ದಿನದ ಅಪರಾಧಗಳ ಪಕ್ಷಿನೋಟ 12 ನೇ ಡಿಸೆಂಬರ್ 2018

– ಮೋಸ/ವಂಚನೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮೀ ಕೊಂ ಶ್ರೀನಿವಾಸ್, ಭೋವಿನಗರ, ಬಂಗಾರಪೇಟೆ ರವರ ಮನೆಯ ಬಳಿ ದಿನಾಂಕ: 08/12/2018 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಯಾರೋ ಇಬ್ಬರು ಆಸಾಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ತಾವು ಹಳೇ ಚೈನುಗಳನ್ನು ಪಾಲೀಶ್ ಮಾಡಿಕೊಡುವುದಾಗಿ ಹೇಳಿದಾಗ ದೂರುದಾರರು ಕಾಲು ಚೈನನ್ನು ನೀಡಿ ಪಾಲೀಶ್ ಮಾಡಿಸಿಕೊಂಡಿದ್ದು, ನಂತರ ಪಕ್ಕದ ಮನೆ ವಾಸಿ ಶ್ರೀಮತಿ.ಚೈತ್ರಾ ಎಂಬುವವರು ಬಂದು  ಕತ್ತಿನಲ್ಲಿದ್ದ 38 ಗ್ರಾಂ ಮಾಂಗಲ್ಯದ ಚೈನನ್ನು ಮತ್ತು ದೂರುದಾರರು ತನ್ನ ಬಳಿ ಇದ್ದ ಸುಮಾರು 42 ಗ್ರಾಂ ಚಿನ್ನದ ಮಾಂಗಲ್ಯ ಚೈನನ್ನು  ಅವರಿಗೆ ಕೊಟ್ಟಿದ್ದು,  ಸದರಿ ಆಸಾಮಿಗಳು ಒಂದು ಕುಕ್ಕರನ್ನು ತೆಗೆದುಕೊಂಡು ಬರಲು ತಿಳಿಸಿ, ಅದರಲ್ಲಿ ಅರಿಶಿನ ಪುಡಿ ಮತ್ತು ಬೇರೆ ಯಾವುದೋ ಪುಡಿಯನ್ನು ಹಾಕಿ ದೂರುದಾರರು ಮತ್ತು ಚೈತ್ರಾ ರವರು ನೀಡಿದ್ದ ಮಾಂಗಲ್ಯ ಸರಗಳನ್ನು ಕುಕ್ಕರ್ನಲ್ಲಿ ಹಾಕಿ ಗ್ಯಾಸ್ ಸ್ಟವ್ ಮೇಲೆ ಕುಕ್ಕರ್ ಇಟ್ಟು ನೀರನ್ನು ಹಾಕಿ ಬಿಸಿ ಮಾಡಿ,  ಹತ್ತು ನಿಮಿಷ ಬಿಟ್ಟು ಕುಕ್ಕರ್ ನ್ನು ತೆಗೆದು ನೋಡಿ ಎಂದು ಸದರಿ ಇಬ್ಬರು ಆಸಾಮಿಗಳು ಹೇಳಿ ಹೊರಟು ಹೋಗಿದ್ದು, ನಂತರ ದೂರುದಾರರು ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಕುಕ್ಕರ್ ನಲ್ಲಿ ಅವರು ಹಾಕಿದ್ದ ಎರಡು ಬಂಗಾರದ ಮಾಂಗಲ್ಯ ಚೈನುಗಳು ಕಾಣಿಸದೆ ಇದ್ದು, ಸದರಿ ಇಬ್ಬರು ಆಸಾಮಿಗಳು ಚೈನುಗಳಿಗೆ ಪಾಲೀಶ್ ಮಾಡಿಕೊಡುತ್ತೇವೆಂದು ನಂಬಿಸಿ ಮೋಸ ಮಾಡಿ ಬಂಗಾರದ ಒಡವೆಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :‍  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಷಣ್ಮುಗ ಬಿನ್ ನಾಗರಾಜಪ್ಪ, ರಾಮಾಪುರ ಗ್ರಾಮ, ಬಂಗಾರಪೇಟೆ ತಾಲ್ಲುಕು ರವರು ದಿನಾಂಕ 10.12.2018 ರಂದು ರಾತ್ರಿ 8.00 ಗಂಟೆಯಲ್ಲಿ ಆತನ ಸ್ನೇಹಿತನಾದ ಮಂಜುನಾಥ, 25 ವರ್ಷ, ತ್ಯಾರನಹಳ್ಳಿ ಗ್ರಾಮ ಎಂಬುವರ  ಟಿವಿಎಸ್ ಸ್ಟಾರ್ ಸಿಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಯು-5013 ರ ಹಿಂಬದಿಯಲ್ಲಿ ಕುಳಿತುಕೊಂಡು,ನಾಯಕರಹಳ್ಳಿಯಿಂದ ಬಂಗಾರಪೇಟೆಗೆ ಬರಲು  ಯಳಬುರ್ಗಿ ಗ್ರಾಮದ ಬಳಿ ಇರುವ ಮೇಸ್ತ್ರಿ ಶ್ರೀನಿವಾಸ ಎಂಬುವರ ಜಮೀನಿನ ಬಳಿ ಇರುವ ರಸ್ತೆ ತಿರುವು ಬಳಿ ಹೋಗುತ್ತಿರುವಾಗ, ಮಂಜುನಾಥ ವಾಹನವನ್ನು ಅತಿವೇಗ ಮತ್ತು ಅಜಾಗರೂಕೆತಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಂಜುನಾಥ ಮತ್ತು ದೂರುದಾರರಿಗೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಂಜುನಾಥ ರವರು ಮಾರ್ಗಮದ್ಯೆ ಮೃತಪಟ್ಟಿರುತ್ತಾರೆ.

