಕ್ವಾಡ್‌ ೦೩, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ದಿನಾಂಕ 09-04-2019 ರಂದು ಕಾಮಸಮುದ್ರಂ ಗ್ರಾಮದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಮುನಿಸ್ವಾಮಿ ಪರವಾಗಿ ಬಿ.ಜೆ.ಪಿ. ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ. ಬಿ.ಪಿ ಮುನಿವೆಂಕಟಪ್ಪ ರವರು ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ 10-04-2019 ರಂದು ಪ್ರಕಟವಾಗಿರುವ ಛಾಯಚಿತ್ರದಲ್ಲಿ ಅಪ್ರಾಪ್ತ ಬಾಲಕ ಪಾಲ್ಗೊಂಡಿರುವುದು ಕಂಡು ಬಂದಿರುತ್ತೆಂದು ದೂರು.

Leave a Reply

Your email address will not be published. Required fields are marked *