– ಅಸ್ವಾಬಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ಮುನಿಶಾಮಪ್ಪ, ದೆಬ್ಬನಹಳ್ಳಿ ಗ್ರಾಮ,  ಬಂಗಾರಪೇಟೆ ತಾಲ್ಲುಕು ರವರ ಮಗನಾದ ಅಶೋಕ, 30 ವರ್ಷ ರವರಿಗೆ ಸುಮಾರು ಆರು ತಿಂಗಳಿನಿಂದ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆ ಕೊಡಿಸುತ್ತಿದ್ದರೂ ಸಹ ವಾಸಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 10.12.2018 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 11.12.2018 ರ ಬೆಳಿಗ್ಗೆ 5.45 ಗಂಟೆ ಮದ್ಯೆ ಶೆಟ್ಟಿಕರೆಯ ಬಳಿ  ಕುತ್ತಿಗೆಗೆ ಹಗ್ಗವನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

– ಇತರೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾ ಶ್ರೀ. ತಾಸೀರ್‌, ಪೊಲೀಸ್ ಕಾನ್ಸ್‌ಟೆಬಲ್‌, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ದಿನಾಂಕ 10.12.2018 ರಂದು ರಾತ್ರಿ ಠಾಣಾ ಪಹರೆ ಕರ್ತವ್ಯದಲ್ಲಿದ್ದು, ರಾತ್ರಿ 3.30 ಗಂಟೆಯಲ್ಲಿ ಗಸ್ತಿನಲ್ಲಿದ್ದ ಶ್ರೀ ಪ್ರಕಾಶ್ ರೆಡ್ಡಿ, ಎ.ಎಸ್.ಐ ಹಾಗೂ ಸಿಬ್ಬಂದಿಯವರು ಕ್ಲೇಮೆಂಟ್‌ ಜೇಮ್ಸ್‌, ೨ ಸಾ ಮಿಲ್ ಲೈನ್, ಮಾರಿಕುಪ್ಪಂ ಮತ್ತು ಸೋನುಸುದೀಪ್‌, ಚಾಮರಾಜ್‌ಪೇಟೆ, ಆಂಡ್ರಸನ್‌ಪೇಟೆ ರವರು ನೂರಿ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಿಕೊಳ್ಳುವಾಗ ಪಾನಮತ್ತರಾಗಿ ಕೂಗಾಡುತ್ತಿದ್ದವರನ್ನು ವಿಚಾರಿಸಿದಾಗ ಪ್ರತಿರೋಧಿಸಿ ಬೆದರಿಕೆ ಹಾಕಿದ್ದರಿಂದ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ದೂರುದಾರರು ಅಂಗ ಶೋಧನೆ ಮಾಡಲು ಮುಂದಾದಾಗ ಆರೋಪಿಗಳು ಮುಟ್ಟಬೇಡ ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ದೂರುದಾರರಿಗೆ ಕೈ ಮುಷ್ಠಿಯಿಂದ ಗುದ್ದಿ, ಓಡಲು ಪ್ರಯತ್ನಿಸಿದಾಗ, ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *